ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಆಗಿರುವಂತ ಎಲ್ಲ ಕಾಮಗಾರಿಗಳ ಸಮಗ್ರ ತನಿಖೆಗೆ ಆದೇಶ ಬಿ.ಸುರೇಶ್ ಗೌಡ
ಕುಡಿಯುವ ನೀರಿಗಾಗಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಬಿ.ಸುರೇಶ ಗೌಡ
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮನೆಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು ಎಂದು ಶಾಸಕ ಬಿ ಸುರೇಶ್ ಗೌಡ ತಿಳಿಸಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚೋಳೇನಹಳ್ಳಿ ಗ್ರಾಮದಲ್ಲಿ 18 ಲಕ್ಷ ರೂಗಳ ಅಂದಾಜು ಮೊತ್ತದ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕಾಮಗಾರಿಯ ಗುಣಮಟ್ಟದಲ್ಲಿ ಲೋಪವಾದರೆ ಸಮಗ್ರವಾಗಿ ತನಿಖೆ ಮಾಡಿಸಿ ಕಪ್ಪುಪಟ್ಟಿಗೆ ಸೇರಿಸುತ್ತೇನೆ ಇದಕ್ಕೆ ಅವಕಾಶ ನೀಡದಂತೆ ಗುಣಮಟ್ಟದ ಕಾಮಗಾರಿ ಮಾಡಲು ಸುರೇಶ್ ಗೌಡ ಗುತ್ತಿಗೆದಾರರಿಗೆ ತಾಕಿತು ಮಾಡಿದರು.
ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಆಗಿರುವಂತ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಪ್ರವಾಸದ ಸಮಯದಲ್ಲಿ ಗ್ರಾಮಸ್ಥರು ನೀಡಿರುವ ದೂರುಗಳ ಹಿನ್ನೆಲೆಯಲ್ಲಿ ಎಲ್ಲ ಕಾಮಗಾರಿಗಳ ಸಮಗ್ರ ತನಿಖೆಗೆ ಆದೇಶ ಮಾಡಿರುವುದಾಗಿ ಶಾಸಕ ಬಿ. ಸುರೇಶ್ ಗೌಡ ತಿಳಿಸಿದರು.
ಯಾವುದೇ ಒಂದು ಕಾಮಗಾರಿಯನ್ನು ಅನುಷ್ಠಾನ ಮಾಡುವಾಗ ನಾನು ಬಹು ವರ್ಷಗಳಿಗೆ ಯೋಚನೆ ಮತ್ತು ಯೋಜನೆ ಮಾಡಿರುತ್ತೇನೆ. ಹೀಗೇ ನಿರ್ಮಾಣ ಮಾಡಿದಾಗ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ ಎಂದು ಶಾಸಕರು ತಿಳಿಸಿದರು.
ಅಭಿವೃದ್ಧಿಯ ಅನುದಾನ ಎಂದರೆ ಕೇವಲ ರಿಪೇರಿ, ಸುಣ್ಣಬಣ್ಣ ಮಾಡಲು ಮಾತ್ರ ಅಲ್ಲ ಯಾವುದೇ ಕಾಮಗಾರಿಯನ್ನು ಕೈಗೆತ್ತಿಕೊಂಡರೆ ಹತ್ತಾರು ವರ್ಷಗಳ ಕಾಲ ಅದಕ್ಕೆ ಮತ್ತೆ ಹಣ ನೀಡಬಾರದು ಆ ರೀತಿಯ ಸುಸ್ತಿರ ಮತ್ತು ಸುಭದ್ರವಾಗಿ ದೇಶ ಕಟ್ಟುವಂತ ಕೆಲಸ ಮಾಡಬೇಕೆಂದು ಸುರೇಶ್ ಗೌಡ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನೀಲಕಂಠಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಅಂಜನಪ್ಪ, ಮುಖಂಡರಾದ ಸಿದ್ದೇಗೌಡ, ಮಾಯರಂಗಣ್ಣ, ಗ್ರಾಮ್ ಪಂಚಾಯತಿ ಉಪಾಧ್ಯಕ್ಷ ಕಿರಣ್ ಕುಮಾರ್, ಗಿರೀಶ, ರಾಜಣ್ಣ, ಸುಮಿತ್ರ ಶ್ರೀನಿವಾಸ ಹಾಗೂ ಮತ್ತಿತರರು ಉಪಸ್ಥಿತರಿದ್ದರು.