ತುಮಕೂರು ಆಗಸ್ಟ್:- ನಮ್ಮ ಸಮಾಜದಲ್ಲಿ ಇಂದಿಗೂ ದಿನ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ದಬ್ಬಾಳಿಕೆ ಶೋಷಣೆಯನ್ನ ಕಿತ್ತೋಗೆಯಬೇಕೇಂದರೆ ಶೋಷಣೆಗೆ ಒಳಗಾದವರು ಶಿಕ್ಷಣ ಪಡೆದು ಒಗ್ಗಟ್ಟಾಗಬೇಕು ಹಾಗಾದರೆ ಮಾತ್ರ ಸಮಾಜದಲ್ಲಿ ಜೀವಂತವಾಗಿರುವ ಶೋಷಣೆಯನ್ನು ದೂರ ಮಾಡಬಹುದು ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ಕರೆ ನೀಡಿದರು.ತುಮಕೂರು ನಗರದ ಅಮಾನಿಕೆರೆ ರಸ್ತೆಯ ಕನ್ನಡ ಭವನದಲ್ಲಿ ಗೌತಮ ಬುದ್ಧ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಅರುಣೋದಯ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ನಡೆದ ನಾಡಿನ ಪ್ರಭುದ್ಧ ಪ್ರಮಾಣಿಕ, ರಾಜಕೀಯ ಮುತ್ಸದಿಗಳಾದ ಮಾಜಿ ಲೋಕಸಭಾ ಸದಸ್ಯರು ದಿ. ವೈ ರಾಮಕೃಷ್ಣ ಹಾಗೂ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹಿರಿಯ ರಾಜಕಾರಣಿಗಳಾದ ದಿ. ಆರ್ ಚೆನ್ನಿಗರಾಮಯ್ಯ ಅವರುಗಳ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಶೋಷಿತ ಸಮುದಾಯಗಳ ರಾಜಕೀಯ ಮತ್ತು ನಾಡಿನ ಅಭಿವೃದ್ಧಿಯೆಂಬ ರಾಜ್ಯಮಟ್ಟದ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಸಚಿವ ಎನ್ ರಾಜಣ್ಣ ಅವರು ಮಾತನಾಡಿದರು. ಘೋಷಿತ ಸಮುದಾಯಗಳಲ್ಲಿ ಒಗ್ಗಟ್ಟಿನ ಕೊರತೆಯಿಂದಾಗಿ ರಾಜಕೀಯ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದ್ದು ಎಲ್ಲಿಯವರೆಗೂ ಶೋಷಿತರು ರಾಜಕೀಯ ಅಧಿಕಾರವನ್ನು ಹೊಂದುವುದಿಲ್ಲ ಅವರಿಗೂ ಶೋಷಣೆ ನಿಲ್ಲುವುದಿಲ್ಲ ಶೋಷಿತರ ಬೇಡಿಕೆಗಳು ಮತ್ತು ನಿರೀಕ್ಷೆಗಳು ಫಲಪ್ರದವಾಗುವುದಿಲ್ಲವೆಂದ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶೋಷಿತರ ಬಗ್ಗೆ ಹೋರಾಟ ಮಾಡಿ ಸಂವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷರಾಗಿ ಶೋಷಿತ ಸಮುದಾಯಗಳ ಪರ ನಿಂತು ಮಾತನಾಡಿ ಶೋಷಿತ ಸಮುದಾಯಗಳಿಗೆ ಹಕ್ಕು ಬಾಧ್ಯತೆಗಳನ್ನ ನೀಡದೇ ಹೋಗಿದ್ದರೆ ನಮಗೆಲ್ಲ ಕಷ್ಟವಾಗುತ್ತಿತ್ತು ಎಂದು ಅವರು ಕಳವಳ ವ್ಯಕ್ತಪಡಿಸಿದ್ದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿರುವ ಶೋಷಿತ ಸಮುದಾಯ ಸೇರಿದಂತೆ ಎಲ್ಲರೂ ಕೂಡ ಭೂಮಿ ವಂಚಿತರಾಗಬಾರದೆAದು ರಾಜ್ಯದ ದಲಿತ ಮುಖಂಡರ ಸಲಹೆಯಂತೆ ಪಿಟಿಸಿಎಲ್ ಕಾಯ್ದೆಯನ್ನು ಜಾರಿಗೆ ತಂದಿದ್ದು ಸದ್ಯದಲ್ಲಿ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡು ಜಾರಿಯಾಗಲಿದ್ದು, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆ ಖಂಡನೀಯವಾಗಿದ್ದು ನಮ್ಮ ಸಮಾಜದಲ್ಲಿ ಅಂದು ದಲಿತರು, ಶೋಷಿತರು ಈಶ್ವರನ ಹೆಸರು ಹೇಳಿದರೆ ಹಾಗೂ ಓಂ ನಮಃ ಶಿವಾಯ ಮಂತ್ರ ಜಪಿಸಿದರೆ ಶಿವನಿಗೆ ಮಲಿನವಾಯಿತು ಎಂದು ನಾಲಿಗೆ ಕತ್ತರಿಸುತ್ತಿದ್ದರು ಎಂಬದನ್ನ ಕೇಳಿದರೆ ಮೈ ಜುಮ್ ಅನ್ನಿಸುತ್ತದೆ ದಿಗ್ಬ್ರಮೆಯಾಗುತ್ತದೆ ಎಂದರು.