ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿವಿಗಾಗಿ ದೇಶವಾಸಿಗಳು ಜಾಗೃತರಾಗಿ ಪ್ರತಿರೋಧ ದಾಖಲಿಸಬೇಕಿದೆ ಎಂದು ಸಾಮಾಜಿಕ ಚಿಂತಕ ನಿಖಿತ್ ರಾಜ್ ಮೌರ್ಯ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶ್ರೀಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು ಹಾಗೂ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ಆಯೋಜಿಸಲಾಗಿದ್ದ ಡಾ.ಹೆಚ್.ಎಂ.ಗAಗಾಧರಯ್ಯ ಉಪನ್ಯಾಸ ಮಾಲಿಕೆ-೧೧ರ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆಗಳು ಉಪನ್ಯಾಸ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಹಣವಂತರಿಗೆ ದೊರೆಯುತ್ತಿರುವ ಅಧಿಕಾರ, ಹುದ್ದೆ, ಅವಕಾಶಗಳು ಯೋಗ್ಯರಿಗೆ ದೊರೆಯುವಂತೆ ಮಾಡುವುದೇ ನಿಜವಾದ ದೇಶದ ಪ್ರೇಮ. ಎಂದಿಗೂ ಪಕ್ಷ ಅಧರಿತ ಪ್ರಭುತ್ವ ಬೆಂಬಲಿಸಬೇಡಿ ಎಂದ ಅವರು ತಮ್ಮ ಮಗುವಿನ ಅಂತ್ಯ ಸಂಸ್ಕಾರಕ್ಕೂ ಹಣವಿಲ್ಲದೇ ತರಿತಪಿಸಿದ ಅಂಬೇಡ್ಕರ್ ದೇಶದ ನಾಗರಿಕರ ನೋವಿಗೆ ಧ್ವನಿಯಾಗುವ ಮೂಲಕ ಆರ್ಬಿಐ ಸ್ಥಾಪನೆಗೆ ಕಾರಣರಾದರು ಎಂದರು.
ಕಾರ್ಗಿಲ್ ವಿಜಯೋತ್ಸವ ಆಚರಿಸುತ್ತಿರುವ ನಾವು ಕಾರ್ಗಿಲ್ನಲ್ಲಿ ಭಾಗವಹಿಸಿದ್ದ ಸೈನಿಕನ ತಾಯಿ-ಹೆಂಡತಿ, ಮಕ್ಕಳಿಗೆ ರಕ್ಷಣೆ ಕೊಡಲು ಸಾಧ್ಯವಾಗುತ್ತಿಲ್ಲ ಎಂದರೆ ಅಲ್ಲಿ ಕೆಲಸ ಮಾಡುತ್ತಿರುವ ಕಾಣದ ಕೈಗಳ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ, ಇಂದಿಗೂ ಕೆಳ ಸಮುದಾಯಗಳಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ಎಂದರು.
ಅAಬೇಡ್ಕರ್ ತಾವು ಬದುಕಿದ್ದ ಕಾಲಘಟ್ಟದಲ್ಲಿ ಅನುಭವಿಸದ ನೋವು, ಯಾತನೆ, ಸಮಸ್ಯೆಗಳನ್ನು ಕಣ್ಣಾರೆ ಕಂಡು ಅವುಗಳಿಗೆ ಕಾನೂನಿನ ಮೂಲಕ ಸ್ಪಷ್ಟ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ದೇಶದ ಸರ್ವರ ಒಳಿತನ್ನು ಬಯಸುವ ಸಂವಿಧಾನವನ್ನು ರಚಿಸುವ ಮೂಲಕ ಧ್ವನಿ ಇಲ್ಲದ, ಸಮುದಾಯಗಳಿಗೆ ಧ್ವನಿಯಾಗಿದ್ದಾರೆ ಎಂದರು.
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪ್ರಚಲಿತ ವಿದ್ಯಮಾನಗಳ ಕಡೆಗೂ ಗಮನ ಹರಿಸಬೇಕು, ಅಂಬೇಡ್ಕರ್ ಬದುಕು, ಬರಹ ಅಧ್ಯಯನ ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯವಿದೆ. ಸ್ವಾತಂತ್ರ ಪೂರ್ವದಲ್ಲಿದ್ದ ಅಮಾನವೀಯ, ಅಸ್ಪೃಷ ಪದ್ಧತಿಗಳನ್ನು ತೊಡೆಗು ಹಾಕಲು ಅವರು ಕೈಗೊಂಡ ಕ್ರಾಂತಿಕಾರಕ ತೀರ್ಮಾನಗಳನ್ನು ಯುವ ಸಮುದಾಯ ಅರಿಯುವ ಮೂಲಕ ಸಂವಿಧಾನದ ಉಳಿವಿಗೆ ಶ್ರಮಿಸಬೇಕು ಎಂದರು.
