ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ಸ್ಲಂ ಜನಾಂದೋಲನ ಕರ್ನಾಟಕದಿಂದ ತುಮಕೂರು ನಗರ ಶಾಸಕರಿಗೆ ನಿವೇಶನ ರಹಿತರ ಹೋರಾಟ ಸಮಿತಿಯಿಂದ ಬಹಿರಂಗ ಪತ್ರ ಸಲ್ಲಿಕೆಯನ್ನು ಇತ್ತೀಚಿಗೆ ಮಾಡಲಾಯಿತು ಇದೇ ತಿಂಗಳ ೩೦ ರಂದು ಶಾಸಕರ ಕಛೇರಿ ಎದುರು ಪ್ರತಿಭಟನೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಯಿತು. ಶಾಸಕರು ನಿವೇಶನ ರಹಿತ ಹೋರಾಟ ಸಮಿತಿಯ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ನಿವೇಶನ ರಹಿತ ಒಂಟಿ ಮಹಿಳೆಯರು ಮತ್ತು ಅಗತ್ಯತೆ ಇರುವ ಕುಟುಂಬಗಳನ್ನು ವಿಶೇಷ ಪ್ರಕರಣದ ಮೇರೆಗೆ ಪರಿಗಣಿಸುವುದಾಗಿ ಭರವಸೆ ನೀಡಿದ್ದರು. ನಿವೇಶನ ರಹಿತರ ಹೋರಾಟ ಸಮಿತಿಯ ಮಂಗಳಮ್ಮ ಮತ್ತು ಸುಧಾ ಶಾಸಕರಿಗೆ ಮನವಿ ಸಲ್ಲಿಸಿ ನಾವು ಕಳೆದ ೩ ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದು ಹಿಂದಿನ ಜಿಲ್ಲಾಧಿಕಾರಿಗಳು ಈಗಾಗಲೇ ನಗರಪಾಲಿಕೆಗೆ ಹಸ್ತಾಂತರಿಸಿರುವ ೧೭ ಎಕರೆ ಸರ್ಕಾರಿ ಭೂಮಿಯಲ್ಲಿ ೫ ಎಕರೆ ಭೂಮಿಯನ್ನು ನೀಡಲು ಸೂಚನೆ ನೀಡಿದ್ದರು.ಆಶ್ರಯ ಸಮಿತಿ ಮತ್ತು ನಗರ ಪಾಲಿಕೆ ಗಂಭೀರವಾಗಿ ತೆಗೆದುಕೊಂಡಿಲ್ಲ ಚುನಾವಣೆ ಸಮಯದಲ್ಲಿ ನಮಗೆ ಭರವಸೆ ನೀಡಿದಂತೆ ನಿವೇಶನ ನೀಡಬೇಕೆಂದು ಒತ್ತಾಯಿಸಿ ಬಹಿರಂಗ ಪತ್ರ ಸಲ್ಲಿಸಿದರು.
