ಬಾವನತ್ಮಕವಾಗಿ ಹೊಡೆದಾಟಕ್ಕೆ ಪ್ರಚೋದಿಸಿ, ಕಷ್ಟಕ್ಕೆ ದೂಡಿದ ಬಿಜೆಪಿ ಮತ್ತು ಅದರ ನೀತಿಗಳನ್ನು ಹಿಮ್ಮೆಟ್ಟಿಸಿದ ಜನತೆ
ಸೆಂಟರ್ ಆಫ್ ಇಂಡಿಯನ್ ಟ್ರೇಡ್ಯೂನಿಯನ್ಸ್ (ಸಿ.ಐ.ಟಿ.ಯು.) ಪಾವಗಡ ತಾಲ್ಲೂಕು ಸಮಿತಿ ವತಿಯಿಂದ ನಡೆದ ಸಂಘದ ೫೪ನೇ ಸಂಸ್ಥಾಪನಾ ದಿನದ ಅಂಗವಾಗಿ ದ್ವಜಾರೋಹಣ ಮತ್ತು ಸಾರ್ವಜನಿಕ ಕಾಯಕ್ರವನ್ನು ಪಾವಗಢ ಟೌನ್ ಹಳೇ ಎಸ್.ಎಸ್.ಕೆ. ರಸ್ತೆಯಲ್ಲಿರುವ ಕಛೇರಿ ಎದರು ನಡೆಸಲಾಯಿತು. ಈ ಸಂರ್ದರ್ಬದಲ್ಲಿ ಮಾತನಾಡಿದ ರೈತ ಕಾರ್ಮಿಕ ಸಂಘಟಣೆಯ ಮುಖಂಡ ಬಿ.ಉಮೇಶ್ ಇಂದು ದೇಶದಾದ್ಯಂತ ನಡೆಯತ್ತಿರುವ ಸಿಐಟಿಯು ೫೪ನೆಯ ವರ್ಷದ ಕಾರ್ಯಕ್ರಮ ಅತ್ಯಂತ ಮಹತ್ವವಾದುದು ದ್ವನಿಯಿಲ್ಲದವರ ದ್ವನಿಯಾಗಿ ದೇಶದಲ್ಲಿ ಮತ್ತು ರಾಜ್ಯದಲ್ಲಿ ಕ್ರಾಂತಿಕಾರಕ ಪ್ರತಿಭಟನೆಗಳಿಗೆ ನಿಂತರವಾಗಿ ನೇತೃತ್ವ ನೀಡಿತು ಜನಪರ ರಾಜಕೀಯ ನೀತಿಗಳೆ ಜನರ ಕಷ್ಟವನ್ನು ಪರಿಹರಿಸುತ್ತವೆ ಹಾಗೂ ಜನರ ಐಕ್ಯತೆಯೇ ದೇಶದ ಅಭಿವೃದ್ಧಿಯ ಮಂತ್ರ ಎಂದು ಸಾರಿತು. ರಾಜ್ಯದಲ್ಲಿ ಇತ್ತೀಚಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ಪಕ್ಷದ ಗ್ಯಾಂಟಿಗಳಿಗೆ ಜನರು ಮತ ಚಲಾಯಿಸಿದ್ದಾರೆ ಎಂದು ಬಿಜೆಪಿ ಪಕ್ಷ ಜನರನ್ನು ದಾರಿ ತಪ್ಪಿಸುತ್ತಿದೆ. ಬಿಜೆಪಿಯ ಮಿತಿಮೀರಿದ ಭ್ರಷ್ಠಾಚಾರ, ಬೆಲೆ ಏರಿಕೆ, ಕೋಮುದ್ವೇಷ, ಬಾವನತ್ಮಕವಾಗಿ ಹೊಡೆದಾಟಕ್ಕೆ ಜನರನ್ನು ಪ್ರಚೋದಿಸಿ ಕಷ್ಟಕ್ಕೆ ದೂಡಿದ ಬಿಜೆಪಿ ಮತ್ತು ಅದರ ನೀತಿಗಳನ್ನು ಜನತೆ ಹಿಮ್ಮೆಟ್ಟಿಸಿದ್ದಾರೆಂದರು
ಸಿ,ಐ.ಟಿ.ಯು ತಾ/. ಕಾರ್ಯದರ್ಶಿ ನಾಗರಾಜು ಮಾತನಾಡಿ ಆಡಳಿತಕ್ಕೆ ಬಂದಿರುವ ಕಾಂಗ್ರೇಸ್ ಪಕ್ಷ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ ಬರವಸೆಗಳನ್ನು ಈಡೇರಿಸಬೇಕು ಮತು ್ತ ಹಿಂದುಳಿದ ಗಡಿನಾಡಾಗಿರುವ ಪಾವಗಡ ತಾಲ್ಲೂಕನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕೆಂದರು.
ಅಂಗನವಾಡಿ ಸಂಘದ ಕಾರ್ಯದರ್ಶಿ ಶಿವಗಂಗಮ್ಮ ಮಾತನಾಡಿ ದುಡಿಯುವ ಮಹಿಳೆಯರ ರಕ್ಷಣೆ ಮತ್ತು ಅವರ ಹಕ್ಕುಗಳಿಗಾಗಿ ಸಿ.ಐ.ಟಿ.ಯು. ಹೋರಾಡುತ್ತಲೇ ಬಂದಿದೆ ಮಹಿಳೆಯರು ಹೆಚ್ಚು ಹೆಚ್ಚು ಸಂಘಟಿತರಾಗಬೇಕೆAದರು. ಕಟ್ಟಡ ಕಾರ್ಮಿಕ ಸಂಘದ ಮುಖಂಡರಾದ ರಾಂಜಿನಿ, ಮಮತ, ದುರ್ಗಯ್ಯ, ಮುಖಂಡರಾದ ಬೂಲಕ್ಷಿö್ಮÃ, ಸಂಜೀವಮ್ಮ, ಅಭಿಲಾಷ ಗ್ರಾಮ ಪಂಚಾಯಿತಿ ಸಂಘದ ಸುಬ್ರಾಯಪ್ಪ ಹಾಜರಿದ್ದರು ರಾಮಾಜಿನಪ್ಪ ವಂದನಾರ್ಪಣೆ ಮಾಡಿದರು.


