ತುಮಕೂರು:- ಪ್ರಪಂಚದಲ್ಲಿ ಅತ್ಯುನ್ನತ ಸಂವಿಧಾನ ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ವಿವಿಧ ಭಾಷೆ ಸಂಸ್ಕೃತಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರ ಈ ರಾಷ್ಟ್ರದಲ್ಲಿ ಅನೇಕ ಸಂಘಟನೆಗಳು ತಲೆಯೆತ್ತಿದ್ದು ಅದರಲ್ಲಿ ಭೀಮ್ ಆರ್ಮಿ ಸಂಘಟನೆ ದೇಶದ ವಿವಿಧ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದ್ದು ಸವಿಂಧಾನದ ತತ್ವ ಸಿದ್ಧಾಂತಗಳ ಪರವಾಗಿ ಹೋರಾಟ ನಡೆಸುತ್ತಿರುವ ಅದರ ಕಾರ್ಯವೈಕರಿ ಶ್ಲಾಘನೀಯವಾದದ್ದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಮುರಳೀಧರ್ ಹಾಲಪ್ಪ ಅವರು ತಿಳಿಸಿದರು.
ನಗರದ ನೂತನ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಭೀಮ್ ಆರ್ಮಿ ಸಂಘಟನೆಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟನೆ ಮಾಡಿ ನಂತರ ಮಾತನಾಡಿದ ಹಾಲಪ್ಪ ದೇಶದಲ್ಲಿ ಅಸ್ತಿತ್ವದಲ್ಲಿರುವ ಭೀಮ ಆರ್ಮಿ ಸಂಘಟನೆ ಅಧಿಕಾರಿಗಳಿಗೆ ಸಿಂಹ ಸ್ವಪ್ನವಾಗಿದ್ದು ಸಂಘಟನೆಯ ಪದಾಧಿಕಾರಿಗಳು ಉತ್ಸುಕವಾಗಿ ಕಾರ್ಯಮಗ್ನರಾಗಿದ್ದಾರೆ ಎಂದರು.
ಸಮ ಸಮಾಜದ ನಿರ್ಮಾಣಕ್ಕಾಗಿ ಡಾ. ಬಿಆರ್ ಅಂಬೇಡ್ಕರ್ ಅವರು ಬೃಹತಾಕಾರದ ಸಂವಿಧಾನವನ್ನು ರಚನೆ ಮಾಡಿದ್ದು ಅದನ್ನ ಕಾಟಾಚಾರಕ್ಕೆ ಬರೆದಿಲ್ಲ ಶಿಕ್ಷಣ ಕ್ಷೇತ್ರ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಂವಿಧಾನದ ಆಶಯಗಳು, ಮಹತ್ವಗಳು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ ಶಾಲಾ ಮಕ್ಕಳಿಗೆ ಸಂವಿಧಾನದ ಮಹತ್ವ ಮತ್ತು ತತ್ವದರ್ಶಗಳನ್ನ ತಿಳಿಹೇಳುವ ಕೆಲಸವನ್ನು ಶಿಕ್ಷಣ ಕ್ಷೇತ್ರ ಮಾಡಬೇಕು ಎಂದು ತಿಳಿಸಿದರು.
ರಾಜ್ಯ ಕಾಂಗ್ರೆಸ್ ನ ಕೆಪಿಸಿಸಿ ವಕ್ತಾರ ಹಾಗೂ ಯುವ ಮುಖಂಡ ನಿಖಿತ್ ರಾಜ್ ಮೌರ್ಯ ಅವರು ಮಾತನಾಡಿ ಬಜೆಟ್ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೆ ಬಿಜೆಪಿಗರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ ಆದರೆ ಇಂದು ಪ್ರತಿ ಹಳ್ಳಿಗಲ್ಲಿ ಹಾಗೂ ಶಾಲೆ, ವಿಶ್ವವಿದ್ಯಾಲಯಗಳಲ್ಲಿ ಜೈ ಭೀಮ್ ಘೋಷಣೆ ಸರ್ವೇಸಾಮಾನ್ಯವಾಗಿದ್ದು ಹೋರಾಟಗಾರರು ಜೈ ಭೀಮ್ ಹೇಳುತ್ತಿದ್ದಾರೆ ಇದು ನಮ್ಮ ಸಂವಿಧಾನ ಪ್ರಜಾಪ್ರಭುತ್ವಕ್ಕಿರುವ ತಾಕತ್ತು ಎಂದರು.
ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಎಸ್.ಟಿ ಶ್ರೀನಿವಾಸ್ ಅವರು ಮಾತನಾಡಿ ನಮ್ಮ ದೇಶದಲ್ಲಿ ಜಾತಿ ಪದ್ಧತಿ ವ್ಯವಸ್ಥೆ ಶೋಷಿತರನ್ನು ಹರಿದು ಮುಕ್ಕಿದೆ, ಜಾತಿ ಪದ್ಧತಿ ವ್ಯವಸ್ಥೆ ಒಂದು ಪೀಳಿಗೆಗೆ ಸೀಮಿತವಾಗದೆ ಹರಡುತ್ತಾ ಬರುತ್ತಿದ್ದು, ಇಂದು ಅಸ್ತಿತ್ವದಲ್ಲಿರುವ ಸಂಘಟನೆಗಳು ಶೋಷಿತರ ಪರವಾಗಿದ್ದ ಕಾನ್ಸೀರಾಂ ಅವರಂತೆ ಬಹುಜನರ ಹಿತ ಕಾಯುವಂತಹ ಸಂಘಟನೆಗಳನ್ನ ಕಟ್ಟಬೇಕು ಎಂದರು.
ದಲಿತ ಮುಖಂಡ, ಅಂಬೇಡ್ಕರ್ ಅನುಯಾಯಿ ಹೆತ್ತೇನಹಳ್ಳಿ ಮಂಜುನಾಥ್ ಮಾತನಾಡಿ ಇಂದಿನ ಸಂಘಟನೆಗಳು ಅಂಬೇಡ್ಕರ್ ಅವರ ತತ್ವದರ್ಶಗಳನ್ನು ಮೈಗೂಡಿಸಿಕೊಂಡು ಬೆಳೆಯಬೇಕು ಅಂಬೇಡ್ಕರ್ ಎಂದರೆ ನಮ್ಮ ಮೈಯಲ್ಲಿ ಹರಿಯುವಂತಹ ರಕ್ತ, ನಮ್ಮ ತಂದೆ ತಾಯಿಗಳು ಅಭಿಮಾನಕ್ಕೆ ಜನ್ಮ ನೀಡಿದ್ದಾರೆ ಆದರೆ ನಮಗೆಲ್ಲ ಜೀವನ ರೂಪಿಸಿದ್ದು, ಜೀವನ ಉತ್ತಮವಾಗಿ ಕಟ್ಟಿಕೊಳ್ಳುವಂತೆ ಮಾಡಿದ್ದು ಡಾ. ಬಿ.ಆರ್ ಅಂಬೇಡ್ಕರ್ ಅವರು ಹಾಗೂ ಅವರ ಬರೆದ ಸಂವಿಧಾನ ಹೀಗಾಗಿ ಇದನ್ನ ಅರಿತು ನಾವುಗಳು ಮುನ್ನಡೆಯಬೇಕು ಎಂದರು.
ಹಿರಿಯ ದಲಿತ ಮುಖಂಡ ಭರತ್ ಬೆಲ್ಲದ ಮಡುಗು ಮಾತನಾಡಿ ಸಂಘಟನೆಯ ಸಂಘಟಕರು ರಾಜಕೀಯ ಪಕ್ಷಗಳ ಭಿಕ್ಷುಕರಾಗಬಾರದು, ಎರಡು ಕಾಸಿನ ಆಸೆಗಾಗಿ ಹೋರಾಟಗಳನ್ನು ಮಾಡಬಾರದು ಮೊದಲು ಸಂವಿಧಾನದ ತತ್ವದರ್ಶಗಳನ್ನ ಮತ್ತು ಒಳ ಆಂತರ್ಯವನ್ನು ಹರಿಯಬೇಕು ಇದನ್ನು ಎಲ್ಲರಿಗೂ ತಿಳಿಸುವಂತಹ ಕೆಲಸಡ ಭೀಮ್ ಆರ್ಮಿ ಸಂಘಟನೆಯಿಂದ ಆಗಬೇಕು ಎಂದರು.
