ನನ್ನ ರಾಜಕೀಯ ಜೀವನದ ಇತಿಹಾಸದಲ್ಲಿ ಇಂದಿ£Aದ ಹೊಸ ಯುಗ ಆರಂಭವಾಗುತ್ತಿದ್ದು, ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ £Ãಡಿರುವುದಾಗಿ ಮಾಜಿ ಸಚಿವ ಹಾಗೂ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸೊಗಡು ಶಿವಣ್ಣ ತಿಳಿಸಿದರು.
ನಗರದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಗರ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ತಮಗೆ ಸಿಗುತ್ತದೆ ಎಂಬ ವಿಶ್ವಾಸದಿಂದ ಈಗಾಗಲೆ ನಗರದಲ್ಲಿ ಜೋಳಿಗೆ ಹಿಡಿದು ಮತಭಿಕ್ಷೆ ಮೂಲಕ ಪ್ರಚಾರ ಆರಂಭಿಸಿದ್ದ ಅವರು, ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನದಿಂದ ಪಕ್ಷಕ್ಕೆ ರಾಜೀನಾಮೆ £Ãಡಿರುವುದಾಗಿ ತಿಳಿಸಿದರು.
ಇಂದು ಬೆಳಿಗ್ಗೆ ಇ-ಮೇಲ್ ಮೂಲಕ ಪಕ್ಷದ ರಾಜ್ಯಾಧ್ಯಕ್ಷರಾಗಿ ತಮ್ಮ ರಾಜೀನಾಮೆ ಪತ್ರವನ್ನು ರವಾ£ಸಿರುವ ಪ್ರತಿಯನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ ಅವರು, £ನ್ನೆ ಸಂಜೆ ಮಾಕಂ ಕಲ್ಯಾಣ ಮಂಟಪದಲ್ಲಿ ಅಭಿಮಾ£ಗಳ, ಹಿತೈಷಿಗಳ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಚರ್ಚಿಸಿ ಈ £ರ್ಧಾರ ಕೈಗೊಂಡಿರುವುದಾಗಿ ಘೋಷಿಸಿದರು.
ಪ್ರಸಕ್ತ ಚುನಾವಣೆಯಲ್ಲಿ ನಗರ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎಂದ ಅವರು, ಏ.೨೦ರೊಳಗೆ ನಾಮಪತ್ರ ಸಲ್ಲಿಕೆ ಹಾಗೂ ಯಾವ ರೀತಿ ಸ್ಪರ್ಧಿಸುವ ರೂಪುರೇಷೆಗಳನ್ನು ಬಹಿರಂಗಪಡಿ ಸುವುದಾಗಿ ತಿಳಿಸಿದರು.
ನಾನು ಜೀವಂತ ಇರುವವರೆಗೂ ಕಾಂಗ್ರೆಸ್ ಪಕ್ಷ ಸೇರುವುದಿಲ್ಲ ಎಂದ ಅವರು, ಜೆಡಿಎಸ್ ಪಕ್ಷ ಮತ್ತು ಆ ಪಕ್ಷದ ನಾಯಕರ ಬಗ್ಗೆ ಮೃದುವಾಗಿ ಮಾತನಾಡಿದ್ದು, ವಿಶೇಷವಾಗಿತ್ತು. ಜಾತ್ಯಾತೀತವಾಗಿ ಎಲ್ಲ ಜನರೊಂದಿಗೆ ಅವರ ಸಮಸ್ಯೆಗಳಿಗೆ ಸ್ಪಂದಿಸಿಕೊAಡು ಬಂದಿದ್ದ ನನಗೆ ಟಿಕೆಟ್ ಕೈತಪ್ಪಿದ್ದು, ಬೇಸರ ಉಂಟು ಮಾಡಿದೆ. ಮೂಲ ಬಿಜೆಪಿಯ ಕಾರ್ಯಕರ್ತರಾದ ನನಗೆ ಟಿಕೆಟ್ ಕೈತಪ್ಪಿ ವಲಸಿಗರಿಗೆ ಟಿಕೆಟ್ ಸಿಕ್ಕಿದ್ದು, ಮನಸ್ಸಿಗೆ ನೋವುಂಟು ಮಾಡಿದೆ ಎಂದರು.
