
೧೩೨-ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಚಾರ
ಶಾಂತಿ, ಅಭಿವೃದ್ಧಿ, ಪಾರದರ್ಶಕ ಆಡಳಿತಕ್ಕೆ ಬೆಂಬಲಿಸಿ:ಸೊಗಡು ಶಿವಣ್ಣ
ತುಮಕೂರು: ಸರ್ವಾಂಗೀಣ ಅಭಿವೃದ್ಧಿ, ಶಾಂತಿ, ನೆಮ್ಮದಿ, ಪಾರದರ್ಶಕ ಆಡಳಿತ ಮತ್ತು ಸರ್ವ-ಜನರ ಹಿತ ಬಯಸುವ ನನಗೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬೆಂಬಲಿಸಿ ಆರ್ಶೀವದಿಸಿ ಜಯಶೀಲರನ್ನಾಗಿ ಮಾಡುವಂತೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣನವರು ನಗರದ ಸ್ವಾಭಿಮಾನಿ ತುಮಕೂರಿನ ಸಮಸ್ತ ಮತದಾರರಿಗೆ ವಿನಂತಿಸಿದ್ದಾರೆ.