ರಾಜಾರಾA ಮೋಹನ್ ರಾಯ್ ವಿರುದ್ಧ ಇತ್ತೀಚಿಗೆ ಸಾಮಾಜಘಾತುಕ ಶಕ್ತಿಗಳು ಉದ್ದೇಶ ಪೂರ್ವಕವಾಗಿ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ, ಸತಿ ಸಹಗಮನ ಪದ್ಧತಿಯ ವಿರುದ್ಧ ಹೋರಾಟ ಆರಂಭಿಸಿದ ಅವರನ್ನು ರಾಜಕೀಯಕ್ಕಾಗಿ ಅಪಮಾನಿಸಲಾಗುತ್ತಿದೆ, ಮೌಢ್ಯ, ಕಂದಾಚಾರಗಳಿAದ ಹೊರ ಬನ್ನಿ ಎಂದು ಕರೆ ನೀಡಿದ ಅಂಬೇಡ್ಕರ್ ಪ್ರತಿಮೆ, ಫೋಟೋಗಳಿಗೆ ಹೂಮಾಲೆ, ವಿಭೂತಿಧಾರಣೆ ಮಾಡುವ ಮೂಲಕ ಅಪಮಾನಿಸಲಾಗುತ್ತಿದೆ ಎಂದು ವಿಷಾದವ್ಯಕ್ತಪಡಿಸಿದರು.
ಅಸಮಾನತೆ, ಅಸ್ಪೃಷತೆ, ಜಾತಿ ವ್ಯವಸ್ಥೆ, ವರ್ಣ ವ್ಯವಸ್ಥೆ, ಸಣ್ಣ ಸಮುದಾಯಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಎಲ್ಲವನ್ನು ಸ್ವತಃ ಅನುಭವಿಸಿದ್ದ ಬಾಬಾಸಾಹೇಬರು ಎಲ್ಲ ಅನಿಷ್ಠ ಆಚರಣೆ, ಪದ್ಧತಿಗಳನ್ನು ನಿರ್ಮೂಲನೆ ಮಾಡಲು ಕಾನೂನಿನ ಮೂಲಕ ಪ್ರಯತ್ನಿಸಿದ್ದಾರೆ. ಜಗತ್ತಿನಲ್ಲಿ ಮನುಷ್ಯ ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ, ಅದರಲ್ಲೂ ಇತಿಹಾಸದಲ್ಲಿ ಉಳಿರುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರ, ಪ್ರಜಾಪ್ರಭುತ್ವ, ಸಂವಿಧಾನ ಉಳಿವಿಗಾಗಿ ಸಾಮಾಜಘಾತುಕ ಶಕ್ತಿಗಳನ್ನು ನಿಗ್ರಹಿಸಲು ಒಟ್ಟಾಗಿ ಪ್ರತಿರೋಧ ಮಾಡಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ.ವಿಜಯಭಾಸ್ಕರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕನ್ನಡ ವಿಭಾಗದ ಮುಖಸ್ಥರಾದ ಪ್ರೊ.ರಮೇಶ್ ಮಣ್ಣೆ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಬಿ.ಟಿ.ಮುದ್ದೇಶ್, ಐಕ್ಯೂಎಸಿ ಸಂಚಾಲಕರಾದ ಪ್ರೊ.ಸೈಯದ್ ಬಾಬು, ಪ್ರಾಧ್ಯಾಪಕರುಗಳಾದ ಹನುಂತರಾಯಪ್ಪ.ಡಿ. ವಿನಯ್ ಕುಮಾರ್, ಮಹೇಶ್ ಕುಮಾರ್, ಡಾ.ರಂಗಸ್ವಾಮಿ.ಎA.ಆರ್. ಹರಿಶ್ ಕುಮಾರ್.ಬಿ.ಸಿ. ಜ್ಯೋತಿ.ಸಿ, ಶ್ವೇತ.ಎಂ.ಪಿ ಸೇರಿದಂತೆ ಕಾಲೇಜಿನ ವಿವಿಧ ವಿಭಾಗ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.