ಹಾಲಿ ಸಂಸದ, ಶಾಸಕ, ಮಾಜಿ ಶಾಸಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಈ ನಾಲ್ಕು ಮಂದಿ ನನಗೆ ಟಿಕೆಟ್ ಕೈತಪ್ಪಲು ಕಾರಣ ಎಂದು ನೇರವಾಗಿ ಆರೋಪಿಸಿದರು. ರಾಜಕೀಯವಾಗಿ ನನ್ನನ್ನು ಮುಗಿಸಲು ಸಂಚು ರೂಪಿಸಿ, ಟಿಕೆಟ್ ತಪ್ಪಿಸಿದ್ದಾರೆ ಎಂದು ದೂರಿದರು.
ತಿಪಟೂರಿನ ಕಲ್ಪತರು ಇಂಜಿ£ಯರಿAಗ್ ಕಾಲೇಜಿಗೆ ಮಂಜೂರಾಗಿದ್ದ ೫೦ ಕೋಟಿ ರೂ. ಅನುದಾನವನ್ನು ಅಪ್ಪ, ಮಗ ಸೇರಿ ತಮ್ಮ ಸಿಐಟಿ ಕಾಲೇಜಿಗೆ ಅನುದಾನ ಪಡೆದುಕೊಂಡಿದ್ದಾರೆ. ಕಾಲೇಜು ಕಟ್ಟಿರುವ ಜಾಗ ಸಹ ವಿವಾದಕ್ಕೀಡಾಗಿದ್ದು, ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿವೆ. ಸ್ಮಾರ್ಟ್ಸಿಟಿ ಯೋಜನೆಯಡಿ ಸಾಕಷ್ಟು ಅವ್ಯವಹಾರ ನಡೆದಿದ್ದು, ರಿಂಗ್ ರಸ್ತೆ £ರ್ಮಾಣ ಕಾಮಗಾರಿಯಲ್ಲಿ ೧೨೦ ಕೋಟಿ, ಕ್ರೀಡಾಂಗಣ ನವೀಕರಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಮುಂದಿನ ದಿನಗಳಲ್ಲಿ ಇವೆಲ್ಲವನ್ನು ಬಹಿರಂಗಪಡಿಸುವೆ ಎಂದ ಅವರು, ಈ ಎಲ್ಲ ಹಗರಣಗಳನ್ನು ಸಿಬಿಐ ತ£ಖೆಗೆ ಒಳಪಡಿಸುವಂತೆ ಒತ್ತಾಯಿಸಿದರು.
ನಗರ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಸಾರ್ವಜ£ಕ ಚರ್ಚೆಗೆ ಸಿದ್ಧವಿರುವುದಾಗಿ ಬಹಿರಂಗ ಸವಾಲು ಹಾಕಿದ ಅವರು, ಈ ಬಗ್ಗೆ ಯಾರೆ ಚರ್ಚೆಗೆ ಬಂದರೂ ದಾಖಲೆ ಸಹಿತ ವಿವರ £Ãಡುವುದಾಗಿ ತಿಳಿಸಿದರು.
ಮುಖಂಡರಾದ ಜಯಸಿಂಹರಾವ್, ದ£ಯಾಕುಮಾರ್, ನರಸಿಂಹಯ್ಯ, ಶಾಂತರಾಜು, ಶಬ್ಬಿರ್ ಅಹಮದ್, ಚೌಡೇಶ್, ಕುಮಾರಸ್ವಾಮಿ, ರಾಜಕುಮಾರ್ ಗುಪ್ತ, ಹರೀಶ್, ಟಿ.ವಿ.ಮಂಜುನಾಥ್, ಪ್ರಕಾಶ್, ವೀರಭದ್ರಿ ಸುದ್ದಿಗೋಷ್ಠಿಯಲ್ಲಿದ್ದರು.
ರಾಜಕೀಯ ಜೀವನದ ಇತಿಹಾಸದಲ್ಲಿ ಹೊಸ ಯುಗ ಆರಂಭ, ಮಾಜಿ ಸಚಿವ ಸೊಗಡು ಶಿವಣ್ಣ

Leave a comment
Leave a comment