ತುಮಕೂರು: ಉನ್ನತ ತಂತ್ರಜ್ಞಾನವಿಲ್ಲದ ಕಾಲದಲ್ಲಿಯ ಸಂಶೋಧಕರ, ವಿಜ್ಞಾನಿಗಳ ಅಧ್ಯಯನ ಹಾಗೂ ಆವಿಷ್ಕಾರಗಳನ್ನು ನಾವಿಂದು ತಂತ್ರಜ್ಞಾನದೊAದಿಗೆ ಪಠ್ಯದಲ್ಲಿ ಅಳವಡಿಸಿಕೊಂಡು ಓದುತ್ತಿದ್ದೇವೆ, ಪ್ರಾಯೋಗಿಕವಾಗಿ ಕಲಿಯುತ್ತಿದ್ದೇವೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಜೀವರಸಾಯನಶಾಸ್ತç ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ. ಕೆ. ಕೆಂಪರಾಜು ಹೇಳಿದರು.
ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಜೀವರಸಾಯನಶಾಸ್ತç ಅಧ್ಯಯನ ವಿಭಾಗವು ಆಹಾರ ವಿಜ್ಞಾನ ಮತ್ತು ಪೌಷ್ಠಿಕಾಂಶ ಅಧ್ಯಯನ ವಿಭಾಗದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ಜೈವಿಕ ವಿಜ್ಞಾನದಲ್ಲಿ ಪ್ರಸ್ತುತ ಪ್ರವೃತ್ತಿಗಳು’ ಕುರಿತ ರಾಷ್ಟಿçÃಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಜ್ಞಾನದ ಹರಿವಿನ ಪ್ರಭಾವವನ್ನು ಸಂಶೋಧನೆಗಳಲ್ಲಿ ತೊಡಗಿಸಿಕೊಂಡು, ಪ್ರವೃತ್ತಿಗಳೊಂದಿಗೆ ಸಾಗುವಾಗ ಆವಿಷ್ಕಾರಗಳ ಹೊಳಹು, ಪ್ರಯೋಗ, ಸಾಧನೆ ಕರಗತವಾಗುತ್ತದೆ. ಪ್ರಯೋಗಶೀಲರಾಗುವವರೆಗೂ ನವೀಕರಿಸಲಾದ ತಂತ್ರಜ್ಞಾನವನ್ನು ಬಳಸುವಲ್ಲಿ ವಿಫಲರಾಗುತ್ತೇವೆ. ಅದನ್ನು ಬಳಸಿ ಹೊಸದನ್ನು ಸೃಷ್ಟಿಸಲು ಹಿಂದುಳಿಯುತ್ತೇವೆ. ತಂತ್ರಜ್ಞಾನ ಚಾಲಿತ ಯುಗದಲ್ಲಿ ಬುದ್ಧಿವಂತರಾಗಬೇಕು ಎಂದರು.
ವಿವಿ ಕುಲಸಚಿವರಾದ ನಾಹಿದಾ ಜûಮ್ ಜûಮ್ ಮಾತನಾಡಿ, ಆಹಾರ ವಿಜ್ಞಾನ ಮತ್ತು ಪೌಷ್ಠಿಕಾಂಶ ಅಧ್ಯಯನದಲ್ಲಿ ಪದವಿ ಪಡೆದರೆ ರಾಷ್ಟçಮಟ್ಟದಲ್ಲಿ ಉದ್ಯೋಗವಕಾಶಗಳು ಲಭಿಸಲಿವೆ. ಅತ್ಯುನ್ನತ ಶಿಷ್ಟಾಚಾರವಿರುವುದು ದೇಶದ ರಾಷ್ಟçಪತಿ, ನಂತರ ಪ್ರಧಾನ ಮಂತ್ರಿ ಅವರಿಗೆ. ಅವರ ಆಹಾರ ಸುರಕ್ಷತೆಗಾಗಿ ಉತ್ತಮ ಪೌಷ್ಠಿಕತಜ್ಞರನ್ನು ನೇಮಿಸಿರಲಾಗುತ್ತದೆ. ಅಂತಹ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಅವಕಾಶ ಪಡೆಯುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾನಿಲಯದ ಜೀವರಸಾಯನಶಾಸ್ತç ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ. ವಿ. ಆರ್. ದೇವರಾಜ್, ತುಮಕೂರು ವಿವಿ ವಿಜ್ಞಾನ ಕಾಲೇಜಿನ ಜೀವರಸಾಯನಶಾಸ್ತç ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಮನೋಹರ್ ಶಿಂಧೆ, ಆಹಾರ ವಿಜ್ಞಾನ ಮತ್ತು ಪೌಷ್ಠಿಕಾಂಶ ಅಧ್ಯಯನ ವಿಭಾಗದ ಸಂಯೋಜಕ ಡಾ. ದೇವರಾಜ ಎಸ್. ಉಪಸ್ಥಿತರಿದ್ದರು.
ಪ್ರಯೋಗಶೀಲತೆಯಿಂದ ತಂತ್ರಜ್ಞಾನದ ಸಾಫಲ್ಯ
Leave a comment
Leave a comment