ಹೆತ್ತ ತಾಯಿಯ ಬೆತ್ತಲೆ ವಿಡಿಯೋ ಹರಿದು ಬಿಟ್ಟು ವಿಕೃತಿ ಮೆರೆದ ಮಗಳು : ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
ತುಮಕೂರು -ತುಮಕೂರಿನ ಪ್ರಖ್ಯಾತ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಯುವಕ ಯುವತಿ ಪರಸ್ಪರ ಪ್ರೀತಿಸಿ ಪೋಷಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ತನ್ನ ಹೆತ್ತ ಮಗಳಿಂದಲೇ ತಾಯಿಯ ಮಾನಹಾನಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ಮಾನಹಾನಿಗೆ ಮುಂದಾಗಿರುವ ಮಗಳ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿರುವ ಪ್ರಕರಣ ತುಮಕೂರು ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.
ಪ್ರಕರಣದ ಹಿನ್ನೆಲೆ
ತುಮಕೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕುಸುಮ ಹಾಗೂ ಮನು ಎಂಬ ಮಕ್ಕಳು ಪರಿಶಿಷ್ಟ ಜಾತಿ ಹಾಗೂ ತಿಗಳ ಸಮುದಾಯಕ್ಕೆ ಸೇರಿದ್ದು ಪ್ರೀತಿಯ ಪಾಶಕ್ಕೆ ಬಿದ್ದು ಓದುವ ಸಮಯದಲ್ಲಿ ಮದುವೆಯಾಗಿ ಪೋಷಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇನ್ನು ಈ ಕುರಿತು ಪ್ರತಿರೋಧವನ್ನು ಹೊರಹಾಕಿದ್ದ ಕುಸುಮ ತಾಯಿಯ ಬೆತ್ತಲೆ ವಿಡಿಯೋವನ್ನು (ತನ್ನ ಬಟ್ಟೆ ಬದಲಾಯಿಸಿಕೊಳ್ಳುವ ಚಿತ್ರಣ) ತನ್ನ ಮಗಳೇ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ತಾಯಿಯ ಮಾನವನ್ನೇ ಬಹಿರಂಗವಾಗಿ ಹರಾಜು ಹಾಕಿದ್ದಾಳೆ. ಇನ್ನು ಮಂಗಳಮ್ಮ ತನ್ನ ಮಗಳ ವಿರುದ್ಧ ಪೊಲೀಸ್ ಇಲಾಖೆ ಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ.
ಇನ್ನು ಕಳೆದ ನಾಲ್ಕೈದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಯುವಕ ಯುವತಿ ಒಂದೇ ಕಾಲೇಜಿನಲ್ಲಿ ಮೆಡಿಕಲ್ ವಿದ್ಯಾಭ್ಯಾಸ ಮಾಡುತ್ತಾ ಪ್ರೀತಿಯ ಕುಣಿಕೆಯಲ್ಲಿ ಸಿಲುಕಿ ನಂತರ ಪೋಷಕರ ಗಮನಕ್ಕೆ ಬರಲಾಗಿ ಇಬ್ಬರೂ ಪೋಷಕರು ಪರಸ್ಪರ ತಿಳುವಳಿಕೆ ಹೇಳುವ ಮೂಲಕ ತಾತ್ಕಾಲಿಕವಾಗಿ ಪ್ರಕರಣಕ್ಕೆ ತೀಲಾಂಜಲಿ ಇಟ್ಟಿದ್ದರು. ದಿನ ಕಳೆದಂತೆ ಮತ್ತೆ ಹಳೆ ಚಳಿಯನ್ನು ಮುಂದುವರಿಸಿದ್ದ ಇಬ್ಬರು ಕದ್ದು ಮುಚ್ಚಿ ಓಡಾಡುತ್ತಾ ಕೆಲ ತಿಂಗಳುಗಳಿAದ ಲಿವಿಂಗ್ ಟುಗೆದರ್ ರಿಲೇಶನ್ಶಿಪ್ ಮೂಲಕ ಒಂದೇ ರೂಮಿನಲ್ಲಿ ವಾಸವಿದ್ದ ಘಟನೆ ತಡವಾಗಿ ಪೋಷಕರ ಗಮನಕ್ಕೆ ಬಂದ ಕೂಡಲೇ ಪೋಷಕರು ಮತ್ತೆ ಬುದ್ಧಿವಾದ ಹೇಳಲು ಮುಂದಾಗಿ ನಂತರ ಕುಸುಮ ವಿಷ ಕುಡಿದಿದ್ದು ವೈದ್ಯಕೀಯ ಚಿಕಿತ್ಸೆಯ ಪಡೆಯುವ ಉದ್ದೇಶದಿಂದ ೨ನೇ ಬಾರಿ ಸಹ ಪೊಲೀಸ್ ಠಾಣೆಯ ಮೆಟ್ಟಿಲರಿದ್ದರು ನಂತರ, ಯುವಕ ಯುವತಿ ರಿಜಿಸ್ಟರ್ ಕಛೇರಿಯಲ್ಲಿ ಮದುವೆಯಾದ ವಿಷಯವು ಎರಡೂ ಕಡೆಯ ಪೋಷಕರಿಗೆ ತಿಳಿದ ಮೇಲೆ ಎರಡೂ ಕಡೆಯ ಪೋಷಕರು ಸಹ ಇವರುಗಳನ್ನು ದೂರವಿಟ್ಟಿದ್ದರು ಎನ್ನಲಾಗಿದೆ.
