ವಿದ್ಯಾರ್ಥಿಗಳಲ್ಲಿ ನಿರಂತರ ಕಲಿಯುವ ಉತ್ಸಾಹ ಇರಬೇಕು. ಅದರಲ್ಲೂ ತಾಂತ್ರಿಕ ಕಲಿಕೆಯಲ್ಲಿ ವಿದ್ಯಾರ್ಥಿಗಳು ಮುಂದಿರಬೇಕು ಎಂದು ಶ್ರೀ ಸಿದ್ದಾರ್ಥ ತಾಂತ್ರಿಕ ಮಹವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ.ಎಸ್ ರವಿಪ್ರಕಾಶ ಅಭಿಪ್ರಾಯಪಟ್ಟರು.
ನಗರದ ಎಸ್ಎಸ್ಐಟಿಯ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ವಿಭಾಗ ಏರ್ಪಡಿಸಿದ್ದ ಆರು ದಿನಗಳ ‘ಪ್ರಾಕ್ಟಿಕಲ್ ಹ್ಯಾಂಡ್ ಆನ್ ಟ್ರೇನಿಂಗ್ ಆನ್ ಎಲೆಕ್ಟ್ರಿಕಲ್ ಸ್ವಿಚ್ ಗೇರ್ ಅಂಡ್ ಇಟ್ಸ್ ಅಪ್ಲಿಕೇಶನ್ ಕಾರ್ಯಾಗಾರ’ದಲ್ಲಿ ಮಾತನಾಡಿದ ಅವರು, ಕಾರ್ಯಗಾರಗಳು ನಡೆಯುವುದರಿಂದ ವಿದ್ಯಾರ್ಥಿಗಳಲ್ಲಿನ ಕೌಶಲ್ಯಗಳು ವೃದ್ದಿಯಾಗುತ್ತದೆ. ಈಗ ಕಲಿತ ಕೌಶಲ್ಯಗಳು ಕೆಲಸಕ್ಕೆ ಸೇರಿದಾಗ ಉಪಯೋಗವಾಗುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯು ಕಾರ್ಯಾಗಾರಗಲ್ಲಿ ತಪ್ಪದೆೆ ಹಾಜರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಡಿಬಿಸನ್ ಕಂಪನಿಯ ಸಿಇಒ ಶಿವಾನಂದ್ ಡಿ.ವಿ, ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ವರಿ ಬಿ.ಎಸ್, ಬಸವೇಶ್ ಶೆಟ್ಟಿ , ಡೀನ್ ಡಾ. ರೇಣುಕಲತಾ, ಹಿರಿಯ ಪ್ರಾಧ್ಯಾಪಕರಾದ ಡಾ.ರಾಜೇಶ್ ಕಾಮತ್, ಕಾರ್ಯಕ್ರಮ ಸಂಯೋಜಕರಾದ ಡಾ.ನಟರಾಜ್, ಡಾ.ಶಿಲ್ಪ ಜಿ.ಎನ್ ಹಾಗೂ ಪ್ರಾಧ್ಯಾಪಕರಾದ ಡಾ.ಪ್ರದೀಪ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳಲ್ಲಿ ನಿರಂತರ ಕಲಿಯುವ ಉತ್ಸಾಹ ಇರಬೇಕು.
Leave a comment
Leave a comment