ತುಮಕೂರು:ಕಾರ್ಮಿಕರ ದುಡಿಮೆಯ ಅವಧಿಯನ್ನು ೧೨ ಗಂಟೆಯಿAದ ೮ ಗಂಟೆಗೆ ಕಡಿತಗೊಳಿಸುವುದು,ಕಾರ್ಮಿಕರ ಕನಿಷ್ಠ ಕೂಲಿಯನ್ನು ೩೧೫೦೦ ರೂಗಳಿಗೆ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ,ಕ್ವಿಟ್ ಇಂಡಿಯಾ ಚಳುವಳಿ ಆರಂಭವಾದ ದಿನವಾದ ಇಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ನಗರದ ಸ್ವಾತಂತ್ರ ಚೌಕದಲ್ಲಿ ಧರಣಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿವತಿಯಿಂದ ಸ್ವಾತಂತ್ರದ ಆಶಯಗಳನ್ನು ಉಳಿಸಲು ಆಗ್ರಹಿಸಿ ಆಯೋಜಿಸಿದ್ದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಿಐಟಿಯು, ಎಐಟಿಯುಸಿ, ಎಐಯುಟಿಯುಸಿ ಸಂಘಟನೆಗಳ ಕಾರ್ಮಿಕರು ಪಾಲ್ಗೊಂಡು ಸರಕಾರ ನಡೆಗಳ ವಿರುದ್ದ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್,ಸ್ವಾತಂತ್ರ ಬಂದು ೭೭ ವರ್ಷಗಳ ನಂತರವೂ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಕ್ವಿಟ್ ಇಂಡಿಯಾ ಚಳವಳಿ ಮಾದರಿ ಹೋರಾಟವನ್ನು ಬಂಡವಾಳ ಶಾಹಿಗಳ ಪರವಾಗಿರುವ ಸರಕಾರಗಳ ವಿರುದ್ದ ಮಾಡಬೇಕಾದ ದುಸ್ಥಿತಿ ಒದಗಿಸುವುದು ದುರದೃಷ್ಟಕರ.ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರಕಾರ ಕೈಗೊಳ್ಳುತ್ತಿರುವ ಕಾರ್ಪೋರೇಟ್ ಪರ ನೀತಿಗಳಿಂದ ಇಡೀ ದೇಶದಲ್ಲಿ ಹಲವಾರು ಹೋರಾಟಗಳಿಂದ ಕಾರ್ಮಿಕರು ಗಳಿಸಿಕೊಂಡು ಹಕ್ಕುಗಳಿಗೆ ಚ್ಯುತಿ ಉಂಟಾಗುತ್ತಿದೆ.ದುಡಿಯುವ ಸಮಯವನ್ನು೮ ಗಂಟೆಯಿAದ ೧೨ ಗಂಟೆಗೆ ಹೆಚ್ಚಿಸಿರುವ ಕೇಂದ್ರ ಸರಕಾರ ಕೂಡಲೇ, ಇದನ್ನು ರದ್ದು ಪಡಿಸಿ, ಹಿಂದಿನAತೆ ದುಡಿಮೆಯ ಅವಧಿಯನ್ನು ಎಂಟು ಗಂಟೆಗೆ ನಿಗಧಿಗೊಳಿಸಬೇಕೆಂದು ಆಗ್ರಹಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ,ಕ್ವಿಟ್ ಇಂಡಿಯಾ ಚಳುವಳಿ

Leave a comment
Leave a comment