ಬಹಿರಂಗ ಪತ್ರ ಸ್ವೀಕರಿಸಿ ಮಾತನಾಡಿದ ಶಾಸಕ ಜಿ.ಬಿ ಜ್ಯೋತಿ ಗಣೇಶ್, ನಗರದ ನಿವೇಶನ ವಂಚಿತರ ಸಮಸ್ಯೆಗಳು ಸುಮಾರು ೧೦ ವರ್ಷಗಳಿಂದ ಬಲ್ಲವನಾಗಿದ್ದೇನೆ, ಹಿಂದೆ ಷಫಿಅಹ್ಮದ್ ಕಾಲದಲ್ಲಿ ನಿವೇಶನ ಹಂಚಿಕೆ ಆಗಿರುವುದು ಬಿಟ್ಟರೆ ತುಮಕೂರು ನಗರದಲ್ಲಿ ನಿವೇಶನ ಹಂಚಿಕೆ ಯಾಗಿಲ್ಲ, ದಿಬ್ಬೂರು ದೇವರಾಜ್ ಅರಸು ಬಡಾವಣೆಯಲ್ಲಿ ಬಡವರಿಗೆಂದು ನೀಡಿರುವ ೧೨೦೦ ಮನೆಗಳ ಸಮಸ್ಯೆಗಳು ಇನ್ನೂ ಜೀವಂತವಾಗಿವೆ ಹಂಚಿಕೆ ಪತ್ರ ನೀಡಲು ಸಂಬAಧಪಟ್ಟವರ ಗಮನಕ್ಕೆ ತರುತ್ತೇನೆ, ಸ್ಲಂ ಸಮಿತಿಯಿಂದ ನಿವೇಶನ ವಂಚಿತ ೧೫೦ ಒಂಟಿ ಮಹಿಳೆಯರು ಮತ್ತು ಇಸ್ಮಾಯಿಲ್ ನಗರ ಹಂದಿಜೋಗಿ ೩೫ ಕುಟುಂಬಗಳಿಗೆ ಹಾಗೂ ಕೋಡಿಹಳ್ಳ ೩೦ ಕುಟುಂಬಗಳಿಗೆ ಮತ್ತು ನಗರದ ಪೌರಕಾರ್ಮಿಕರಿಗೆ ಡಿಎಂ ಪಾಳ್ಯ ಸಮೀಪದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ ನಿರ್ಮಾಣಕ್ಕೆ ಸಿದ್ದವಾಗುತ್ತಿರುವ ೨೦೦ ಮನೆಗಳಲ್ಲಿ ಮೊದಲ ಆಧ್ಯತೆ ನೀಡಲಾಗುವುದು ಈ ಕುರಿತು ಆಶ್ರಯ ಸಮಿತಿ ಗಮನಕ್ಕೆ ತಂದು ವಸತಿ ಕಲ್ಪಿಸಲು ಮುಂದಾಗುವೆ ಈಗಾಗಲೇ ೨೦೧೮ ರಿಂದ ನಗರ ಪ್ರದೇಶದಲ್ಲಿ ಸೈಟ್ ಕೊಡುವುದನ್ನು ನಿಲ್ಲಿಸಲಾಗಿದೆ, ಫುಡ್ಪಾರ್ಕ್ ಸಮೀಪವಿರುವ ಶಂಭೋನಹಳ್ಳಿ ಸರ್ವೇ ನಂಬರಲ್ಲಿ ೧೨ ಎಕರೆ ಭೂಮಿಯನ್ನು ನಗರಪಾಲಿಕೆಗೆ ಹಸ್ತಾಂತರಿಸಲಾಗಿದೆ. ಒಟ್ಟಾರೆ ತುಮಕೂರು ನಗರದಲ್ಲಿ ೨೧ ಸಾವಿರ ನಿವೇಶನ ರಹಿತರ ಬೇಡಿಕೆ ಸಮೀಕ್ಷೆಯಲ್ಲಿ ಕಂಡುಬAದಿದ್ದು ಇವರಲ್ಲಿ ೩ ಸಾವಿರ ನೈಜ ಪಲಾನುಭವಿಗಳನ್ನು ಈಗಾಗಲೇ ಗುರುತಿಸಲಾಗಿದೆ, ಸರ್ಕಾರ ಮತ್ತು ರಾಜೀವ್ಗಾಂಧಿ ವಸತಿ ನಿಗಮದಿಂದ ಮತ್ತೊಮ್ಮೆ ನಿವೇಶನ ರಹಿತರ ಸಮೀಕ್ಷೆಗೆ ಮುಂದಾಗುವAತೆ ಒತ್ತಾಯಿಸಲಾಗುವುದೆಂದರು.
ತುಮಕೂರು ನಗರ ಶಾಸಕರಿಗೆ ನಿವೇಶನ ರಹಿತರ ಹೋರಾಟ ಸಮಿತಿಯಿಂದ ಬಹಿರಂಗ ಪತ್ರ ಸಲ್ಲಿಕೆ

Leave a comment
Leave a comment