ಸಹಕಾರ ಸಂಘದ ಬಲವರ್ಧನೆ ಸಮುದಾಯದ ಸಹಕಾರ ಅತ್ಯಗತ್ಯ : ಎಸ್.ಟಿ ಶ್ರೀನಿವಾಸ್.
ತುಮಕೂರು : ಸಹಕಾರ ಸಂಘಗಳ ಬಲವರ್ಧನೆಗೆ ಸಮುದಾಯದ ಸಹಕಾರ ಅತ್ಯಗತ್ಯ ಎಂದು ಕಾಂಗ್ರೆಸ್ನ ಮುಖಂಡ ಹಾಗೂ ಸಮಾಜ ಸೇವಕ ಎಸ್.ಟಿ ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕನ್ನಡ ಭವನದಲ್ಲಿ ಅರುಣೋದಯ ಸಹಕಾರ ಸಂಘ ಆಯೋಜನೆ ಮಾಡಿದ 5ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ, ಅಭಿನಂದನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಶ್ರೀನಿವಾಸ್ ಮಾತನಾಡಿದರು.
ಸಹಕಾರ ಸಂಘಕ್ಕೂ ಹಾಗೂ ಸಮುದಾಯಕ್ಕೂ ಒಂದಕ್ಕೊಂದು ಕೊಂಡಿ ಇದ್ದಂತೆ. ಸಂಘ ಬೆಳೆದರೆ ಸಮುದಾಯ ಬೆಳೆದಂತೆ. ಹಾಗಾಗಿ ಎಲ್ಲರೂ ತಮ್ಮ ಸಮುದಾಯದ ಸಹಕಾರ ಬ್ಯಾಂಕ್ಗಳ ಬೆಳವಣಿಗೆಗೆ ಶ್ರಮಿಸಬೇಕು ಅಂತಾ ಸಲಹೆ ನೀಡಿದರು.
ನಿವೃತ್ತ ಮುಖ್ಯ ಅಭಿಯಂತರ ಶಿವಕುಮಾರ್ ಮಾತನಾಡಿ, ಸಮುದಾಯಗಳ ಮುಖಂಡರು ಆಯಾ ಸಮುದಾಯದ ಏಳ್ಗೆಗೆ ಶ್ರಮಿಸಬೇಕು. ಸ್ವಾರ್ಥ ಎಲ್ಲರಿಗೂ ಇರುತ್ತದೆ. ತಮ್ಮ ವ್ಯಯಕ್ತಿಯ ಅಭಿವೃದ್ಧಿಯ ಜೊತೆಗೆ ತಮ್ಮ ಜನಾಂಗದ ಶ್ರೇಯೋಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು. ತಮ್ಮ ಬೆಳವಣಿ ಎಷ್ಟು ಮುಖ್ಯವೋ, ಜನಾಂಗದ ಅಭಿವೃದ್ಧಿ ಅಷ್ಟೇ ಮುಖ್ಯ. ಹಾಗಾಗಿ, ಅರುಣೋದಯ ಸಹಕಾರ ಸಂಘಕ್ಕೆ ನೋಂದಣಿ ಮಾಡಿಕೊಳ್ಳುವ ಮೂಲಕ ಸಮುದಾಯದ ಶ್ರೇಯಸ್ಸಿಗೆ ಸಹಕರಿಸಬೇಕು ಅಂತಾ ಸಲಹೆ ನೀಡಿದರು.
ಅರಣೋದಯ ಸಹಕಾರ ಸಂಘದ ಅಧ್ಯಕ್ಷ ಎಲ್. ಮುಕುಂದಪ್ಪ ಮಾತನಾಡಿ, ನಮ್ಮ ಅರುಣೋದಯ ಸಹಕಾರ ಬ್ಯಾಂಕ್ ಅಭಿವೃದ್ಧಿಯ ಕಡೆಗೆ ಮುನ್ನುಗ್ಗುತ್ತಿದೆ. ಅಂಬೆಗಾಲು ಇಡುವ ಮೂಲಕ ಆರಂಭವಾದ ಈ ನಮ್ಮಬ್ಯಾಂಕ್, ಇದೀಗ 5 ವರ್ಷ ಪೂರೈಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಬೇಕು ಎನ್ನುವುದಾದರೆ ಸಂಘದ ಸದಸ್ಯರ ಜೊತೆಗೆ ಜನಾಂಗದ ಸಹಕಾರ ಬಹಳ ಮುಖ್ಯ. ಹಾಗಾಗಿ, ಸಮುದಾಯದ ಮುಖಂಡರು, ಸಾರ್ವಜನಿಕರ ಸಹಕಾರ ಅಗತ್ಯ ಎಂದರು.