ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಬಹು ಮುಖ್ಯವಾದ ಘಟ್ಟವಾಗಿದ್ದು ವಿದ್ಯಾರ್ಥಿಗಳು ಈ ಹಂತದಲ್ಲಿ ಸರಿಯಾದ ಅಧ್ಯಯನ ಮಾಡದೇ ಹಾದಿ ತಪ್ಪಿದರೆ ಅವರ ಶಿಕ್ಷಣದ ಭವಿಷ್ಯವೇ ಇಲ್ಲವಾಗುತ್ತದೆ ಹೀಗಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಓದಿನಲ್ಲಿ ಅಧ್ಯಯನಶೀಲರಾಗಬೇಕು ಎಂದು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಶಿಕ್ಷಣಾಧಿಕಾರಿ ದೇವರಾಜು ಅವರು ತಿಳಿಸಿದರು
ನಗರದ ಮರಳೂರಿನ ಎಸ್ ಎಸ್ ಐ ಟಿ ಕಾಲೇಜು ಕ್ಯಾಂಪಸ್ ನ ಪಿಜಿ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಪದವಿಪೂರ್ವ ಕಾಲೇಜು ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ
ಸಿದ್ಧಾರ್ಥ ಪದವಿ ಪೂರ್ವ ಕಾಲೇಜು ಉತ್ತಮವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ವಿದ್ಯಾರ್ಥಿಯ ಪೋಷಕರು ಕಟ್ಟಿರುವ ನೂರಾರು ಕನಸುಗಳನ್ನು ನನಸು ಮಾಡಲು ವಿದ್ಯಾರ್ಥಿಗಳು ಸಹಕಾರ ನೀಡಬೇಕು, ಅಧ್ಯಯನಶೀಲರಾಗಬೇಕು ಯಾರಿಗೋಸ್ಕರವೂ ಕಷ್ಟಪಟ್ಟು ಓದುವ ಬದಲು ಇಷ್ಟಪಟ್ಟು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಆಗ ವಿದ್ಯಾರ್ಥಿಗಳು ಉತ್ತಮವಾದ ಫಲಿತಾಂಶವನ್ನು ನಿರೀಕ್ಷಿಸಬಹುದಾಗಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯಕರ್ತರಾಗಬೇಕು ಎಂದರು.
ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಉಪನ್ಯಾಸಕರಾದ ಡಾ. ನಾಗೇಂದ್ರ ಅವರು ಮಾತನಾಡಿ ವಿದ್ಯಾರ್ಥಿಗಳು ಓದಿನಲ್ಲಿ ಮುಖ್ಯವಾಗಿರುವ ಗುರಿಯೊಂದನ್ನ ಕೇಂದ್ರೀಕರಿಸಬೇಕು ಆಧುನಿಕ ತಂತ್ರಜ್ಞಾನದ ಸೌಲಭ್ಯಗಳನ್ನು ಬಳಸಿಕೊಂಡು ಜ್ಞಾನಾರ್ಜನೆ ಹೆಚ್ಚಿಸಿಕೊಂಡು ಭವಿಷ್ಯದ ಕನಸು ನನಸು ಮಾಡಲು ಪಣತೊಡಬೇಕು ಎಂದು ಕಿವಿ ಮಾತು ಹೇಳಿದರು.
ಎಸ್ಎಸ್ಐಬಿಯಂ ನ ಪ್ರಾಂಶುಪಾಲರಾದ ಡಾ ಮಮತಾ ಅವರು ಮಾತನಾಡಿ ವಿದ್ಯಾರ್ಥಿಗಳು ಓದಿನಲ್ಲಿ ತಲ್ಲಿನರಾಗಲು ವಿಪುಲವಾದ ಅವಕಾಶಗಳಿದ್ದು ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಎಂಬುದು ಜೇನಿನ ನೊಣ ಇದ್ದಹಾಗೆ ಸಿಹಿ ಕಹಿಯಲ್ಲಿ ಹೇಗೆ ಬರೀ ಸಿಹಿಯನ್ನೇ ಕೇಂದ್ರೀಕರಿಸಿರುವುದು ಹಾಗೆ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಭವಿಷ್ಯ ರೂಪಿಸಿಕೊಳ್ಳುವ ನಿರ್ಧಾರ ಅವರ ಕೈಯಲ್ಲಿದೆ ಎಂದರು.