ಭೌಗೋಳಿಕ ಪ್ರದೇಶದ ಇತಿಹಾಸವು ಚಾರಿತ್ರಿಕ ಅಂಶಗಳಾಧಾರಿತವಾಗಿರುತ್ತದೆ’
ತುಮಕೂರು: ಯಾವುದೇ ಭೌಗೋಳಿಕ ಪ್ರದೇಶದ ಇತಿಹಾಸ ಅಲ್ಲಿನ ಚಾರಿತ್ರಿಕ ಅಂಶಗಳಾಧಾರಿತವಾಗಿರುತ್ತದೆ. ಚರಿತ್ರೆಯ ಅಸ್ಥಿತ್ವವನ್ನು ಉಳಿಸುವ ಕಾರ್ಯ ಪತ್ರಾಗಾರದ್ದಾಗಿರುತ್ತದೆೆ ಎಂದು ರಾಜ್ಯ ಪತ್ರಾಗಾರ ಇಲಾಖೆಯ ಉಪನಿರ್ದೇಶಕ ಡಾ. ನೆಲ್ಕುದ್ರಿ ಸದಾನಂದ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವಶಾಸ್ತç ಅಧ್ಯಯನ ಹಾಗೂ ಸಂಶೋಧನಾ ವಿಭಾಗವು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಾಗಾರ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿಖರ ದಾಖಲೆಗಳ ಆಧಾರವಿಲ್ಲದೆ ಸಮಾಜವೂ ಇತಿಹಾಸವನ್ನು ಒಪ್ಪುವುದಿಲ್ಲ. ಎಲ್ಲದಕ್ಕೂ ದಾಖಲೆಗಳ ಅವಶ್ಯಕತೆಯಿದೆ. ಚಾರಿತ್ರಿಕ ಆಕಾರಗಳನ್ನು ದಾಖಲಿಸಲು ಪತ್ರಾಗಾರ ಇಲಾಖೆಯು ಹಲವು ವರ್ಷಗಳಿಂದ ಶ್ರಮಿಸುತ್ತಿದೆ. ದಾಖಲೆಗಳ ಸಂರಕ್ಷಣೆಯಲ್ಲಿ ಪತ್ರಾಗಾರ ಇಲಾಖೆಯು ಆಧುನಿಕ, ವೈಜ್ಞಾನಿಕ ಸಂರಕ್ಷಣಾ ವಿಧಾನಗಳನ್ನು ಅಳವಡಿಸಿಕೊಂಡಿದೆ ಎಂದು ತಿಳಿಸಿದರು.
ಭೌಗೋಳಿಕ ಪ್ರದೇಶದ ಇತಿಹಾಸವು ಚಾರಿತ್ರಿಕ ಅಂಶಗಳಾಧಾರಿತವಾಗಿರುತ್ತದೆ’
Leave a comment
Leave a comment