ತುಮಕೂರು.ಸೆ.೨೬:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗು ಸರ್ವೋದಯ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಅಕ್ಟೋಬರ್ ೧೦ ರಿಂದ ೧೩ ರವರೆಗೆ ೧೪ ರಿಂದ ೧೭ ವರ್ಷದ ಒಳಗಿನ ಶಾಲಾ ಮಕ್ಕಳ ವಿಭಾಗೀಯ ಮತ್ತು ರಾಜ್ಯಮಟ್ಟದ ಖೋಖೋ ಪಂದ್ಯಾವಳಿಯನ್ಬು ವಿಜಯನಗರದ
ಸರ್ವೋದಯ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು ವಿಭಾಗೀಯ ಮತ್ತು ರಾಜ್ಯ ಮಟ್ಟದ ಬಾಲಕ,ಬಾಲಕಿಯರ ಖೋ ಖೋ ಪಂದ್ಯಾವಳಿಯ ಪೂರ್ವಭಾವಿ ಸಭೆಯನ್ನು ಸರ್ವೋದಯ ಶಿಕ್ಷ ಸಂಸ್ಥೆಯ ಸಂಸ್ಥಾಪಕರಾದ ಸೀತಾರಾಮ್ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು.
ಬೆಂಗಳೂರು ವಿಭಾಗ ಮತ್ತು ರಾಜ್ಯಮಟ್ಟದ ಖೋಖೋ ಪಂದ್ಯಾವಳಿಯ ಕುರಿತು ಇದುವರೆಗೂ ಆಗಿರುವ ಸಿದ್ದತೆಗಳ ಕುರಿತು ಮಾತನಾಡಿದ ಸರ್ವೋದಯ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಕರಾದ ವೈ.ರಮೇಶ್ ಅವರು, ಅಕ್ಟೋಬರ್ ೧೦ ಮತ್ತು ೧೧ ರಂದು ಬೆಂಗಳೂರು ವಿಭಾಗದ ಮಟ್ಟದ ೧೪ ರದ ೧೭ ವರ್ಷದ ಒಳಗಿನ ಬಾಲಕ,ಬಾಲಕಿಯರ ಖೋಖೋ ಪಂದ್ಯಾವಳಿ ನಡೆದರೆ, ಅಕ್ಟೋಬರ್ ೧೨ ಮತ್ತು ೧೩ ರಂದು ರಾಜ್ಯಮಟ್ಟದ ಪಂದ್ಯಾವಳಿಗಳು ನಡೆಯಲಿವೆ. ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಬೆಂಗಳೂರು ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಒಂದು ಜಿಲ್ಲೆಯ ಪ್ರೌಢಶಾಲೆ ೧೫ ಬಾಲಕ, ೧೫ ಬಾಲಕಿಯರು ಮತ್ತು, ಹಿರಿಯ ಪ್ರಾಥಮಿಕ ಶಾಲೆ ೧೫ ಬಾಲಕ,೧೫ ಬಾಲಕಿಯರು ಸೇರಿದಂತೆ ಒಂದು ಜಿಲ್ಲೆಯಿಂದ ೬೦ ಜನ ಕ್ರೀಡಾಪಟುಗಳು ಸೇರಿದಂತೆ ೧೧ ಜಿಲ್ಲೆಯ ೬೬೦ ಕ್ರೀಡಾಪಟುಗಳು ಹಾಗು ೭೫ ಜನ ಅಧಿಕಾರಿಗಳು ಸೇರಿ ಒಟ್ಟು ೭೩೫ ಜನರು ಪಾಲ್ಗೊಳ್ಳಲಿದ್ದಾರೆ.ಅದೇ ರೀತಿ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯದ ನಾಲ್ಕು ವಿಭಾಗಗಳ ತಲಾ ೬೦ ಕ್ರೀಡಾಪಟುಗಳು ಮತ್ತು ೭೫ ಜನ ಕ್ರೀಡಾಧಿಕಾರಿಗಳು ಸೇರಿದಂತೆ ೩೧೫ ಜನರು ಸ್ಪರ್ದೆ ಮಾಡಲಿದ್ದಾರೆ.
ಬಾಲಕಿಯರಿಗೆ ರಕ್ಷಣೆಯ ದೃಷ್ಟಿಯಿಂದ ಕ್ರೀಡಾಕೂಟ ನಡೆಯುವ ಸರ್ವೋದಯ ಆವರಣದಲ್ಲಿಯೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಾಲಕರಿಗೆ ಬಟವಾಡಿಯ ಚೇತನ ವಿದ್ಯಾಮಂದಿರದಲ್ಕಿ ವಾಸ್ಯವ್ಯಕ್ಕೆ ಅಣಿಗೊಳಿಸಲಾಗುತ್ತದೆ. ಅಲ್ಲಿಂದ ಆಟದ ಮೈದಾನಕ್ಕೆ ಕರೆತರುವುದು ಮತ್ತು ಕರೆದುಕೊಂಡು ಹೋಗಲು ಸರ್ವೋದಯ ಶಿಕ್ಷಣ ಸಂಸ್ಥೆಯ ಬಸ್ಸುಗಳನ್ನು ಬಳಸಿಕೊಳ್ಳಲಾಗುತ್ತಿದೆ.ನಾಲ್ಕು ದಿನಗಳ ಕಾಲ ಕ್ರೀಡಾಪಟುಗಳು ಮತ್ತು ಅಧಿಕಾರಿಗಳಿಗೆ ಬೆಳಗಿನ ತಿಂಡಿ,ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟವನ್ನು ಕ್ರೀಡಾಕೂಟ ನಡೆಯುವ ಸರ್ವೋದಯ ಶಾಲೆಯ ಆವರಣದಲ್ಲಿಯೇ ವ್ಯವಸ್ಥೆ ಮಾಡಲಾಗಿದೆ ಎಂದು ವಿವರ ನೀಡಿದರು.
ಖೋಖೋ ಪಂದ್ಯಾವಳಿಯನ್ಬು ವಿಜಯನಗರದಸರ್ವೋದಯ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ
Leave a comment
Leave a comment