ಕಲ್ಬುರ್ಗಿ ನಗರದಲ್ಲಿ ಇಂದು ಸೇಂಟ್ ಮೇರಿ ಶಾಲಾ ಸಭಾ ಗೃಹದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತಿ ಶಿಕ್ಷಕರಿಗೆ ಸನ್ಮಾನ ಮತ್ತು ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ಪರಮಪೂಜ್ಯ ಡಾ. ರಾಜಶೇಖರ್ ಶಿವಾಚಾರ್ಯರು ಹಿರೇಮಠ ಕಲಬುರ್ಗಿ ಇವರ ಮುಖಾಂತರ ಜ್ಯೋತಿ
ಬೆಳಗಿಸೋದರ ಮುಖಾಂತರ ಮತ್ತು ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ವೇದಿಕೆ ಮೇಲಿದ್ದ ಎಲ್ಲಾ ಗಣ್ಯ ವ್ಯಕ್ತಿಗಳು ಮತ್ತು ಮುಖ್ಯ ಅತಿಥಿಗಳಿಂದ ಪೂಜೆ ಸಲ್ಲಿಸುವುದು ಮುಖಾಂತರ ನಾಡಗೀತೆ ಮತ್ತು ಪ್ರಾರ್ಥನಾ ಗೀತೆ ಹಾಡಿನ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ಹಣಮಂತ್ ಮರಡಿ ಜಿಲ್ಲಾ ಸಂಘದ ಅಧ್ಯಕ್ಷರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿ ಸ್ಥಾನವನ್ನು ಫಾದರ್ ಜೋಸೆಫ್ ಪ್ರವೀಣ್ ವಹಿಸಿದರು ಪ್ರಾಸ್ತವಾಗಿ ಡಾ. ನಾಗಭೂಷಣ್ ಸಂಘದ ಕಾರ್ಯದರ್ಶಿ ಮಾತನಾಡಿದರು, ಅಚ್ಚುಕಟ್ಟಾಗಿ ಈ ಕಾರ್ಯಕ್ರಮ ನಿರೂಪಣೆಯನ್ನು ಜಿಲ್ಲಾ ಸಂಚಾಲಕರಾದ ಭಾನು ಕುಮಾರ್ ಹಿರೇಗೌಡ ನಿರೂಪಿಸಿದರು.ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ವಿಶೇಷ ಸನ್ಮಾನ್ಯತರಾಗಿ ಆಗಮಿಸಿದ ರಾಜ ಸಂಘದ ನೂತನ ಅಧ್ಯಕ್ಷರಾದ ಶ್ರೀ ಎನ್ ರಾಜಗೋಪಾಲ್ ಉಪಾಧ್ಯಕ್ಷರಾದ ಶ್ರೀ ಮುತ್ತಯ್ಯ ಮತ್ತು ಜಿಲ್ಲಾ ಸಂಚಾಲಕರಾದ ಭಾನು ಕುಮಾರ್ ಹಿರೇಗೌಡ ನೂತನ ಅಧ್ಯಕ್ಷರು ಕರ್ನಾಟಕ ತಾಲೂಕು ಜಿಲ್ಲೆಯ ತಾಲೂಕು ಶಿಕ್ಷಕರ ಪತ್ತಿನ ಸಂಘ , ಕಲ್ಯಾಣರಾವ ಬಿರಾದಾರ್, ಪ್ರಭುಲಿಂಗ ಮುಲ್ಗೆ, ಅಪ್ಪಸಾಹೇಬ್ ತೀರ್ಥ ಇವರೆಲ್ಲರನ್ನು ವಿಶೇಷವಾಗಿ ಸನ್ಮಾನಿಸಿದರು.ಸಾನಿಧ್ಯ ವಹಿಸಿದ ಡಾ. ರಾಜಶೇಖರ್ ಶಿವಾಚಾರ್ಯರು ಕಾರ್ಯಕ್ರಮ ಉದ್ದೇಶಿಸಿ
ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷರು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಅನುದಾನದ ಶಿಕ್ಷಕರಿಗೆ ಆಗುವ ಸಮಸ್ಯೆ ಕುರಿತು ಸುಧೀರ್ಘವಾಗಿ ಮಾತನಾಡಿದರು .ಕಾರ್ಯಕ್ರಮ ಗುರಿ ಉದ್ದೇಶದ ಕುರಿತು ಮತ್ತು ಶಿಕ್ಷಕರ ಸಮಸ್ಯೆಗಳನ್ನು ಹೋರಾಟದ ಮುಖಾಂತರ ನಾವೆಲ್ಲರೂ ಪಡೆದುಕೊಳ್ಳೋಣ ಎಂದರು. ತದನಂತರ ಸಂಘದ ರಾಜ ಉಪಾಧ್ಯಕ್ಷರಾದ ಮುತ್ತಯ್ಯ ರವರು ಮಾತನಾಡುತ್ತಾ ಅನುದಾನಿತ ಶಿಕ್ಷಕರಿಗೆ ಬರಬೇಕಾದ ಎಲ್ಲಾ ಸವಲತ್ತುಗಳನ್ನು ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರ ಗಮನಕ್ಕೆ ಈಗಾಗಲೇ ತಂದಿದ್ದೇವೆ ಮತ್ತೆ ಶಿಕ್ಷಕರ ಯಾವುದೇ ಸಮಸ್ಯೆ ಇದ್ದರೂ ನಾವು ಅದಕ್ಕೆ ಸ್ಪಂದಿಸುವ ಕೆಲಸ ಮಾಡುತ್ತೇವೆ ಎಂದರು .ಇದೇ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಭಾನು ಕುಮಾರ್ ಹಿರೇಗೋಳ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಕಾರ್ಯಕ್ರಮದ ಗುರಿ ಉದ್ದೇಶ ಕುರಿತು ಮತ್ತು ಶಿಕ್ಷಕರ ಸಮಸ್ಯೆಗಳಗಳನ್ನ ನಾವು ನೀವೆಲ್ಲರೂ ಹೋರಾಟದ ಮುಖಾಂತರ ಪಡೆದುಕೊಳ್ಳೋಣ ಆದರಿಂದ ಇದೇ ರೀತಿ ಒಗ್ಗಟ್ಟಿನಿಂದ ಇರೋಣ ಎಂದರು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಅನುದಾನಿತ ಶಾಲಾ ಮುಖ್ಯ ಗುರುಗಳು ಸಹ ಶಿಕ್ಷಕರು, ನಿವೃತ್ತ ಶಿಕ್ಷಕ ಶಿಕ್ಷಕಿಯರು bh ಮತ್ತು ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಎಲ್ಲಾ ಶಿಕ್ಷಕರು ಸಿಬ್ಬಂದಿ ವರ್ಗದವರು, ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.