ವಿದ್ಯಾರ್ಥಿಗಳ ಐಎಎಸ್ ಐಪಿಎಸ್ ಅಧಿಕಾರಿಗಳಾಗಬೇಕು ಎಂಬ ಕನಸುಗಳನ್ನು ಹೊಂದಬೇಕು ಎಂದು ಬಿ. ಸುರೇಶ್ ಗೌಡ
ಈಗಿನ ವಿದ್ಯಾರ್ಥಿಗಳು ಸಣ್ಣ ಸಣ್ಣ ಆಸೆಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಕಳೆದುಕೊಳ್ಳಬಾರದು. . ದೊಡ್ಡ ದೊಡ್ಡ ಕನಸು ಕಂಡು ಐಎಎಸ್ ಐಪಿಎಸ್ ಅಧಿಕಾರಿಗಳಾಗಿ ಈ ದೇಶ ಮತ್ತು ಈ ನಾಡನ್ನು ಹಾಗೂ ಗ್ರಾಮಗಳನ್ನು ಕಟ್ಟುವಂತ ಕನಸುಗಳನ್ನು ಕಾಣಬೇಕು ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶ್ ಗೌಡ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಕುಂದೂರು ಗ್ರಾಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ವತಿಯಿಂದ ನಡೆದ ಎಂ ಎಸ್ ಡಬ್ಲ್ಯೂ ವಿದ್ಯಾರ್ಥಿಗಳ ಸಮಾಜ ಕಾರ್ಯದ ಗ್ರಾಮೀಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಎಂಎಸ್ ಡಬ್ಲ್ಯೂ ಪದವಿ ಪಡೆದಂತ ವಿದ್ಯಾರ್ಥಿಗಳೆಲ್ಲರಿಗೂ ಸರ್ಕಾರಿ ಉದ್ಯೋಗ ಸಿಗಲಿ ಎಂಬುದು ನನ್ನ ಆಸೆ ಕೂಡ ಆದರೆ ಎಲ್ಲರೂ ಅದಕ್ಕೆ ಸೀಮಿತ ಆಗದೆ ತನ್ನ ಸ್ವಂತ ಕಾಲ ಮೇಲೆ ತಾನು ನಿಲ್ಲುವಂತ ಸಾಮರ್ಥ್ಯವುಳ್ಳ ಶಿಕ್ಷಣವನ್ನು ಪಡೆಯಬೇಕು.
ಸ್ನಾತಕೋತ್ತರ ಪದವಿ ಪಡೆದಂತ ವಿದ್ಯಾರ್ಥಿಗಳಿಗೂ ಕೂಡ ಇಂದು ಉದ್ಯೋಗ ಸಿಗುವಂತಹ ಭರವಸೆ ಮೂಡಿಲ್ಲ. ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದ್ದು ನಿರುದ್ಯೋಗ ಸಮಸ್ಯೆಯೂ ಕೂಡ ಅಷ್ಟೇ ದೊಡ್ಡ ಪ್ರಮಾಣದಲ್ಲಿದೆ.
ಶೇಕಡ 10% ವಿದ್ಯಾರ್ಥಿಗಳಿಗೆ ಮಾತ್ರ ಉದ್ಯೋಗ ಲಭಿಸುತ್ತಿರುವುದು ನಾವು ಕಾಣುತ್ತಿದ್ದೇವೆ ಉಳಿಕೆ ಶೇಕಡ 90% ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ನಾತಕೋತ್ತರ ಪದವಿ ತರುವಾಯ ಕಾಂಪಿಟೇಶನ್ ಎಕ್ಸಾಮ್ ಗಳಲ್ಲಿ ಭಾಗವಹಿಸಬೇಕು.
ಐಎಎಸ್ ಐಪಿಎಸ್ ಕೆ ಎ ಎಸ್ ಅಂತ ಪರೀಕ್ಷೆಗಳನ್ನು ಬರೆದು ಪಾಸಾಗಬೇಕು ಆಗ ನಿಜವಾದ ಜೀವನ ರೂಪಗೊಳ್ಳಲು ವಿದ್ಯಾಭ್ಯಾಸ ಸಹಕಾರಿಯಾಗುತ್ತದೆ ಎಂದರು.
ವಿದ್ಯಾವಂತ ಯುವಕ ಯುವತಿಯರು ಸ್ವಉದ್ಯೋಗಗಳಲ್ಲೂ ಕೂಡ ತೊಡಗಿಸಿ ಕೊಳ್ಳಬೇಕು.
ಕೃಷಿ ಕಾರ್ಯ ಕೂಡ ಇಂದು ಆದಾಯ ಬರುವಂತ ಮತ್ತು ಲಾಭದಾಯಕ ಕ್ಷೇತ್ರವಾಗಿದೆ.
ಕೃಷಿ ಮಾಡದೆ ಇಂದು ಭೂಮಿ ಬರಡಾಗುತ್ತಿದೆ.
ವಿದ್ಯಾರ್ಥಿಗಳು ಕೃಷಿ ಮಾಡುವ ನಿಟ್ಟಿನಲ್ಲಿ ಕೂಡ ಯೋಚನೆ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಕುಲಪತಿ ಡಾ. ವೆಂಕಟೇಶ್ವರಲು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವೈ.ಎಚ್. ಹುಚ್ಚಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುರೇಶ, ಸದಸ್ಯರಾದ ರಾಮಚಂದ್ರ ನಾಗರಾಜು, ರಾಜು ಹಾಗೂ ಮತ್ತಿತರರು ಉಪಸ್ಥಿತರಿದ್ದರು.