ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡು ೫೦ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕರ್ನಾಟಕ ಇತಿಹಾಸ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಭ್ರಮ ಸಂಬಂಧಿಸಿದಂತೆ ಯುವಜನರಲ್ಲಿ ಕನ್ನಡ ಕನ್ನಡಿಗ ಕರ್ನಾಟಕ ಕುರಿತು ಅರಿವು ಮೂಡುಸುತ್ತಿರುವ ಕರ್ನಾಟಕ ಸಂಭ್ರಮ ಇವತ್ತು ಜ್ಯೋತಿ ರಥವು ಶನಿವಾರ ಸರದಾರವಲ್ಲಬಾಯ್ ಪಟೇಲ್ ವೃತ್ತದಲ್ಲಿ ಪ್ರವೇಶಿಸಿತು.
ಕಲ್ಬುರ್ಗಿ ನಗರದಲ್ಲಿ ಜ್ಯೋತಿ ರಥವನ್ನು ಜಿಲ್ಲಾ ಆಡಳಿತದಿಂದ ಭವ್ಯ ಸ್ವಾಗತ ಕೋರಲಾಯಿತು. ತದನಂತರ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿಲಾಯಿತು.
ಈ ಸಂದರ್ಭದಲ್ಲಿ ಕಲ್ಬುರ್ಗಿ ಜಿಲ್ಲಾ ದಕ್ಷಿಣ ವಿಧಾನಸಭಾ ಮತ ಕ್ಷೇತ್ರದ ಶಾಸಕರಾದ ಅಲಂಪ್ರಬು ಪಾಟೀಲ್ ಜಿಲ್ಲಾಧಿಕಾರಿಗಳಾದ ಫೌಜೀಯಾ ತರನ್ನುಂ ಕಲಬುರ್ಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿಜಯಕುಮಾರ್ ತೇಗಲತಿಪ್ಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ್ ಡೊಳ್ಳೂ ಬಾರಿಸುವದರ ಮುಖಾಂತರ ರಥದ ಮೆರವಣಿಗೆಗೆ ಮೆರುಗು ನೀಡಿದರು.
ಸರ್ದಾರ್ ವಲ್ಲಬಾಯ್ ಪಟೇಲ್ ವೃತ್ತದಿಂದ ಹೊರಟ ಕನ್ನಡ ಜ್ಯೋತಿ ರಥದ ಮುಂದೆ ರಸ್ತೆ ಉದ್ದಕ್ಕೂ ಶಾಲಾ ಮಕ್ಕಳು ಕನ್ನಡಾಂಬೆಗೆ ಜಯವಾಗಲಿ ಎಲ್ಲೆಲ್ಲೂ ಕನ್ನಡ ಕನ್ನಡಾಂಬೆಗೆ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಕಲಾವಿದರು ನೃತ್ಯ ಮಾಡುತ್ತಾ ನಿಧಾನವಾಗಿ ಹೆಜ್ಜೆ ಹಾಕುತ್ತ ಸಾಗಿದರು. ಅಲ್ಲಮ ಪ್ರಭು ಪಾಟೀಲ್ ವಿಜಯಕುಮಾರ್ ತೇಗಿಲ್ ತಿಪ್ಪಿ ತಾಯಿ ಭುವನೇಶ್ವರಿ ಜ್ಯೋತಿ ರಥದ ಕುರಿತು ಕನ್ನಡದ ಇತಿಹಾಸ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ವಿಜಯಕುಮಾರ್ ತೇಗಲತಿಪ್ಪಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಕಲ್ಬುರ್ಗಿ ಗ್ರಾಮೀಣ ಸಿ .ಡಿ.ಪಿ ಓ.ಪ್ರೇಮಾ ಕಲ್ಬುರ್ಗಿ ಎಸಿಡಿಪಿಯು ಭೀಂಬಾಯಿ, ಮೇಲ್ವಿಚಾರಕರುಗಳಾದ ಉಜ್ವಲಾ ,ಪೂಜಾ,ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.