ತುಮಕೂರು: ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾದಲ್ಲಿ ಪ್ರಾಧ್ಯಾಪಕರಾಗಿ ಮತ್ತು ಎಸ್ಟೇಟ್ ಅಧಿಕಾರಿಯಾಗಿ ೩ ದಶಕಗಳ ಕಾಲ ಕಾರ್ಯನಿರ್ವಹಿಸಿದ ಪ್ರೊ.ಎಸ್.ಆರ್.ರಮೇಶ್ ಅವರಿಗೆ ಕಾಲೇಜಿನ ಬೋಧಕ ಮತ್ತು ಭೋದಕೇತರ ಸಿಬ್ಬಂದಿ ಹೃದಯಸ್ಪರ್ಶಿ ಬೀಕ್ಕೊಡಿಗೆ ನೀಡಿತು. ಈ ಆತ್ಮೀಯ ಕಾರ್ಯಕ್ರಮದಲ್ಲಿ ಕಾಲೇಜಿನ ಕಾರ್ಮಿಕ ವೃಂದ ಪಾಲ್ಗೊಂಡಿದ್ದು ಮೆರಗು ತಂದುಕೊಟ್ಟಿತು.
ಕ್ಯಾಂಪಸ್ನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ರಮೇಶ್ ಅವರನ್ನು ಸನ್ಮಾನಿಸಿ ಮಾತನಾಡಿದ ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ.ಕೆ.ಬಿ.ಲಿಂಗೇಗೌಡ ಅವರು, ಶೈಕ್ಷಣಿಕ ಕೇತ್ರದಲ್ಲಿ ಸುದೀರ್ಘವಾಗಿ ವಿವಿಧ ಹಂತದಲ್ಲಿ ವೈವಿಧ್ಯಮಯವಾದ ಕೆಲಸ ಮಾಡುವುದು ಸವಾಲಿನ ಕೆಲಸ. ಎಲ್ಲರೊಂದಿಗೆ ಬೆರತು ಕೆಲಸ ಮಾಡಿದಾದ, ಅದರ ಫಲವನ್ನು ನಿವೃತ್ತಿ ಜೀವನದಲ್ಲಿ ಗಳಿಸುತ್ತೇವೆ ಎಂದರು.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಎಂ.ಎಸ್.ರವಿಪ್ರಕಾಶ, ಡೀನ್ ಡಾ. ರೇಣುಕಾಲತಾ.ಎಸ್, ಪ್ರೊ.ವೇಣುಗೋಪಾಲ್, ಡಾ.ಡಿ.ರಾಜಾನಾಯಕ್, ಸಹಾಯಕ ಕುಲಸಚಿವರಾದ ಡಾ.ಆರ್.ಸುಮಾ, ಎಸ್ಟೇಟ್ ಅಧಿಕಾರಿ ಶಿವರಾಜು.ಡಿ., ಉದ್ಯೋಗ ಮತ್ತು ನೇಮಕಾತಿ ಅಧಿಕಾರಿ ಡಾ.ಅಶೋಕ ಮೆಹ್ತಾ, ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಎಚ್.ಮಂಜುನಾಥ್, ಸಹಾಯಕ ಆಡಳಿತಾಧಿಕಾರಿ ಖಲಂದರ್ ಪಾಷಾ, ಕ್ಯಾಂಪಸ್ನ ಒಳಾಂಗಣ ಮತ್ತು ಹೊರಾಂಗಣದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಸೇರಿದಂತೆ ವಿಭಾಗದ ಬೋಧಕ ಮತ್ತು ಬೋಧಕೇತರ ವರ್ಗ ಉಪಸ್ಥಿತರಿದ್ದರು.