ಪತ್ರಕರ್ತರ ಹಿತಾ ಕಾಪಾಡಲು ಜಿಲ್ಲಾ ಸಂಘ ಬದ್ದವಾಗಿದೆ. ಹಾಗೂ ಮಧುಗಿರಿ ತಾಲೂಕು ಘಟಕ ದಿಂದ ತುಮಕೂರು ಜಿಲ್ಲಾ ಸಂಘಕ್ಕೆ ನಾಮಿನಿ ನಿರ್ದೇಶಕರಾಗಿ ಡಾ. ಮಹಾರಾಜ್ ಮಹತ್ವದ ಸಭೆಯಲ್ಲಿ ಆಯ್ಕೆ.
ಜಿಲ್ಲೆಯ ಎಲ್ಲಾ ಪತ್ರಕರ್ತರ ಹಿತಾ ಕಾಪಾಡಲು ಜಿಲ್ಲಾ ಸಂಘ ಬದ್ಧವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ. ಪುರುಷೋತ್ತಮ್ ತಿಳಿಸಿದರು.
ಅವರು ಮಧುಗಿರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಸಂಘಕ್ಕೆ ಮಧುಗಿರಿ ತಾಲೂಕು ಘಟಕದಿಂದ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆಯ ಪ್ರಕ್ರಿಯೆ ನಡೆಸಿ ನಂತರ ಸಮಾಲೋಚನೆಯ ಸಭೆಯಲ್ಲಿ ಮಾತನಾಡಿದ ಅವರು , ರಾಜ್ಯ ಸಂಘ ಹಾಗೂ ಜಿಲ್ಲಾ ಸಂಘಗಳ ಸಂಯುಕ್ತಾಶ್ರಯದಲ್ಲಿ ಪತ್ರಕರ್ತರ ಹಲವಾರು ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ , ಪತ್ರಕರ್ತರಿಗೆ ಮತ್ತು ಕುಟುಂಬದವರಿಗೆ ದೊರೆಯ ಬಹುದಾದ ಸೌಲಭ್ಯಗಳನ್ನು ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದ್ದು , ಕರೋನಾ ಸಂಧರ್ಭದಲ್ಲಿ ಜಿಲ್ಲಾ ಸಂಘವು ಪತ್ರಕರ್ತರಿಗೆ ಸಕಾಲಕ್ಕೆ ನೆರವಿಗೆ ಧಾವಿಸಿದೆ.
ಯೂ ಟ್ಯೂಬ್ ಚಾನಲ್ ಗಳಿಂದಾಗಿ ಇಂದು ಕಾರ್ಯ ನಿರತ ವರದಿಗಾರರಿಗೆ ತೊಂದರೆಯಾಗುತ್ತಿರುವುದು ಕಂಡು ಬರುತ್ತಿದೆ , ಇವರುಗಳ ನಿಯಂತ್ರಣಕ್ಕೆ ಜಿಲ್ಲಾ ಸಂಘವು ಬದ್ಧವಾಗಿದ್ದು ತಾಲೂಕಿನಲ್ಲಿಯೂ ಸಹ ಯೂ ಟ್ಯೂಬ್ ಚಾನಲ್ ಗಳ ಹಾವಳಿ ಕಡಿಮೆಯಾಗಬೇಕಾಗಿದೆ ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಂದ ನಿಯಮಗಳನ್ನು ರೂಪಿಸಲಾಗುತ್ತಿದ್ದು. ಮುಂದಿನ ದಿನಗಳಲ್ಲಿ ಕಡಿವಾಣ ಬೀಳಲಿದೆ ಎಂದರು.
ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಮೃತರಾದ ತಾಲೂಕಿನ ಪತ್ರಕರ್ತ ಎಂ.ಡಿ.ರಮೇಶ್ ರವರಿಗೆ ಸಂತಾಪ ಸೂಚಿಸಿ ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಅದಷ್ಟೂ ಬೇಗಾ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಪತ್ರಕರ್ತರನ್ನು ಕಾರ್ಮಿಕ ಇಲಾಖಾ ವ್ಯಾಪ್ತಿಗೆ ತರಲಾಗುತ್ತಿದ್ದು ಅಲ್ಲಿಂದ ದೊರೆಯುವಂತಹ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು.
