ಕೊರಟಗೆರೆ :- ಎಲ್ಲ ಭಾಗ್ಯಗಳಿಗಿಂತಲು ಶ್ರೇಷ್ಠ ಭಾಗ್ಯ ಎಂದರೆ ಅದು ಆರೋಗ್ಯ ಭಾಗ್ಯ ಪ್ರತಿಯೊಬ್ಬರೂ ಈ ಭಾಗ್ಯವನ್ನು ಪಡೆದುಕೊಳ್ಳಬೇಕು ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥಸ್ವಾಮೀಜಿ ತಿಳಿಸಿದರು.

ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಭಾನುವಾರ ಬೆಂಗಳೂರಿನ ಹೆಸರುಘಟ್ಟದ ಸಪ್ತಗಿರಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು,ಸ್ಪರ್ಶ ಆಸ್ಪತ್ರೆ ಮತ್ತು ಕುಂಚಿಟಿಗ ಮಹಾಂಸ್ಥಾನ ಮಠದ ನೇತೃತ್ವದಲ್ಲಿ ಮಠದ ಆವರಣದಲ್ಲಿ ನಡೆದ ಆರೋಗ್ಯ ಶಿಭಿರವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಜನರಿಗೆ ಹಲವು ಆರೋಗ್ಯ ಸಮಸ್ಯೆಗೆ ತಜ್ಞ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಶ್ರೀಮಠದ ಸಹಯೋಗದೊಂದಿಗೆ ಶಿಭಿರನ್ನು ಆಯೋಜಸಿದ್ದು 250 ಕ್ಕೂ ಹೆಚ್ಚಿನ ಜನರು ವೈದ್ಯರಿಂದ ಸಲಹೆ ಮತ್ತು ಚಿಕಿತ್ಸೆಯನ್ನು ಪಡೆದಿದ್ದು ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ರೀತಿಯ ಸೌಲಭ್ಯಗಳೊಂದಿಗೆ ಶಿಭಿರ ನಡೆಸುವುದಾಗಿ ಹೇಳಿದರು.
ಶಿಭಿರದಲ್ಲಿ ಕಣ್ಣು, ರಕ್ತ ಸಂಬಂಧಿ, ಹೃದಯ ಸಂಬಂಧಿ, ಮೂಳೆ ಸೇರಿದಂತೆ ಇತರೆ ಸಮಸ್ಯೆಗಳಿಗೆ ತಜ್ಞ ವೈದ್ಯರಿಂದ ಸಲಹೆ ಮತ್ತು ಚಿಕತ್ಸೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಮಾಜ ಸೇವಕರಾದ ದಿವ್ಯ ಕೀರ್ತಿ ಹೆಚ್.ಎನ್,ಯಲಗೆರೆ ಉಮೇಶ್, ರವಿಕುಮಾರ್, ವೇಣು,ಚಂದ್ರಶೇಖರ್ ,ತಜ್ಞ ವೈದ್ಯರುಗಳಾದ ಡಾ. ನಿಕಿಲ್ ರಂಗನಾಥ್, ಡಾ. ನಿಂಗರಾಜು, ಡಾ.ಸುಶ್ಮಿತ, ಡಾ. ಮೇಘಶ್ರೀ, ಡಾ. ಅಮೃತ, ಡಾ. ಸುನಿತ, ಡಾ. ಪ್ರಿಯಾ ಕುಮಾರಿ ಸೇರಿದಂತೆ ಇತರರು ಇದ್ದರು. (ಚಿತ್ರ ಇದೆ ಬಳಸಿ)
ಕೊರಟಗೆರೆ-ಚಿತ್ರ_1: ಕೊರಟಗೆರೆ ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಹಾಂಸ್ಥಾನ ಮಠದಲ್ಲಿ ನಡೆದ ಆರೋಗ್ಯ ಶಿಭಿರದಲ್ಲಿ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥಸ್ವಾಮೀಜಿ ಸೇರಿದಂತೆ ಇತರರು.