ಅಫಜಪೂರ | ಗುರುವಂದನಾ ಕಾರ್ಯಕ್ರಮ ಮತ್ತು ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ
2000- 2001 ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಮತ್ತು ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ
ಕಲಬುರಗಿ : ಅಫಜಪೂರ ತಾಲೂಕಿನ ದೇವಲ ಗಾಣಗಾಪೂರದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ 2000- 2001 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಗುರು ವಂದನಾ ಸಮಾರಂಭ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಹೂವಿನ ಹಾಸಿಗೆ ಮತ್ತು ಕಲಾ ವಾದ್ಯಗಳ ಮೂಲಕ ಎಲ್ಲ ವಿದ್ಯಾರ್ಥಿಗಳು ಪುಷ್ಪ ಸಿಂಚನ ಮಾಡಿ ಕಾರ್ಯಕ್ರಮಕ್ಕೆ ಬರಮಾಡಿಕೊಂಡರು.
ದೀಪ ಬೆಳಗಿಸಿ ಮತ್ತು ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮದ ಕೇಂದ್ರ ಬಿಂದುಗಳು ಮತ್ತು ಮುಖ್ಯ ಅತಿಥಿ ಗಳಾಗಿ ಆಗಮಿಸಿದ ಸರ್ಕಾರಿ ಪ್ರೌಢಶಾಲೆ ದೇವಲ ಗಾಣಗಾಪೂರದ ಮಾಜಿ ಮುಖ್ಯ ಗುರುಗಳಾದ ಶ್ರೀಮಂತ ಮಾಳಭಾಗಿ, ಕಾಶಿರಾಂ ದುಬೆ, ಬಾಬುರಾವ್ ಮನಗೊಂಡ ಮತ್ತು ಶಿಕ್ಷಕರಾದ ಶಿವಶರಣಪ್ಪ ಹುಡುಗಿ,ಗೊಲ್ಲಾಳಪ್ಪ ತಮ್ಮದಡ್ಡಿ . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಲಿ ಮುಖ್ಯ ಗುರುಗಳಾದ ಎಂ.ಡಿ ಇಸ್ಮಾಯಿಲ್ ವಹಿಸಿಕೊಂಡಿದ್ದರು. ಶಿಕ್ಷಕಿಯರಾದ ಅರುಂಧತಿ ಪೂಜಾರಿ, ಸುವರ್ಣ, ಮತ್ತು ಕರ್ಮಚಾರಿ ಜಗನ್ನಾಥ ಅತಿಥಿ ಸ್ಥಾನವನ್ನ ಅಲಂಕರಿಸಿದರು.
ತದನಂತರ ಕಾರ್ಯಕ್ರಮದ ಅಧ್ಯಕ್ಷರಿಗೆ ಮತ್ತು ಮುಖ್ಯ ಅತಿಥಿಗಳಿಗೆ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸನ್ಮಾನಿಸಿದ ನಂತರ ಮಲ್ಲಿಕಾರ್ಜುನ ಗೊಬ್ಬುರ್ ಮತ್ತು ಗಾಯತ್ರಿ ಖಾನಕರ ಅವರಿಂದ ಶಿಕ್ಷಕರ ಕಿರು ಪರಿಚಯ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಕ್ಷಕರಾದ ಶ್ರೀಮಂತ್ ಮಾಳಬಾಗಿ ಮಾತನಾಡುತ್ತಾ ವಿದ್ಯಾರ್ಥಿ ವಿದ್ಯಾರ್ಥಿನಿಯರು 23 ವರ್ಷಗಳ ನಂತರ ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದು ನಿಜಕ್ಕೂ ತುಂಬಾ ಖುಷಿ ತರುವಂತ ವಿಷಯ. ಒಬ್ಬರಿಗೊಬ್ಬರು ಸುಖ ದುಃಖ ಹಂಚಿಕೊಳ್ಳಲು ಈ ಗುರುವಂದನಾ ಕಾರ್ಯಕ್ರಮ ಸುಸಂದರ್ಭ. ನಿವೃತ್ತಿ ಹೊಂದಿ ಮನೆಯಲ್ಲಿ ಕುಳಿತುಕೊಂಡವರನ್ನು ಹುಡುಕಿ ನಮ್ಮನ್ನು ಕರೆಸಿ ಸನ್ಮಾನಿಸಿ ಮತ್ತೆ ನಮ್ಮ ಶಿಕ್ಷಕ ವೃತ್ತಿ ಜೀವನದ ಸವಿ ನೆನಪು ಮಾಡಿಕೊಟ್ಟಿದ್ದೀರಿ ನಿಜಕ್ಕೂ ತುಂಬಾ ಖುಷಿ ಆಗುತ್ತಿದೆ ಎಂದರು.
ಅದೇ ರೀತಿಯಾಗಿ ಇನ್ನೊರ್ವ ಶಿಕ್ಷಕರಾದ ಕಾಶಿರಾಮ ದುಬೆ, ಬಾಬುರಾವ್ ಮನಗೊಂಡ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದಂತೆ ಎಲ್ಲರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಸವಿ ನೆನಪಿನಗೋಸ್ಕರ ಶಿಕ್ಷಕರಿಂದ ನೆನಪಿನ ಕಾಣಿಕೆ ಸ್ವೀಕರಿಸಿದ ವಿದ್ಯಾರ್ಥಿಗಳು. ತಾವು ಕಲಿತ ಶಾಲೆಗೆ ಲೇಜರ್ ಪ್ರಿಂಟರ್ ಕಾಣಿಕೆ ನೀಡಿದರು.
ಸಂತೋಷ ದಿಕಸಂಗಿ, ಅಂಬಿಕಾ ಕುಲಕರ್ಣಿ ನಿರೂಪಿಸಿದರು,
ಬಾಪು ಗೌಡ್ ವಂದಿಸಿದರು, ಗಾಯಿತ್ರಿ ತಂಡದವರಿಂದ ಪ್ರಾರ್ಥನಾ ಗೀತೆ ಹಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಸಿದ್ದರಾಜ ಕುಲಕರ್ಣಿ, ಶ್ರೀಪಾದ್, ಮಲ್ಲಿಕಾರ್ಜುನ್ ಗೊಬ್ಬೂರ,ಸಂತೋಷ ಸಿದ್ನಾಳ್, ಅಪ್ಪಸಾಬ್ ಕಾಳೆ ,ಗಾಯತ್ರಿ ಖಾನಕರಕರ್, ಅಂಬಿಕಾ ಕುಲಕರ್ಣಿ ಅನುಸೂಯ ಮಾನಕರ್, ಕವಿತಾ ದೇವರಮನಿ, ಲಕ್ಷ್ಮಿ ತಮದಡ್ಡಿ,ಅಂಬಿಕಾ ಜಮಾದಾರ್ ಸೇರಿದಂತೆ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.