ಭೀಮ್ ಆರ್ಮಿ ರಾಜ್ಯಾಧ್ಯಕ್ಷ ರಾಜಗೋಪಾಲ್ ಅವರು ಮಾತನಾಡಿ ನಮ್ಮ ರಾಜ್ಯ ನಮ್ಮ ದೇಶದಲ್ಲಿ ಯಾವೊಬ್ಬ ದಲಿತ ಪ್ರಜೆಯೂ ಮುಖ್ಯಮಂತ್ರಿ ಪ್ರಧಾನಮಂತ್ರಿಗಳು ಆಗಲಿಲ್ಲ ಇಂದು ನಾವು ಸವರ್ಣಿಯರ ಜೊತೆ ಸಮನಾಗಿ ರಾಜಕೀಯ ಶಿಕ್ಷಣ ಉದ್ಯೋಗ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುತ್ತಿದ್ದೇವೆ, ಕಾಂಗ್ರೆಸ್ ಪಕ್ಷದಿಂದ ಮಲ್ಲಿಕಾರ್ಜುನ ಖರ್ಗೆ ಅವರು ಎತ್ತರಕ್ಕೆ ಬೆಳೆಯುತ್ತಿದ್ದಾರೆ, ಅನೇಕ ರಾಜಕೀಯ ಪಕ್ಷಗಳು ದಲಿತರ ಒಡತಿಗಾಗಿ ಮೀಸಲಿಟ್ಟ ಹಣ ಕೇವಲ ಯೋಜನೆಗಳಲ್ಲಿ ಮತ್ತು ಘೋಷಣೆಗಳಲ್ಲಿಯೇ ಉಳಿದಿದೆ ಕರ್ನಾಟಕ ರಾಜ್ಯದಲ್ಲಿ ದಲಿತರಿಗೆ ಮೀಸಲಿಟ್ಟಿರುವ ಎಸ್ ಸಿ ಪಿ/ ಟಿ ಎಸ್ ಪಿ ಹಣವನ್ನು ಖರ್ಚು ಮಾಡಿದರೆ ದಲಿತರೆಲ್ಲರು ಶ್ರೀಮಂತರಾಗುವುದರಲ್ಲಿ ಸಂದೇಹವಿಲ್ಲ ಆದರೆ ಇಂತಹ ಕೆಲಸ ಕಾರ್ಯಗಳು ನಡೆಯುತ್ತಿಲ್ಲ, ನಡೆಯುವುದು ಇಲ್ಲ ಇಂತಹ ಮಹತ್ಕಾರ್ಯಗಳನ್ನು ಜಾರಿಗೆ ತರುವ ಸಲುವಾಗಿ ಅನೇಕ ಸಂಘಟನೆಗಳು ಹೋರಾಟಗಳನ್ನು ನಡೆಸಿದ್ದು ಭೀಮ ಆರ್ಮಿ ಸಂಘಟನೆಯ ಕೂಡಾ ಈ ನಿಟ್ಟಿನಲ್ಲಿ ಹೆಜ್ಜೆ ಹಾಕಲಿದ್ದು ನೊಂದವರ ಶೋಷಿತರ ಪರವಾಗಿ ಪ್ರತಿ ಸಮಸ್ಯೆಗೂ ಉತ್ತರವನ್ನು ಹುಡುಕುವ ಕೆಲಸ ಭೀಮ್ ಆರ್ಮಿ ಸಂಘಟನೆ ತುಮಕೂರು ಜಿಲ್ಲಾ ಘಟಕದ ವತಿಯಿಂದ ನಡೆಯಲಿದೆ ಎಂದರು.
ತುಮಕೂರು ಜಿಲ್ಲಾ ಘಟಕ ಭೀಮ್ ಆರ್ಮಿ ಸಂಘಟನೆಯ ಜಿಲ್ಲಾಧ್ಯಕ್ಷರಾಗಿ ಅಯ್ಯನಪಾಳ್ಯ ಶ್ರೀನಿವಾಸ್ ಅವರು ಆಯ್ಕೆಯಾಗಿ ಇತರರು ಉಪಾಧ್ಯಕ್ಷ ಕಾರ್ಯಧ್ಯಕ್ಷ ಮತ್ತು ಪದಾಧಿಕಾರಿಗಳಾಗಿ ಆಯ್ಕೆಯಾಗಿ ಪದಗ್ರಹಣ ಸ್ವೀಕರಿಸಿದ್ದರು.
ಈ ಸಂದರ್ಭದಲ್ಲಿ ಭೀಮ ಆರ್ಮಿ ತುಮಕೂರು ಜಿಲ್ಲಾ ಅಧ್ಯಕ್ಷರಾದ ಅಯ್ಯನಪಾಳ್ಯ. ಶ್ರೀನಿವಾಸ್ ಎ ಆರ್. ಜಿಲ್ಲಾ ಉಪಾಧ್ಯಕ್ಷರು ನವೀನ್ ಕುಮಾರ್. ಪ್ರಧಾನ ಕಾರ್ಯದರ್ಶಿ ಮಹೇಶ್. ಜಹೀರ್ ಅಬ್ಬಾಸ್ ಕಾರ್ಯ ಅಧ್ಯಕ್ಷರು. ಕಿರಣ್ ಕುಮಾರ್ ಉಪಾಧ್ಯಕ್ಷರು. ಕಾಂತರಾಜು ಆಟೋ ಚಾಲಕರ ಅಧ್ಯಕ್ಷರು. ಕೃಷ್ಣಮೂರ್ತಿ ಚಾಲಕ ಅಧ್ಯಕ್ಷರು. ತುಮಕೂರು ನಗರ ಮಹಿಳಾ ಅಧ್ಯಕ್ಷರು ನಂದಿನಿ, ತಿಪ್ಪೇಸ್ವಾಮಿ, ಹರಿಶ್, ಸಿದ್ದರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.