ಕಲಬುರ್ಗಿ ನಗರದ ಪ್ರತಿಷ್ಠಿತ ಶಾಲೆ ಒಂದಾದ ಎಸ್.ಆರ್.ಎನ್ ಮೇಹೆತಾ ಶಾಲಾ ಅವರಣದಲ್ಲಿ 2023ನೇ ಸಾಲಿನ ಎರಡು ದಿನಗಳ ಮಟ್ಟಿಗೆ ಎಲ್ಲಾ ವಿಷಯಗಳಿಗೆ ಸಂಬಂಧಿಸಿದ ವಸ್ತುಪ್ರದರ್ಶನ (School Expo 2023 ) ಹಮ್ಮಿಕೊಳ್ಳಲಾಗಿತ್ತು. ಈ ಪ್ರದರ್ಶನದಲ್ಲಿ ಆರುನೂರು ರಿಂದ ಏಳುನೂರು ಮಕ್ಕಳು ಬಾಗಿ ಯಾಗಿದ್ದರು.ಯೋಜನೆಗಳ ವೀಕ್ಷಣೆಗೆ ಸರಿ ಸುಮಾರು 3000 ರಿಂದ 4000 ಜನ ಆಗಮಿಸಿದ್ದರು.9ನೇ ಮತ್ತು 10ನೇ ತರಗತಿ ಮಕ್ಕಳಿಂದ ವಿವಿಧ ಆಹಾರ ಪದಾರ್ಥಗಳ ಅಂಗಡಿಗಳ ಮಳಿಗೆ ಹಾಕಲಾಗಿತ್ತು.ಬರಿ ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರದರ್ಶನ ಇರಲಿಲ್ಲ.ಶಾಲೆಯಲ್ಲಿ ಮಕ್ಕಳು ಓದುವಂತಹ ವಿಷಯಗಳಾದ ಸಮಾಜ-ವಿಜ್ಞಾನ, ಕನ್ನಡ, ಇಂಗ್ಲಿಷ್ ,ಗಣಿತ್,



ಕಂಪ್ಯೂಟರ್, ಚಿತ್ರಕಲೆ ಮತ್ತು ಕ್ರೀಡಾ ಇವೆಲ್ಲಕ್ಕೂ ಸಂಬಂಧ ಪಟ್ಟಂತ ಯೋಜನೆಗಳಿದ್ದವು.ಪ್ರದರ್ಶನದಲ್ಲಿ ವಿಶೇಷವಾಗಿ ಕಲ್ಬುರ್ಗಿ ನಗರದಲ್ಲಿ ಬರ್ತಕಂತ ಐತಿಹಾಸಿಕ ಸ್ಥಳಗಳು ಆಸ್ಪತ್ರೆಗಳು ,ಶಾಲೆ, ಮಿನಿ ವಿಧಾನಸೌಧ, ಮತ್ತು ಕಲ್ಬುರ್ಗಿ ಜನ ಇಷ್ಟಪಡುವ ಆಹಾರ ಪದಾರ್ಥಗಳು ಪ್ರದರ್ಶನದಲ್ಲಿ ಕಂಡು ಬಂದವು.ವಿಶೇಷವಾಗಿ ಪ್ರದರ್ಶನದಲ್ಲಿ ಉಚಿತ ನೇತ್ರ ಮತ್ತು ದಂತ ತಪಾಸಣಾ ಹಮ್ಮಿಕೊಳ್ಳಲಾಗಿತ್ತು. ಮತ್ತು ವಿಜ್ಞಾನದ ಅದ್ಭುತಗಳು ಎಸ್. ಬಿ .ಐ ಬ್ಯಾಂಕ್ ವತಿಯಿಂದ ಮಕ್ಕಳ ಭವಿಷ್ಯ ನೀತಿ ,ಆಧಾರ್ ಕಾರ್ಡ್ ನವೀಕರಣಗಳು ಜನಸಾಮಾನ್ಯರಿಗೆ ಸಹಾಯವಾಗಲೆಂದು ವಿನೂತನವಾಗಿ ಯೋಜನೆ ಮಾಡಿದ್ದು ವಿಶೇಷವಾಗಿತ್ತು.ತದನಂತರ ಶಾಲೆಯ ಪ್ರಾಂಶುಪಾಲರಾದ ಪ್ರೀತಿ ಮೇಹತಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಾಂತ್ರಿಕವಾಗಿ ಬೆಳೆಯುತ್ತಿರುವ ಇಂದಿನ ಯುಗವನ್ನು ಜ್ಞಾನದ ಯುಗ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಕ್ಷರ ಅಭ್ಯಾಸ ಇದ್ದರೆ ಸಾಕಾಗದು ಜೊತೆಗೆ ಜ್ಞಾನದ ಅವಶ್ಯಕತೆ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.ಅದರಲ್ಲೂ ನರ್ಸರಿ ಕೆಜಿ ಹಾಗೂ ಒಂದನೇ ತರಗತಿಯಿಂದ 5ನೇ ತರಗತಿವರೆಗೆ ಮಕ್ಕಳಿಗೆ ಪ್ರಾಥಮಿಕ ಈ ಹಂತದಲ್ಲಿ ಮಕ್ಕಳಿಗೆ ವಿಜ್ಞಾನ ಶಿಕ್ಷಣದ ಬಗ್ಗೆ ಅಷ್ಟೇ ಅಲ್ಲದೆ ಶಾಲೆಯಲ್ಲಿ ಓದುವ ಎಲ್ಲಾ ವಿಷಯಗಳ ಬಗ್ಗೆ ಅಭಿರುಚಿ ಬೆಳೆಸುವುದು ಅತ್ಯವಶವಾಗುತ್ತದೆ. School Expo ಅಂತಹ ಪ್ರದರ್ಶನ ಹಮ್ಮಿಕೊಂಡಿದ್ದು ಮಕ್ಕಳ ಪ್ರತಿಭೆ ಅನಾವರಣಗೊಂಡು ಉತ್ತಮ ವೇದಿಕೆಯಾಗಿದೆ ಎಂದರು. ತದನಂತರ ಈ ಪ್ರದರ್ಶನ ಉದ್ದೇಶಿಸಿ ಸಿಬ್ಬಂದಿ ವರ್ಗದವರಾದ ಸವಿತಾ ಮೇಡಂ ಅವರು ಕೂಡ ಮಾತನಾಡಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಪ್ರೀತಂ ಮೇಹೆತಾ ರಂಜನಾ ಮೇಹೆತಾ ಶಾಲೆಯ ಪ್ರಾಂಶುಪಾಲರಾದ ಪ್ರೀತಿ ಮೇಹೇತಾ ಸಿಬ್ಬಂದಿ ವರ್ಗದವರಾದ ಸವಿತಾ ,ಕೃಷ್ಣ ಗೌಳಿ ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.