ವಿದ್ಯಾರ್ಥಿಗಳು ದೊಡ್ಡ ದೊಡ್ಡ ಗುರಿ ಹೊಂದಿರಬೇಕು – ಬಿ.ಸುರೇಶಗೌಡ
ಉತ್ತಮ ಜೀವನ ರೂಪಿಸಿಕೊಳ್ಳಲು ಜಿಟಿ.ಟಿಸಿ ತರಬೇತಿ ಕೇಂದ್ರ ಒಂದು ಉತ್ತಮ ಕೌಶಲ್ಯ ಕೇಂದ್ರ – ಬಿ.ಸುರೇಶ್ ಗೌಡ
ಹತ್ತನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಹಿರೇಹಳ್ಳಿಯ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ದಲ್ಲಿ ಡಿಪ್ಲಮೋಗೆ ಸಮನಾದ ಮಾಧರಿಯಲ್ಲಿ ತಾಂತ್ರಿಕ ತರಭೇತಿ ನೀಡುತ್ತಿದ್ದು ಇಲ್ಲಿ ಪ್ರವೇಶ ಪಡೆದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ನೂರಕ್ಕೆ ನೂರು ಉದ್ಯೋಗ ಅವಕಾಶ ಸಿಕ್ಕಿವೆ ತುಮಕೂರು ಜಿಲ್ಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ಬಿ.ಸುರೇಶಗೌಡ ತಿಳಿಸಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಇರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಇಂದು ನಡೆದ ಪೋಷಕರ ಮತ್ತು ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಸಭೆಯಲ್ಲಿ ಭಾಗವಹಿಸಿ ಬಿ.ಸುರೇಶಗೌಡ ಮಾತನಾಡಿದರು.
ಸರ್ಕಾರಿ ಜಿಟಿಟಿಸಿಯಲ್ಲಿ ಇದುವರೆಗೆ ಐದು ಸಾವಿರ ಮಕ್ಕಳು ತರಬೇತಿ ಪಡೆದಿದ್ದು ಅಷ್ಟೂ ಮಕ್ಕಳಿಗೆ ಉದ್ಯೋಗ ಸಿಕ್ಕಿದೆ ಎಂಬ ಮಾಹಿತಿ ಪಡೆದ ಶಾಸಕರು ಈ ಸಂಗತಿ ಬಹಳ ಖುಷಿ ನೀಡಿದೆ ಎಂದರು. 2008 ರಲ್ಲಿ ಶಾಸಕನಾಗಿದ್ದ ಅವಧಿಯಲ್ಲಿ ರಾಜ್ಯಕ್ಕೆ ಎರಡು ಕೇಂದ್ರಗಳನ್ನು ನೀಡಿದ್ದರು ಅದರ ಪೈಕಿ ಒಂದನ್ನು ಮೂಂಜೂರು ಮಾಡಿಕೊಂಡು ಬಂದಿದ್ದಕ್ಕೂ ಸಾರ್ಥಕಮಯ ಎನಿಸಿದೆ ಎಂದರು.ರಾಜ್ಯದಲ್ಲಿ ಈಗಿರುವ ಇಂಜಿನಿಯರ್ ಕಾಲೇಜುಗಳಿಂದ ವರ್ಷಂ ಪ್ರತಿ ಸರಿ ಸುಮಾರು 2 ಲಕ್ಷ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೊರ ಬರುತ್ತಾರೆ. ಆದರೆ ಈ ಪೈಕಿ ಕೇವಲ 10% ಜನರಿಗೆ ಮಾತ್ರ ಉದ್ಯೋಗ ಸಿಗುತ್ತಿದೆ ಉಳಿಕೆ 90% ಜನ ವಿದ್ಯಾರ್ಥಿಗಳು ನಿರುದ್ಯೋಗಸ್ಥರು ಎಂದು ವರದಿಗಳಲ್ಲಿ ಓದಿರುವುದಾಗಿ ತಿಳಿಸಿದರು. ಆದರೆ ಜಿಟಿಟಿಸಿ ತರಬೇತಿ ಕೇಂದ್ರದಲ್ಲಿ ಓದಿರುವ ಮಕ್ಕಳಿಗೆ ಸರ್ಕಾರ ಮತ್ತು ಸಂಸ್ಥೆಯೇ ಉದ್ಯೋಗ ಕಲ್ಪಿಸಿಕೊಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಜಿಟಿಟಿಸಿ ನಲ್ಲಿ ಓದಿದ ಮಕ್ಕಳು ಸ್ವಂತ ಉದ್ಯೋಗ ಮಾಡುವಂತಾಗಬೇಕು ಟಯೋಟ, ಸ್ವಿಫ್ಟ್ ಇಂತಹ ಪ್ರತಿಷ್ಠಿತ ಕಂಪನಿಗಳಿಗೆ ಸಾಮಾಗ್ರಿ ಸರಬರಾಜು ಮಾಡುವಂತ ತಾಂತ್ರಿಕತೆಯನ್ನು ಹಾಗೂ ನೀವೇ ಸ್ವಂತ ಕಂಪನಿ ಮಾಡುವಂತಾಗಬೇಕು ಈ ಮಾನಸಿಕತೆಯನ್ನು ಬೆಳೆಸಿಕೊಳ್ಳಬೇಕು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ದೊಡ್ಡ ದೊಡ್ಡ ಗುರಿಗಳನ್ನು ಹೊಂದಬೇಕು ಅದಕ್ಕೆ ಪೂರಕವಾಗಿ ನಮ್ಮ ಮನಸ್ಥಿತಿಯನ್ನು ರೂಡಿಸಿಕೊಳ್ಳಬೇಕು ಎಂದು ಸುರೇಶಗೌಡ ತಿಳಿಸಿದರು. ಅಲೆಕ್ಜಾಂಡರ್ ತನ್ನ ಮೂವತ್ತಮೂರನೇ ವಯಸ್ಸಿಗೆ ಪ್ರಪಂಚ ಗೆಲ್ಲಲು ಹೊರಟಿದ್ದರು ಈ ನಿಟ್ಟಿನಲ್ಲಿ ನಾವು ಕೂಡಾ ವಾಜಪೇಯಿ, ಅಬ್ದುಲ್ ಕಲಾಂ, ವಿಶ್ವೇಶ್ವರಯ್ಯ ಅಂತಹ ಸಾಧಕರ ಪುಸ್ತಕಗಳನ್ನು ಓದಬೇಕು ಅವರಂತೆ ಆಗಬೇಕು ಈ ನಿಟ್ಟಿನಲ್ಲಿ ನೀವು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಟಿಟಿಸಿ ಪ್ರಾಂಶುಪಾಲರಾದ ಅಶ್ವಿನ್ ಕುಮಾರ್, ಗ್ರಾ,ಪಂ ಸದಸ್ಯರಾದ ಭರತ್ ಕುಮಾರ್, ಮನ್ಸೂರ್ ಖಾನ್, ರಾಜೇಶ,ರಾಜಣ್ಣ , ಮಾಜಿ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಶಾಂತಕುಮಾರ್ ಬಿಜಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಭಾಕರ ಉಪಸ್ಥಿತರಿದ್ದರು,