ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ನಿವೇಶನ ರಹಿತ ಕುಟುಂಬಗಳಿಗೆ 4 ಎಕರೆ ಮೀಸಲಿಟ್ಟಿರುವ ಭೂಮಿಯನ್ನು ಸ್ವಾಧಿನಕ್ಕೆ ಪಡೆದುಕೊಂಡು ಮಂಡಳಿಯಿAದ ವಸತಿ ನಿರ್ಮಿಸಲು ದಿಬ್ಬೂರು ದೇವರಾಜ್ ಅರಸು ಬಡಾವಣೆಯ ಸ್ಲಂ ನಿವಾಸಿಗಳಿಗೆ ಹಂಚಿಕೆಪತ್ರ ಮತ್ತು ನಗರ ಪಾಲಿಕೆಗೆ ಹಸ್ತಾಂತರಿಸಿಕೊAಡು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು, ಎನ್,ಆರ್ ಕಾಲೋನಿ ಭಾಗ-2 ಮತ್ತು ಭಾರತಿ ನಗರ ಭಾಗ-2ರನ್ನು ಕೊಳಚೆ ಪ್ರದೇಶವೆಂದು ಘೋಷಿಸಿ ಮಾರಿಯಮ್ಮ ನಗರದ ಸರ್ವೇ 120ರಲ್ಲಿ ದೇವಸ್ಥಾನ ಮತ್ತು ಹೆಚ್ಚುವರಿ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವುದು, ಎಸ್.ಎನ್ ಪಾಳ್ಯ ಮತ್ತು ಅರಳೀಮರದ ಪಾಳ್ಯ, ಕೊಳಚೆ ಪ್ರದೇಶಗಳಿಗೆ ಹಕ್ಕುಪತ್ರ ನೀಡಬೇಕು ಹಾಗೂ ಕೋಡಿಗಳ್ಳ, ಇಸ್ಮಾಯಿಲ್ ನಗರ ಹಂದಿ ಜೋಗಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಮತ್ತು ವಿವಿಧ ಬೇಡಿಕೆಗಳ ಪರಿಹಾರಕ್ಕೆ ಜಿಲ್ಲಾಧಿಕಾರಿಗಳು ಸ್ಲಂ ಜನರ ಕುಂದು ಕೊರತೆ ಸಭೆ ಕರೆಯುವಂತೆ ಆಗ್ರಹಿಸಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು,
ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ನಮ್ಮ ನಿರಂತರ ಹೋರಾಟದಿಂದ 2022ರ ಸಾಲಿನಲ್ಲಿ 17ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸಿ ನಗರ ಪಾಲಿಕೆಗೆ ನಿವೇಶನ ರಹಿತರಿಗೆ ನಿವೇಶನ ನೀಡಲು ಸ್ತಾಂತರಿಸಿದೆ ಇದರಲ್ಲಿ 400 ಮಹಿಳೆಯರಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ 4 ಎಕರೆ ಭೂಮಿಯನ್ನು ಹಿಂದಿನ ಜಿಲ್ಲಾಧಿಕಾರಿಗಳಾದ ವೈಎಸ್ ಪಾಟೀಲ್ ಕಾಯ್ದಿರಿಸಿದ್ದಾರೆ ಆದರೆ ಇದುವರೆಗೂ ಫಲಾನುಭವಿಗಳ ಪಟ್ಟಿಯನ್ನು ನಗರಪಾಲಿಕೆ ಸಮೀಕ್ಷೆ ಮಾಡದೇ ಭೂಮಿಯನ್ನು ಗುರುತಿಸಿ ಸ್ವಾಧೀನಕ್ಕೆ ನೀಡದೇ ನಿರ್ಲಕ್ಷö್ಯ ಮಾಡಿದೆ 2017ರಲ್ಲಿ ನಗರದ ವಿವಿಧ ಕೊಳಚೆ ಪ್ರದೇಶಗಳ 1200 ಕುಟುಂಬಗಳನ್ನು ಸ್ಥಳಾಂತರಿಸಿದ್ದು ಫಲಾನುಭವಿಗಳಿಗೆ ಹಂಚಿಕೆ ಪತ್ರಗಳನ್ನು ಇದುವರೆಗೂ ನೀಡಿಲ್ಲ ಹಾಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಲು ನಗರಸಭೆಗೆ ಹಸ್ತಾಂತರ ಮಾಡಿಕೊಂಡಿಲ್ಲ ಸರ್ವೇ ನಂ, 120 ಸರ್ಕಾರಿ ಕಂದಾಯ ಭೂಮಿಯಾಗಿದ್ದು ಈ ಪ್ರದೇಶದಲ್ಲಿ 38 ಗುಂಟೆ ಮಾರಿಯಮ್ಮ ನಗರ ಪ್ರದೇಶವಿದೆ. ಈ ಪ್ರದೇಶದಲ್ಲಿ ದೇವಸ್ಥಾನ ಮತ್ತು ಹೆಚ್ಚುವರಿ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿ 2024-25ನೇ ಸಾಲಿನ ನಗರಪಾಲಿಕೆ ಸಾಲಿನಲ್ಲಿ ಕೊಳಚೆ ಪ್ರದೇಶಗಳಲ್ಲಿ ಅಭಿವೃದ್ಧಿ ಕೈಗೊಳ್ಳಲು ಪ್ರತ್ಯೇಕ ಅನುಧಾನವನ್ನು ಮೀಸಲಿಡಬೇಕು. ಈ ಎಲ್ಲಾ ಒತ್ತಾಯಗಳನ್ನು ಈಡೇರಿಸಲು ಜಿಲ್ಲಾಧಿಕಾರಿಗಳು ತುರ್ತಾಗಿ ಕುಂದು ಕೊರತೆ ಸಭೆ ಕರೆಯಬೇಕು ಕಾರಣ ಈ ಎಲ್ಲಾ ಬೇಡಿಕೆಗಳನ್ನು ಉಸ್ತುವಾರಿ ಸಚಿವರಾದ ಡಾ. ಜಿ ಪರಮೇಶ್ವರ್ ರವರ ಜನತಾ ದರ್ಶನದಲ್ಲಿ ನೀಡಿ 3 ತಿಂಗಳು ಕಳೆದರು ಜಿಲ್ಲಾಡಳಿತ 1 ಸಮಸ್ಯೆಯನ್ನು ಪರಿಹರಿಸಿಲ್ಲ ಎಂದರು.
ಉಸ್ತುವಾರಿ ಸಚಿವರ ಜನತಾ ದರ್ಶನದಲ್ಲಿ ನೀಡಿರುವ ಸ್ಲಂ ಜನರ ದೂರುಗಳಿಗೆ ಜಿಲ್ಲಾಡಳಿತ ಪರಿಹಾರ ನೀಡಿಲ್ಲ
Leave a comment
Leave a comment