ಜಗತ್ತಿನ ಆರ್ಥಿಕತೆಯ ಪರಿಸ್ಥಿತಿಯನ್ನು ಸದೃಢಗೊಳಿಸುವಲ್ಲಿ ವಾಣಿಜ್ಯ ಶಿಕ್ಷಣವು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ವಿಶ್ವದ ಆರ್ಥಿಕತೆಯನ್ನು, ರಾಷ್ಟ್ರೀಯ ಆರ್ಥಿಕತೆಯನ್ನು, ಹಾಗೂ ಸ್ಥಳೀಯ ಸಮಾಜದ ಆರ್ಥಿಕತೆಯನ್ನು ರೂಪಿಸುವಲ್ಲಿ ವಾಣಿಜ್ಯಶಾಸ್ತçದ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ, ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎಂ. ವೆಂಕಟೇಶ್ವರಲು ರವರು ತಿಳಿಸಿದರು. ಅವರು ತುಮಕೂರು ವಿಶ್ವವಿದ್ಯಾನಿಲಯದ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ನೈತಿಕತೆ ಮತ್ತು ಮೌಲ್ಯಗಳು ಬಲಿಷ್ಠವಾಗಿರುವುದರಿಂದ ಹಣದುಬ್ಬರ ಪರಿಣಾಮವು ಭಾರತದ ಆರ್ಥಿಕತೆಯ ಮೇಲೆ ಹೆಚ್ಚಾಗಿ ಪ್ರಭಾವ ಬೀರಿಲ್ಲ. ವಿದ್ಯಾರ್ಥಿಗಳು ಜಾಗತಿಕ ಸಮಸ್ಯೆಯನ್ನು ಅರಿತು ಸಮಕಾಲೀನ ಸಮಸ್ಯೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬೇಕು ಮತ್ತು ಅವುಗಳನ್ನು ನಿವಾರಿಸಬೇಕೆಂದು ತಿಳಿಸಿದರು ಎಂ.ಕಾ. ವಿಭಾಗವು ಅತ್ಯಂತ ಕ್ರೀಯಾಶೀಲವಾಗಿದ್ದು, ಪ್ರಾಧ್ಯಾಪಕರ ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಅನೇಕ ಹೊಸ ವಿಷಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿ ನಿರಂತರವಾಗಿ ಮುಂಚೂಣಿಯಲ್ಲಿದೆ ಎಂದರು.
ಕುಲಸಚಿವರಾದ ಶ್ರೀಮತಿ ನಾಹಿದಾ ಜಮ್ ಜಮ್ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ ಮತ್ತು ಸಮಯ ನಿರ್ವಹಣೆ ಒತ್ತು ಕೊಟ್ಟು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಹೆಚ್. ಪಿ ಸುರೇಶ್ ರವರು ಕಾರ್ಪೋರೇಟ್ ಜಗತ್ತಿನಲ್ಲಿ ವಿದ್ಯಾರ್ಥಿಗಳು ಎದುರಿಸಬಹುದಾದ ಸವಾಲುಗಳು, ಉತ್ತಮ ನಾಯಕತ್ವದ ಲಕ್ಷಣಗಳ ಬಗ್ಗೆ ಕುರಿತು ವಿಸ್ತೃತವಾಗಿ ಮಾತನಾಡಿದರು.
ವಿಭಾಗದ ಮುಖ್ಯಸ್ಥರಾದ ಪ್ರೊ. ಬಿ ಶೇಖರ್ ರವರು ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಹಾಗೂ ಜಾಗತಿಕ ಮತ್ತು ಪ್ರಚಲಿತ ಸಮಸ್ಯೆಗಳ ಮತ್ತು ಆಗೂ-ಹೋಗುಗಳ ಜ್ಞಾನಾರ್ಜನೆಗಾಗಿ, ಮತ್ತು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪೂರಕವಾಗುವಂತೆ ವಿವಿಧ ಸರಣಿ ಉಪನ್ಯಾಸ ಮಾಲೆಯನ್ನು ಏರ್ಪಡಿಸಿದೆ ಎಂದರು.
ಜಾಗತಿಕ ಆರ್ಥಿಕತೆಯನ್ನು ರೂಪಿಸುವಲ್ಲಿ ವಾಣಿಜ್ಯ ಶಿಕ್ಷಣದ ಪಾತ್ರ
Leave a comment
Leave a comment