ಕ್ರಿಯಾಶೀಲತೆಯಿಂದ ಯಶಸ್ಸು: ಪ್ರಿಯಾ ಪ್ರದೀಪ್
ಸಂಸ್ಥೆಯ ಕುರಿತು ವಿದ್ಯಾರ್ಥಿಗಳು ಹೊಂದಿರುವ ಧನಾತ್ಮಕ ಮನೋಭಾವವು ನಮ್ಮ ಮುಂದಿನ ಹೆಜ್ಜೆಯನ್ನು ನಿರ್ಧರಿಸುವಲ್ಲಿ ನೆರವಾಗುತ್ತದೆ. ಮಕ್ಕಳ ಕ್ರಿಯಾಶೀಲತೆಯನ್ನು ಒರೆಗೆ ಹಚ್ಚಿದಷ್ಟೂ ಅವರು ಸಮರ್ಥವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದರ ಜೊತೆಗೆ ಯಶಸ್ಸನ್ನು ಕಾಣುತ್ತಾರೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಪ್ರಿಯಾ ಪ್ರದೀಪ್ ಹೇಳಿದರು.
ಅವರು ವಿದ್ಯಾನಿಧಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿ-ಚಾಲೆಂರ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರತಿಯೊಂದು ಅವಕಾಶದಲ್ಲೂ ಒಂದೊAದು ಹೊಸ ಕಲಿಕೆಯಿರುತ್ತದೆ. ಸ್ವತಂತ್ರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ವಿದ್ಯಾರ್ಥಿಗಳು ಕರಗತ ಮಾಡಿಕೊಳ್ಳುವುದನ್ನು ಗಮನಿಸಿದರೆ ಸಂತೋಷವಾಗುತ್ತದೆ. ಇದರಿಂದ ಗಳಿಸುವ ಆತ್ಮವಿಶ್ವಾಸದ ಮೂಲಕ ಅವರು ಮುಂದಿನ ಹಂತಗಳನ್ನು ಆತ್ಮವಿಶ್ವಾಸದಿಂದ ಎದುರಿಸುತ್ತಾರೆ ಎಂದು ಪ್ರಿಯಾ ಅಭಿಪ್ರಾಯ ಪಟ್ಟರು.
ಆಟೋಟಗಳಿಂದ ನಾವು ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಕಲಿಯುತ್ತೇವೆ. ಐಪಿಎಲ್ನಲ್ಲಿ ನಮಗೆ ರಾಯಲ್ ಚಾಲೆಂರ್ರ್ಸ ಅಂದರೆ ತುಂಬಾ ಇಷ್ಟ. ಸೋಲಿಗೆ ಎದೆಗುಂದದೇ ಇರುವುದನ್ನು ಅವರಿಂದ ಕಲಿಯುತ್ತೇವೆ. ವಿದ್ಯಾರ್ಥಿಗಳಾಗಿ ನಾವು ಸವಾಲುಗಳನ್ನು ಎದುರಿಸುತ್ತೇವೆ. ಹಾಗಾಗಿ ನಮ್ಮ ಕಾರ್ಯಕ್ರಮವು ವಿ-ಚಾಲೆಂರ್ರ್ಸ್ ಎಂದು ವಿದ್ಯಾರ್ಥಿ ಪ್ರತಿನಿಧಿ ಶ್ರವಣ್ ಹೇಳಿದರು.
ಕಾರ್ಯಕ್ರಮದ ಮಾರ್ಗದರ್ಶಕರಾಗಿ ವಾಣಿಜ್ಯ ವಿಭಾಗದ ಸಾಧನಾ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕಿಷನ್ ಪ್ರಾರ್ಥಿಸಿ, ಸ್ಕಂದ ಸ್ವಾಗತಿಸಿದರು. ಆರ್ಮ್ ರೆಸ್ಲಿಂಗ್, ಕರಾಟೆ ಪ್ರದರ್ಶನ, ನೃತ್ಯ, ಸಮೂಹ ಗಾಯನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು. ಯುವರಾಜ್ ವಂದಿಸಿದರು. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶ್ರವಣ್ ಮತ್ತು ಭರತ್ ಕಾರ್ಯಕ್ರಮ ನಿರ್ವಹಿಸಿದರು.
ಕ್ರಿಯಾಶೀಲತೆಯಿಂದ ಯಶಸ್ಸು: ಪ್ರಿಯಾ ಪ್ರದೀಪ್

Leave a comment
Leave a comment