ಕಲಬುರಗಿ :ಎನ್ ಡಿ ಎ ಮೈತ್ರಿಕೂಟದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಮತ್ತು ಮೂರನೇ ಬಾರಿಗೆ ಪ್ರಧಾನಿಯಾಗಿ ದೇಶದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಹಿಂದೂ ಜಾಗೃತಿ ಸೇನೆ ಜಿಲ್ಲಾ ಘಟಕದ ಕಲಬುರಗಿ ವತಿಯಿಂದ ನಗರದಲ್ಲಿ ಕ್ಷೀರಾಭಿಷೇಕ ಮಾಡಿ, ಸಿಹಿ ಹಂಚಿ ಪಟಾಕಿ ಹಚ್ಚುವ ಮೂಲಕ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಲಬುರ್ಗಿಯ ಸರ್ದಾರ ವಲ್ಲಭಾಯಿ ಪಟೇಲ್ ವೃತ್ತದಲ್ಲಿ ಹಿಂದೂ ಜಾಗೃತ ಸೇನೆ ವತಿಯಿಂದ ವಿಜಯೋತ್ಸವ ವನ್ನು ಆಚರಿಸಲಾಯಿತು, ನಂತರ ಮಾತನಾಡಿದ ಹಿಂದೂ ಜಾಗೃತಿ ಸೇನೆ ಜಿಲ್ಲಾಧ್ಯಕ್ಷರಾದ ಲಕ್ಷ್ಮೀಕಾಂತ ಸಾದ್ವಿ, ಮೋದಿಯವರು ಮತ್ತೊಮ್ಮೆ ಮೂರನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾಗಿ ದೇಶದ ಚುಕ್ಕಾಣಿ ಹಿಡಿಯುತ್ತಿರುವದು ಅತೀವ ಸಂತಸವಾಗಿದ್ದು, ಹಾಗಾಗಿ ಭಾರತ ಮೋದಿಯವರ ನೇತೃತ್ವದಲ್ಲಿ ವಿಶ್ವ ಗುರುವಾಗುವದರಲ್ಲಿ ಹಾಗೂ ವಿಕಸಿತ ಭಾರತ ನಿರ್ಮಾಣ ವಾಗುವದರಲ್ಲಿ ಯಾವುದೇ ಸಂದೇಹವಿಲ್ಲ,ಎಂದರು.ನಂತರ ಹಿಂದೂ ಪರ ಕಾರ್ಯಕರ್ತರು ಪಟಾಕಿ ಹಚ್ಚಿ ಸಂಭ್ರಮಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಹಿಂದೂ ಜಾಗೃತಿ ಸೇನೆ ಜಿಲ್ಲಾ ಅಧ್ಯಕ್ಷ ಲಕ್ಷ್ಮಿಕಾಂತ ಸ್ವಾದಿ. ರಾಜು ಕಮಲಾಪುರೆ. ಸಿದ್ದು ಕಂದಗಲ್. ದಶರಥ ಇಂಗೋಳೇ. ರಾಜು ಸ್ವಾಮಿ. ಚಿದಾನಂದ್ ಮಠಪತಿ. ಸಂಗು ಕಾಳನೂರ. ರಾಮ ಸೇವಕ ಶಿವು. ಆನಂದ್ ಶಿರ್ಕೆ. ವಿಕಾಸ್ ಸಗರ್. ಅರ್ಜುನ್ ಅಡೆ.ರಘು ಗುತ್ತೇದಾರ. ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು*