ತಾಲೂಕು ಮಟ್ಟದ ಕ್ರೀಡಾಕೂಟ- ವಿದ್ಯಾನಿಧಿ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ
ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಇತ್ತೀಚೆಗೆ ಏರ್ಪಡಿಸಲಾಗಿದ್ದ ತುಮಕೂರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ನಗರದ ಪ್ರತಿಷ್ಠಿತ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿ/ನಿಯರು ಬಹುಮಾನಗಳನ್ನು ಗೆದ್ದುಕೊಂಡು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಬಾಲಕಿಯರ ವಿಭಾಗದ ಗುಂಪು ಆಟಗಳಲ್ಲಿ ಕಬಡ್ಡಿಯಲ್ಲಿ ಪ್ರಥಮ, ವಾಲಿಬಾಲ್ನಲ್ಲಿ ದ್ವಿತೀಯ, ೪೧೦೦ ರಿಲೆಯಲ್ಲಿ ಪ್ರಥಮ, ೪೪೦೦ ರಿಲೆಯಲ್ಲಿ ದ್ವಿತೀಯ ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ.
ವೈಯಕ್ತಿಕ ಆಟಗಳ ವಿಭಾಗದಲ್ಲಿ ನೂರು ಮೀ. ಓಟದಲ್ಲಿ ವೈಭವಿಪ್ರಿಯ ದ್ವಿತೀಯ, ಈಜು ಸ್ಪರ್ಧೆಯಲ್ಲಿ ಕಶಿಶ್ ಎ.ಜೈನ್ ಪ್ರಥಮ, ಯೋಗದಲ್ಲಿ ಮೀನಾಕ್ಷಿ ದ್ವಿತೀಯ ಮತ್ತು ಮೋನಿಕಾ ತೃತೀಯ, ಟೇಕ್ವಾಂಡೋದಲ್ಲಿ ಕೆ.ಟಿ. ಮಹಾಲಕ್ಷಿö್ಮ, ನಿವೇದಿತಾ ಆರ್., ಪ್ರಗತಿ ಸಿಂಗ್ ದ್ವಿತೀಯ ಮತ್ತು ತೃತೀಯ ಸ್ಥಾನ, ಎತ್ತರಜಿಗಿತದಲ್ಲಿ ಸಾಂಪ್ರತ ದ್ವಿತೀಯ ಸ್ಥಾನ, ೩೦೦೦ಮೀಟರ್ ನಡಿಗೆಯಲ್ಲಿ ಹರ್ಷಿತಾ ತೃತೀಯ ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ. ಈಜಿನಲ್ಲಿ ಕಶಿಶ್ ಹಾಗೂ ಖೋಖೋದಲ್ಲಿ ಜೀವಿತಾ ಹಾಗೂ ಲೇಖನ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದ ಗುಂಪು ಆಟಗಳಲ್ಲಿ ಚೆಸ್ನಲ್ಲಿ ಪ್ರಥಮ, ಥ್ರೋಬಾಲ್ ನಲ್ಲಿ ದ್ವಿತೀಯ ಹಾಗೂ ೪*೧೦೦ ರಿಲೆ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವೈಯಕ್ತಿಕ ಆಟಗಳ ವಿಭಾಗದಲ್ಲಿ ನೂರು ಮೀ ಓಟದ ಸ್ಪರ್ಧೆಯಲ್ಲಿ ಡೇನಿಯಲ್ ಪ್ರಸಾದ್ ಪ್ರಥಮ, ಕರಾಟೆಯಲ್ಲಿ ವೀರೇಶ್, ಈಜು ಸ್ಪರ್ಧೆಯಲ್ಲಿ ಗಣೇಶ್ ಪಣಾಗರ್, ಜಿಮ್ನಾಸ್ಟಿಕ್ ನಲ್ಲಿ ಗಗನ್, ಕುಸ್ತಿಯಲ್ಲಿ ಅಭಿಷೇಕ್, ಟೇಬಲ್ ಟೆನ್ನಿಸ್ ನಲ್ಲಿ ಶಶಾಂಕ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಫುಟ್ಬಾಲ್ನಲ್ಲಿ ರಶ್ವಂತ್ ಹಾಗೂ ಉತ್ಸವ್, ವಾಲಿಬಾಲ್ ನಲ್ಲಿ ದರ್ಶನ್ ಎಚ್.ಆರ್. ಖೋಖೋದಲ್ಲಿ ಪುರುಷೋತ್ತಮ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿದರು. ಪಠ್ಯದ ಜೊತೆಗೆ ಆಟೋಟಗಳಲ್ಲಿಯೂ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ನಿರ್ವಹಣೆ ತೋರಿರುವುದು ಸಂತೋಷದ ಸಂಗತಿ. ಈ ಮಕ್ಕಳು ಜಿಲ್ಲಾಮಟ್ಟದಲ್ಲಿಯೂ ಸಾಧನೆ ತೋರಿ ರಾಜ್ಯ ಮಟ್ಟದಲ್ಲಿ ಗೆಲ್ಲುವಂತಾಗಲಿ ಎಂದು ಅವರು ಹಾರೈಸಿದರು. ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.
ತಾಲೂಕು ಮಟ್ಟದ ಕ್ರೀಡಾಕೂಟ- ವಿದ್ಯಾನಿಧಿ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ
Leave a comment
Leave a comment