KALBURGI : ಕಲಬುರಗಿ ತಾಲೂಕಿನ ಹಸನಾಪುರ ಬಳಿ ಕಾರು, ಲಾರಿ ಮತ್ತು ಬೈಕ್ ಮಧ್ಯೆ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ನಡೆದಿದೆ.. ರಾಘವೇಂದ್ರ (35), ಮುಜಾಹಿದ್ (30), ಹುಸೇನ ಬಿ (45) ಮತ್ತು ಮೌಲಾಬಿ (50) ಸ್ಥಳದಲ್ಲೆ ಸಾವನ್ನಪ್ಪಿದಾರೆ. ಸಿಂದಗಿಯಿಂದ ಚಿತ್ತಾಪುರಕ್ಕೆ ಹೊರಟಿದ್ದ ಬೈಕ್ ಲಾರಿಗೆ ಡಿಕ್ಕಿಯಾಗಿದೆ, ಬಳಿಕ ಹಿಂಬದಿಯಿಂದ ಲಾರಿಗೆ ಕಾರು ಡಿಕ್ಕಿಯಾಗಿದೆ.. ಇನ್ನೂ ಘಟನೆಯಲ್ಲಿ ಬೈಕ್ ಸವಾರ ಮತ್ತು ಕಾರಿನಲ್ಲಿದ್ದ ಇಬ್ಬರು ಸಹಿತ ಮೂರು ಜನಕ್ಕೆ ಗಾಯಗಳಾಗಿದ್ದು, ಸ್ಥಳಕ್ಕೆ ಸಂಚಾರಿ-1 ಪೊಲೀಸರು ಭೇಟಿ ನೀಡಿದ್ದಾರೆ.
