ತುಮಕೂರು:ಗಣಿ ಇಲಾಖೆಯ ಉಪನಿರ್ದೇಶಕಿ ಕೆ.ಎಸ್.ಪ್ರತಿಮಾ ಅವರ ಕೊಲೆ ಕೇಸನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು, ಹಾಗೂ ಸರಕಾರ ಮಹಿಳಾ ಅಧಿಕಾರಿಗಳಿಗೆ ಹೆಚ್ಚಿನ ರಕ್ಷಣೆ ಒದಗಿಸಬೇಕೆಂದು ಆಮ್ಮ್, ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಹೆಚ್.ಎ.ಜಯರಾಮಯ್ಯ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಸರಕಾರದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂದರೆ, ಇನ್ನೂ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದ ಅವರು,ಪ್ರತಿಯೊಬ್ಬ ಅಧಿಕಾರಿಗೂ ಗನ್ ಮ್ಯಾನ ನೀಡಲು ಸಾಧ್ಯವಿಲ್ಲ ಎಂಬ ಗೃಹ ಸಚಿವರ ಹೇಳಿ ನಿಜಕ್ಕೂ ಹಾಸ್ಯಾಸ್ಪದ.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದಕ್ಕೆ ಇದು ನಿರ್ದಶನವಾಗಿದೆ ಎಂದರು.
ಸರಕಾರ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕ ಮಾಡುವ ವೇಳೆ ಅತಿ ಹೆಚ್ಚು ಎಚ್ಚರಿಕೆ ವಹಿಸಬೇಕಾ ಗುತ್ತದೆ.ಚಾಲಕನಿಂದಲೇ ಕೊಲೆಯಾದ ಕೆ.ಎ.ಎಸ್.ಅಧಿಕಾರಿ ಪ್ರತಿಮಾ ಅವರು, ಇಲಾಖೆಯ ಗುಟ್ಟನ್ನು ಬಹಿರಂಗ ಪಡಿಸುತ್ತಿದ್ದಾನೆ ಎಂಬ ಕಾರಣಕ್ಕೆ ತನ್ನ ಕಾರು ಡ್ರೆöÊವರ್ ನನ್ನು ಕೆಲಸದಿಂದ ತೆಗೆದಿದ್ದು, ಇದನ್ನೇ ಸೇಡಾಗಿ ಇಟ್ಟುಕೊಂಡು ಕೊಲೆ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡಬAದರೂ, ಉನ್ನತ ಮಟ್ಟದ ತನಿಖೆ ನಡೆದರೆ ಇದರ ಹಿಂದಿರುವ ಕಾಣದ ಕೈಗಳ ಗೋಚರವಾಗಲಿದೆ.ಗಣಿ ಎನ್ನುವುದು ನೈಸರ್ಗಿಕ ಸಂಪತ್ತಾಗಿದ್ದು,ಸರಕಾರ ನೈಸರ್ಗಿಕ ಸಂಪತ್ತನ್ನು ತೆಗೆದು ಮಾರಾಟ ಮಾಡಲು ಖಾಸಗಿಯವರಿಗೆ ಗುತ್ತಿಗೆ ನೀಡುವ ಬದಲು ಸರಕಾರವೇ ನಡೆಸಿದರೆ ರಾಜ್ಯಕ್ಕೆ ಹೆಚ್ಚಿನ ಅದಾಯ ಬರಲಿದೆ.ಸಾವಿರಾರು ಜನರಿಗೆ ಉದ್ಯೋಗ ದೊರೆಯಲಿದೆ. ಈ ನಿಟ್ಟಿನಲ್ಲಿ ಸರಕಾರ ಮುಂದಾಗಬೇಕು ಎಂದು ಎಎಪಿ ಜಿಲ್ಲಾಧ್ಯಕ್ಷ ಹೆಚ್.ಎ.ಜಯರಾಮಯ್ಯ ತಿಳಿಸಿದರು.
ಎಎಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಮಾಂಜೀನಪ್ಪ ಮಾತನಾಡಿ,ಗಣಿ ಎಂಬುದು ರಾಜಕಾರಣಿಗಳಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ.ಲೀಸ್ ದೊರೆತಿರುವ ಭೂಮಿಗಿಂತಲೂ ಹೆಚ್ಚಿನ ಜಾಗದಲ್ಲಿ ಅಕ್ರಮವಾಗಿ ಅದಿರು ತೆಗೆದು ಮಾರಾಟ ಮಾಡಿ ಸರಕಾರಕ್ಕೆ ಮೋಸ ಮಾಡಲಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಪಾವಗಡ ಶಾಸಕರಾದ ಹೆಚ್.ವಿ. ವೆಂಕಟೇಶ್ ಅವರಿಗೆ ಸೇರಿದ ಶ್ರೀವೆಂಕಟೇಶ್ವರ ಸ್ಟೋನ್ ಕ್ರಷರ್. ಸರಕಾರದಿಂದ ತಿಪ್ಪಯ್ಯನದುರ್ಗ ಗ್ರಾಮದ ಸರ್ವೆ ನಂ ೪೨ರಲ್ಲಿ ಕೇವಲ ೫ ಎಕರೆ ಭೂಮಿಯನ್ನು ಎಮ್.ಸ್ಯಾಂಡ್ ಉತ್ಪಾಧನೆಗೆ ಲೀಸ್ಗೆ ಪಡೆದು,ಪಕ್ಕದಲ್ಲಿಯೇ ಇದ್ದ ಸುಮಾರು ೨೧.೩೧ ಎಕರೆಯಲ್ಲಿ ಅಕ್ರಮವಾಗಿ ಅದಿರು ತೆಗೆದು ಮಾರಾಟ ಮಾಡಲಾಗುತ್ತಿದೆ.ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿಧಿಸಿದ ದಂಡವನ್ನು ಕಟ್ಟದೆ, ಗಣಿ ದೂಳು ಅಕ್ಕಪಕ್ಕದ ಕೃಷಿ ಜಮೀನಿಗೆ ಹೋಗದಂತೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ, ಸರಕಾರದ ಎಲ್ಲಾ ಷರತ್ತುಗಳನ್ನು ಉಲ್ಲಂಘಿಸಿ, ಕೆಲಸ ಮಾಡುತ್ತಿದ್ದು, ಇದಕ್ಕೆ ಸರಕಾರವೇ ಬೆನ್ನೆಲುಬಾಗಿ ನಿಂತಿದೆ ಎಂದು ಆರೋಪಿಸಿದರು.
ಕೆ.ಎಸ್.ಪ್ರತಿಮಾ ಅವರ ಕೊಲೆ ಕೇಸನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು
Leave a comment
Leave a comment