ದೇಶ ಕಂಡ ಮಹಾನ್ ಚೈತನ್ಯಗಳು ಭಾರತದ ಸ್ವಾತಂತ್ರ ಹೋರಾಟದ ಪ್ರಮುಖ ಶಕ್ತಿಯಾಗಿ ದೇಶವನ್ನು ದಾಸ್ಯದಿಂದ ಮುಕ್ತಗೊಳಿಸುವುದರ ಜೊತೆಗೆ ಸುಭದ್ರ ಭಾರತವನ್ನು ನಿರ್ಮಿಸಲು ಅನೇಕ ಶಕ್ತಿಗಳು ಕೈಜೋಡಿಸಿವೆ.
ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಸಪ್ತಗಿರಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮಗಾಂಧಿ ಹಾಗೂ ಲಾಲ್ಬಹದ್ದೂರ್ ಶಾಸ್ತಿçಯವರ ಜನ್ಮ ದಿನಾಚರಣೆಯನ್ನು ಸಂಭ್ರಮದಿAದ ಆಚರಿಸಲಾಯಿತು. ಗಾಂಧೀಜಿಯವರ ಭಾವಚಿತ್ರಕ್ಕೆ ಆಡಳಿತ ಮಂಡಳಿಯ ಮೃಣಾಲ್ ಕುಮಾರ್ ರವರು ಹಾಗೂ ಅರ್ಚನಾ ಎಸ್ ಕುಮಾರ್ ರವರು ಪುಷ್ವನಮನ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದರ ಅಂಗವಾಗಿ ನಮ್ಮ ವಿದ್ಯಾರ್ಥಿಗಳು ಕಾಲೇಜಿನ ಸುತ್ತಮುತ್ತ ಹಾಗೂ ಗಾರೆ ನರಸಯ್ಯನ ಕಟ್ಟೆಯ ದಡದಲ್ಲಿನ ಪ್ಲಾಸ್ಟಿಕ್ ವಸ್ತುಗಳನ್ನು ತೆರವುಗೊಳಿಸಿ ರಸ್ತೆಗಳನ್ನು ಸ್ವಚ್ಛಗೊಳಿಸುವುದರ ಮೂಲಕ ಸ್ವಚ್ಛತಾ ಆಂದೋಲನವನ್ನು ಯಶಸ್ವಿಗೊಳಿಸಿದರು.