ದುಬೈ ಅ. ೨೯: ‘ಭಾರತೀಯ ಭವ್ಯ ಪರಂಪರೆಯನ್ನು ಉಳಿಸುವಲ್ಲಿ ಮತ್ತು ಜನಸಾಮಾನ್ಯನ ಬದುಕಿನಲ್ಲಿ ಶಿಕ್ಷಣ ಹಾಗೂ ಸಂಸ್ಕಾರ ನೀಡುವ ಮಹತ್ತರ ಕೈಂಕರ್ಯದಲ್ಲಿ ಸುತ್ತೂರಿನ ಶ್ರೀ ಶಿವರಾತ್ರೇಶ್ವರ ಮಹಾಸಂಸ್ಥಾನದ ಕೊಡುಗೆ ಅತ್ಯಪಾರ. ಭಾರತದ ಪವಿತ್ರ ಮಣ್ಣಿನ ಹತ್ತಾರು ಸಂಪ್ರದಾಯಗಳೊಡನೆ ಈ ಸಂಸ್ಥೆಯು ಅತ್ಯಂತ ಅವಿನಾ ಸಂಬAಧ ಹೊಂದಿದೆ. ರಾಜ್ಯದ ಎಲ್ಲಾ ರಾಮಕೃಷ್ಣ ಆಶ್ರಮಗಳ ಕಾರ್ಯಯೋಜನೆಗಳ ಸಾರ್ಥಕ ಅನುಷ್ಠಾನದಲ್ಲಿ ಶ್ರೀಮಠವು ನೀಡುತ್ತಿರುವ ಸಹಕಾರವು ಅತ್ಯಂತ ಸ್ಮರಣೀಯ’ ಎಂದು ಗದಗ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತೀ ಅಭಿಪ್ರಾಯಪಟ್ಟರು.
ಅವರು ದುಬೈನಲ್ಲಿ ಶ್ರೀಮಠವು ನಡೆಸುತ್ತಿರುವ ಜೆ.ಎಸ್.ಎಸ್. ಇಂಟರ್ನ್ಯಾಷನಲ್ ಶಾಲೆಯಲ್ಲಿ ‘ಗಾಂಧಿ-ಶಾಸ್ತಿç ಜನ್ಮದಿನ’ದಂದು ಆಯೋಜಿಸಲಾಗಿದ್ದ ಯುವಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತೀಯವರು, ‘ವಿದ್ಯಾರ್ಥಿದೆಸೆಯು ಸಮಗ್ರ ಬದುಕಿಗೆ ಅಡಿಪಾಯ. ಈ ಅವಧಿಯಲ್ಲಿ ಸಂಪಾದಿಸಿದ ಜೀವನಮೌಲ್ಯಗಳು ನಮಗೆ ಶ್ರೀರಕ್ಷೆ. ವಿದ್ಯಾರ್ಥಿಗಳು ದಿನನಿತ್ಯದ ಬದುಕಿನಲ್ಲಿ ಶಕ್ತಿ ಮತ್ತು ಶ್ರದ್ಧೆಯ ಉಪಾಸಕರಾಗಬೇಕು. ಉತ್ಸಾಹಪೂರ್ವಕ ಮನೋಧರ್ಮದೊಂದಿಗೆ ಬದುಕನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯಬೇಕು’ ಎಂದು ಕಿವಿಮಾತು ಹೇಳಿದರು.
ರಾಮನಗರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ಪರಮಾನಂದಜೀರವರು ವೇದಘೋಷ ಮತ್ತು ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಖ್ಯಾತವೈದ್ಯರಾದ ಡಾ. ಋಷಿಸಿಂಗ್ ಮತ್ತು ಶಿಕ್ಷಣ ತಜ್ಞ ಡಾ. ಗೋವಿಂದ ನಾಯಕ್ ಉಪಸ್ಥಿತರಿದ್ದರು.
ದುಬೈನ ಜೆ.ಎಸ್.ಎಸ್. ಇಂಟರ್ನ್ಯಾಷನಲ್ ಶಾಲೆಯಲ್ಲಿ ನೆರವೇರಿದ ‘ಗಾಂಧಿ-ಶಾಸ್ತಿçà ಜನ್ಮದಿನ’ದಂದು ಯುವಸಮ್ಮೇಳನದಲ್ಲಿ ಶಿಕ್ಷಣತಜ್ಞ ಡಾ. ಗೋವಿಂದನಾಯಕ್, ಸ್ವಾಮಿ ಪರಮಾನಂದಜೀ, ಸ್ವಾಮಿ ನಿರ್ಭಯಾನಂದಜೀ, ಸ್ವಾಮಿ ವೀರೇಶಾನಂದಜೀ ಮತ್ತು ಡಾ. ಋಷಿಸಿಂಗ್ ಇದ್ದಾರೆ.
ಕೃಪೆಗಾಗಿ
ಸುತ್ತೂರು ಮಠದ ಕೊಡುಗೆ ಶ್ಲಾಘನೀಯ