ಇನ್ನು ಆ ಚಿತ್ರಣವನ್ನು ವಿವರಿಸಲು ಮಾದ್ಯಮಗಳ ಮುಂದೆ ಸಾಧ್ಯವಾಗದೇ ಆ ಸ್ಥಿತಿಯಲ್ಲಿ ತನ್ನ ಮಗಳನ್ನು ಕಂಡು ಪ್ರಶ್ನೆ ಮಾಡಲು ಹೋದಾಗ ತಾಯಿಯ ಮೇಲೇಯೆ ಪ್ರತಿರೋಧವನ್ನು ವ್ಯಕ್ತಮಾಡುವುದಲ್ಲದೇ ಆಕೆಯ ಮೇಲೆ ಹಲ್ಲೆಯನ್ನು ಮಾಡಿರುತ್ತಾಳೆ, ಇದರಿಂದ ಕುಸಿದು ಬಿದ್ದ ತಾಯಿ ತನ್ನ ಬಟ್ಟೆಯಲ್ಲಿಯೇ ಮಲವನ್ನು ವಿಸರ್ಜಿಸಿಕೊಂಡಿರುತ್ತಾಳೆ, ಇನ್ನು ಮಲ ಅಂಟಿದ್ದ ಬಟ್ಟೆಯನ್ನು ಬದಲಾಯಿಸಿಕೊಳ್ಳಲು / ತೊಳೆದುಕೊಳ್ಳಲು ಮುಂದಾಗಿ ಬಟ್ಟೆ ಬಿಚ್ಚಿದ್ದ ಸಂದರ್ಭದಲ್ಲಿ ಅದರ ವಿಡಿಯೋವನ್ನು ಮಾಡಿಕೊಂಡ ತನ್ನ ಮಗಳೇ ಅದನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಟ್ಟು ವಿಕೃತಿಯನ್ನು ಮೆರೆದಿದ್ದಾಳೆ.
ಇದರಿಂದ ಕುಪಿತಗೊಂಡ ತಾಯಿ ಮಂಗಳಮ್ಮ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಪೊಲೀಸ್ ಇಲಾಖೆಯು ತನ್ನ ಮಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಅವಳಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಆಕೆಯು ಡ್ರಗ್ಸ್ ಸೇವನೆ ಮಾಡುತ್ತಿದ್ದಾಳೆಂಬ ಸಂಶಯವನ್ನು ಹೊರ ಹಾಕಿದ್ದಾರಲ್ಲದೇ ಅದರ ವಿರುದ್ಧ ಸೂಕ್ತ ತನಿಖೆ ಮಾಡಿ ಸತ್ಯಾಸತ್ಯೆಯು ಹೊರ ಬರಬೇಕೆಂದು ಪೊಲೀಸ್ ಠಾಣೆಯ ಮುಂದೆ ಅಂಗಲಾಚಿದ್ದಾರೆ. ಇನ್ನು ಈ ಕುರಿತು ನ್ಯಾಯಾಲಯದ ಮೊರೆಯನ್ನು ಆಶ್ರಯಿಸಿರುವ ಮಂಗಳಮ್ಮನವರು ತನಗೆ ಸೂಕ್ತ ನ್ಯಾಯ ದೊರೆಯುವವರೆಗೆ ತಾನು ಹೋರಾಟ ಮಾಡುವುದಾಗಿ ಹೇಳಿಕೊಂಡಿದ್ದಾರೆ.