ತುಮಕೂರು:- ಸರ್ಕಾರ ನೀರಾವರಿ ನೆಲೆಮೂಲಗಳನ್ನ ಅಭಿವೃದ್ಧಿಗೊಳಿಸುವ ಸಲುವಾಗಿ ಕೋಲಾರ ಚಿಕ್ಕಬಳ್ಳಾಪುರ ತುಮಕೂರು ಭಾಗಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿ ಎತ್ತಿನಹೊಳೆ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ಇದರ ನಾಲಾ ನಿರ್ಮಾಣ ಕಾರ್ಯವು ಇದೀಗ ಅನೇಕ ಕಡೆಗಳಲ್ಲಿ ಅಭಿವೃದ್ಧಿಗೊಳ್ಳುತ್ತಾ ಇದೆ ಅದೇ ರೀತಿಯಾಗಿ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ವ್ಯಾಪ್ತಿಯ ಬೈರಾಪುರ ಮಲ್ಲೇನಹಳ್ಳಿ ಮಾಡ್ಲೆಹಳ್ಳಿ ಗ್ರಾಮಗಳ ಸುಮಾರು 80ಕ್ಕೂ ಹೆಚ್ಚು ಎಕ್ಕರೆ ಜಮೀನುಗಳು ಎತ್ತಿನಹೊಳೆ ನಾಲೆ ನಿರ್ಮಾಣಕ್ಕೆ ಭೂಸ್ವಾಧೀನಗೊಂಡಿದ್ದು ಈ ಜಮೀನುಗಳಿಗೆ ಗರಿಷ್ಠ 75,000 ಪರಿಹಾರ ಬೆಲೆ ನೀಡಬೇಕು ಎಂದು ಈ ಗ್ರಾಮಗಳ ರೈತರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಈ ಕುರಿತಾಗಿ ಸುದ್ದಿಗೋಷ್ಠಿ ನಡೆಸಿ ಹತ್ತಾರು ರೈತರು ಮಾತನಾಡಿದರು.
ಇದೇ ವೇಳೆ ಮಲ್ಲೇನಹಳ್ಳಿ ರೈತ ಮುಖಂಡ ಕಾಂತರಾಜು ಬಿ.ಬಿ. ಅವರು ಮಾತನಾಡಿ ಕಿಬ್ಬನಹಳ್ಳಿ ಹೋಬಳಿ ವ್ಯಾಪ್ತಿಯ ಬೈರಾಪುರ, ಮಲ್ಲೇನಹಳ್ಳಿ, ಮಾಡ್ಲೆಹಳ್ಳಿ ಗ್ರಾಮಗಳ ಜಮೀನುಗಳು ಎತ್ತಿನಹೊಳೆಗೆ ಒತ್ತುವರಿಯಾಗಿದೆ ಇದರಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ಗಿಡ ಮರ ಕೊಳವೆಬಾವಿ ಸೇರಿದಂತೆ ಅನೇಕ ಖನಿಜ ಸಂಪತ್ತು ಇದ್ದು ಇದಕ್ಕೆಲ್ಲ ಪರಿಹಾರ ನೀಡುವುದಾಗಿ ತಿಳಿಸಿದ ಎತ್ತಿನಹೊಳೆ ನಾಲಾ ವಲಯದ ಅಧಿಕಾರಿಗಳು ಇವರಿಗೂ ಯಾವುದೇ ರೀತಿಯ ಪರಿಹಾರ ನೀಡದೆ 2018 ರಲ್ಲಿ ನಿರ್ಮಾಣ ಹಂತದಿoದ ಹಿಡಿದು ಎತ್ತಿನಹೊಳೆ ನಾಲಾವಲಯದಲ್ಲಿ ನೀರು ಹರಿಯುವ ತನಕ ಪರಿಹಾರ ನೀಡುವುದಾಗಿ ತಿಳಿಸಿದ್ದು ಈ ಪರಿಹಾರದ ರೂಪದ ಹಣವನ್ನು ನಿಗದಿಪಡಿಸಿರುವುದಕ್ಕಿಂತ ಅಂದರೆ ಹೆಚ್ಚಾಗಿ ಒಂದು ಕುಂಟೆಗೆ 75,000 ರೂ. ಗಳನ್ನ ನೀಡಬೇಕು ಎಂದು ತಿಳಿಸಿದರು