ಜಿಲ್ಲಾ ಸಂಘದ ಉಪಾಧ್ಯಕ್ಷರಾದ ಎಲ್.ಚಿಕ್ಕೀರಪ್ಪ ಮಾತನಾಡಿ ಕಾರ್ಯನಿರತ ಪತ್ರಕರ್ತರ ಸಂಘವು ಒಂದು ಮಾತೃ ಸಂಘವಾಗಿದ್ದು ಇದರಲ್ಲಿ ಯಾವುದೇ ಪರ್ಯಾಯ ಸಂಘಗಳ ರಚನೆಗೆ ಅವಕಾಶವಿಲ್ಲ , ಇಲ್ಲಿನ ಕೆಲವರು ಮಾತೃ ಸಂಘದ ರೀತಿ ನಿಯಮಗಳನ್ನು ಉಲ್ಲಂಘಿಸಲು ಹೊರಟಿರುವುದು ಸರಿಯಿಲ್ಲ ನಿಯಮ ನಿಭಂಧನೆಗಳನ್ನು ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಲ್ಲಾರೂ ಒಗ್ಗಟ್ಟಿನಿಂದ ಇದ್ದೂ ಕಾಲ ಕಾಲಕ್ಕೆ ಸಭೆಗಳನ್ನು ನಡೆಸಿ , ಸಮಸ್ಯೆ ಗಳನ್ನು ಬಗೆಹರಿಸಿಕೊಳ್ಳಿ ನಿಮ್ಮ ಕಷ್ಟ ಸುಖಗಳಿಗೆ ಜಿಲ್ಲಾ ಸಂಘವಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರ ಸ್ಥಾನಕ್ಕೆ ಮಧುಗಿರಿ ತಾಲೂಕು ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ಮಹರಾಜು ರವರನ್ನು ಸರ್ವ ಸದಸ್ಯರು ಹಾಗೂ ನಿರ್ದೇಶಕರು ಬೆಂಬಲ ಸೂಚಿಸಿದ್ದರಿಂದ ಅವಿರೋಧ ವಾಗಿ ಆಯ್ಕೆಯಾದರು.
ಈ ಸಭೆಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್ ,ಜಿಲ್ಲಾ ಕಾರ್ಯದರ್ಶಿ ಎಲ್. ರಂಗಾಧಾಮಯ್ಯ , ಸತೀಶ್ ಹಾರೋಗೆರೆ , ನಿರ್ದೇಶಕರಾದ ಹೆಚ್ ಎಸ್ ಪರಮೇಶ್ , ಸುರೇಶ್ ,
ತಾಲೂಕು ಅಧ್ಯಕ್ಷ ವಿ.ಹೆಚ್ ಚಂದ್ರಕಾಂತ್ , ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಎಂ ಎನ್ , ಖಜಾಂಚಿ ಎಂ.ಎಸ್ , ರಘುನಾಥ್ , ಉಪಾಧ್ಯಕ್ಷ ಕಣೀಮಯ್ಯ , ಗಂಗಾಧರ್ , ನಿರ್ದೇಶಕರುಗಳಾದ ರಾಮಣ್ಣ , ಸಿರಾಜ್ ಅಹಮದ್ , ಸುರೇಶ್ , ಕಂಬಣ್ಣ , ಲಕ್ಷ್ಮಣ್ , ಮಾರುತಿ , ಅನಂತಕೃಷ್ಣರಾಜು , ಮಂಜುನಾಥ್ , ಮಾಜಿ ಅಧ್ಯಕ್ಷರಾದ ಎನ್.ವೈ ಸೋಮಶೇಖರ್ , ಎನ್.ಶಿವದಾಸ್ , ಟಿ.ಪ್ರಸನ್ನಕುಮಾರ್ , ಮಾಜಿ ಕಾರ್ಯದರ್ಶಿ ಗಳಾದ ಜಿ.ನಾರಾಯಣರಾಜು , ನಾಗೇಂದ್ರಶರ್ಮ , ಮಾಜಿ ಉಪಾಧ್ಯಕ್ಷ ಅಂಜಿನಪ್ಪ , ರಾಮರೆಡ್ಡಿ , ಗೋವಿಂದರಾಜು , ಶಿವಕುಮಾರ್ , ಸುರೇಶ್ , ಬಾಲು ಫಣೀಂದ್ರ , ಸತೀಶ್ , ಮಾರುತಿ ಪ್ರಸನ್ನ ಕುಮಾರ್ , ರಾಮಚಂದ್ರ ಹಾಜರಿದ್ದರು.