ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು.ಕೆಲಸದ ಸಂದರ್ಭದಲ್ಲಿ ಗಾಯಗೊಂಡು ಮೃತಪಟ್ಟ ನೌಕರರಿಗೆ ಪರಿಹಾರ ನೀಡಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಎಐಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಟೌನ್ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಅಕ್ಷರ ದಾಸೋಹ ಬಿಸಿಯೂಟ ತಯಾರಕರು,ಇತ್ತೀಚಗೆ ಸಾಂಬಾರ್ ಪಾತ್ರೆ ಇಳಿಸುವಾಗ ನಡೆದ ಅವಘಡದಲ್ಲಿ ಮೃತಪಟ್ಟ ಮುಂಡಗೋಡದ ಅನ್ನಪೂರ್ಣಮ್ಮ ಅವರ ಕುಟುಂಬಕ್ಕೆ ಪರಿಹಾರವಾಗಿ ೨೫ಲಕ್ಷ ರೂಗಳನ್ನು ನೀಡಬೇಕು.ಹಾಗೆಯೇ ಇದುವರೆಗೂ ಕೆಲಸದ ವೇಳೆ ಅವಘಡಕ್ಕೆ ಈಡಾಗಿ ಮೃತರಾದವರ ಕುಟುಂಬಗಳಿಗೆ ಸರಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ಅಕ್ಷರದಾಸೋಹ ಬಿಸಿಯೂಟ ನೌಕರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಸಂಚಾಲಕ ಕಾಂತರಾಜು,ಕಳೆದ ೨೫ ವರ್ಷಗಳಿಂದ ಅಕ್ಷರ ದಾಸೋಹ ನೌಕರರಿಗೆ ಕನಿಷ್ಠ ವೇತನ ನಿಗಧಿಗೊಳಿ ಸುವಂತೆ ಒತ್ತಾಯಿಸುತ್ತಲೇ ಬಂದಿದ್ದೇವೆ.ಆದರೆ ಇದುವರೆಗೂ ಸರಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಮಾಸಿಕ ೬೫೦೦ ರೂಗಳ ಅತ್ಯಂತ ಕಡಿಮೆ ವೇತನಕ್ಕೆ ಇಡೀ ದಿನ ದುಡಿಯುತಿದ್ದಾರೆ.ಇದರ ಮಧ್ಯೆ ಎಸ್.ಡಿ.ಎಂ.ಸಿ. ಅವರ ಕಿರುಕುಳವೂ ನಿಂತಿಲ್ಲ.ಮುಖ್ಯಮAತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಎಐಟಿಯುಸಿಯ ಆಶ್ವಥನಾರಾಯಣ್ ಮಾತನಾಡಿ,ಅಕ್ಷರ ದಾಸೋಹ ಬಿಸಿಯೂಟ ನೌಕರರು ಬೆಂಕಿ ಅನಾಹುತ, ಮತ್ತಿತರ ಅವಘಡಗಳಿಂದ ಮೃತಪಟ್ಟವರಿಗೆ, ಗಾಯಗೊಂಡವರಿಗೆ ಪರಿಹಾರ ನೀಡಬೇಕೆಂಬುದು ಎಐಟಿಯುಸಿಯ ಆಗ್ರಹವಾಗಿದೆ. ಅಲ್ಲದೆ ಮುಖ್ಯೋಪಾಧ್ಯಾಯ ಮತ್ತು ಎಸ್.ಡಿ.ಎಂ.ಸಿ ಅಧ್ಯಕ್ಷರ ಜಂಟಿ ಖಾತೆ ರದ್ದು ಪಡಿಸಿ, ಈ ಹಿಂದಿನAತೆ ಮುಖ್ಯೋಪಾಧ್ಯಾಯ ಮತ್ತು ಮುಖ್ಯ ಅಡುಗೆಯವರ ಹೆಸರಿನಲ್ಲಿ ಬ್ಯಾಂಕ್ ಖಾತೆ ಮುಂದುವರೆಸಬೇಕು.೨೦೨೨-೨೩ನೇ ಸಾಲಿನ ಬಜೆಟ್ನಲ್ಲಿ ಸರಕಾರ ಘೋಷಿಸಿದ್ದ ಒಂದು ಸಾವಿರ ರೂ ವೇತನ ಹೆಚ್ಚಳವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಬಿಸಿಯೂಟ ತಯಾರಕರ ಒತ್ತಾಯವಾಗಿದೆ.ಸರಕಾರ ಕೂಡಲೇ ಇವರ ಬೇಡಿಕೆಗಳನ್ನು ಈಡೇರಿಸ ಬೇಕೆಂದರು.
ಈ ಸಂಬAಧ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಲಾಯಿತು
ಬಿಸಿಯೂಟ ತಯಾರಕರ ಫೆಡರೇಷನ್ ಎಐಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ

Leave a comment
Leave a comment