ಬೆಲೆ ಏರಿಕೆ ನಿಲ್ಲಿಸಿ,ಉದ್ಯೋಗ ಒದಗಿಸಿ,ಐದು ಕೆಜಿ ಹೆಚ್ಚುವರಿ ಅಕ್ಕಿ ನೀಡಲು,ವಿದ್ಯತ್ ಖಾಸಗೀಕರಣ ಕೈಬಿಡಲು, ತೆರಿಗೆ ಪಾಲು ಹೆಚ್ಚಿಸಿ, ಜಿಎಸ್ಟಿ ಬಾಕಿ ನೀಡಲು ಸಿಪಿಐ(ಎಂ) ಒತ್ತಾಯ
ಒಕ್ಕೂಟ ಸರಕಾರ ಮುಂದುವರೆಸುತ್ತಿರುವ ನವ ಉದಾರೀಕರಣದ ನೀತಿಗಳಿಂದ ದೇಶದ ಜನತೆ ಅದರಲ್ಲೂ ಬಡ ಜನತೆ ಬೆಲೆ ಏರಿಕೆಯ ಭಾರಿ ಬರೆಯಿಂದ ತೀವ್ರವಾಗಿ ನಲುಗುವಂತಾಗಿದೆ. ಅಗತ್ಯ ವಸ್ತುಗಳಾದ ಅಕ್ಕಿ ಬೇಳೆ, ಅಡುಗೆ ಎಣ್ಣೆ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ವಿದ್ಯುತ್, ಕೃಷಿ ಹೂಡಿಕೆಗಳಾದ ಬೀಜ, ರಸಾಯನಿಕ ಗೊಬ್ಬರ, ಕೀಟ ನಾಶಕ, ಕೃಷಿ ಉಪಕರಣಗಳು, ನಾಗರೀಕರ ಆರೋಗ್ಯದ ಔಷಧಿ ಬೆಲೆಗಳು, ಶೈಕ್ಷಣಿಕ ಸೌಲಭ್ಯದ ಡೊನೇಷನ್ ಹಾಗು ಫೀಸುಗಳ ಬೆಲೆಗಳು ಗಗನ ಮುಖಿಯಾಗಿವೆ. ಒಕ್ಕೂಟ ಸರಕಾರದ ಈ ಜನ ವಿರೋಧಿ ನಡೆಗಳನ್ನು ಪ್ರತಿರೋಧಿಸಿ ಜನತೆಯ ಈ ಹಕ್ಕೊತ್ತಾಯಗಳಿಗಾಗಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ್ ðವಾದಿ) ದಿನಾಂಕ ೦೭-೦೯-೨೦೨೩ ರಂದು ಜಿಲ್ಲಾಧಿಕಾರಿಗಳ ಕಛೇರಿ ಎದರು ನಡೆದ ಪ್ರತಿಭಾಟನೆಯನ್ನು ಉದ್ದಶೆಸಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಮತನಾಡುತ್ತಿದ್ದರು.
ಅವರು ಮುಂದುವರೆದು ಮತನಾಡಿ ಈ ಎಲ್ಲ ಬೆಲೆ ಏರಿಕೆಯ ಹಿಂದೆ, ಅಗತ್ಯ ವಸ್ತುಗಳ ಬೆಲೆಗಳ ಮೇಲಿನ ನಿಯಂತ್ರಣ ವಾಪಾಸು ಪಡೆದುದು, ಸಹಾಯಧನಗಳ ಕಡಿತ ಮಾಡಿರುವುದು, ಮುಕ್ತ ವ್ಯಾಪಾರಕ್ಕೆ ದೇಶವನ್ನು ತೆರೆದು, ಡಾಲರ್ ಎದುರು ರೂಪಾಯಿ ಮೌಲ್ಯ ಪದೆಪದೇ ಕುಸಿಯುವಂತೆ ಮಾಡಿ ಹಣದುಬ್ಬರ ಹೆಚ್ಚಳವಾಗುವಂತೆ ಕ್ರಮವಹಿಸಿರುವುದು, ಅಪ್ರತ್ಯಕ್ಷ ತೆರಿಗೆಗಳ ಭಾರವನ್ನು ವಿಸ್ತರಿಸುತ್ತಿರುವುದು, ಜಿಎಸ್ಟಿ ಕರ ಭಾರಕ್ಕೆ ಕ್ರಮ ವಹಿಸಿರುವುದು. ಕಾಳಸಂತೆ ಕೋರತನಕ್ಕೆ ಕುಮ್ಮಕ್ಕು ನೀಡಿರುವುದು, ಈ ಎಲ್ಲವು ಪ್ರಮುಖ ಕಾರಣಗಳಾಗಿವೆ. ಇದಕ್ಕೆ ಕೇಂದ್ರ ಸರಕಾರವೇ ನೇರ ಹೊಣೆಗಾರನಾಗಿದೆ. ಎಂದು ಆರೋಪಿಸಿ,ಮುಂಬರವ ಲೋಕಸಭಾ ಚುನಾವಣೆಯಲ್ಲಿ ಜನರ ಸಮಸ್ಯೆಗಳು ಚರ್ಚಗೆ ಬರುವಂತಾಗಬೇಕೆಎAದರು.
ಸಿಪಿಐ(ಎA) ಜಿಲ್ಲಾ ಕಾರ್ಯದರ್ಶಿ ಮಂಡಳಿಸದಸ್ಯ ಬಿ.ಉಮೇಶ್ ರವರು ಮತಾನಾಡುತ್ತಾ ಒಕ್ಕೂಟ ಸರಕಾರ ವಿದ್ಯುತ್ ರಂಗದ ಉತ್ಪಾದನೆ, ವಿತರಣೆ ಮತ್ತು ಸರಬರಾಜುಗಳನ್ನು ಖಾಸಗೀ ರಂಗಕ್ಕೆ ವಹಿಸಲು ನಿರ್ಧರಿಸಿ ಪಾರ್ಲಿಮೆಂಟನಲ್ಲಿ ಮಸೂದೆಯನ್ನು ತಂದಿರುವುದು ಖಂಡನೀಯವಾಗಿದೆ. ಅದೇ ರೀತಿ, ಖಾಸಗೀ ಲೂಟಿಕೋರ ಕಂಪನಿಗಳ ಲೂಟಿಗೆ ವಿದ್ಯುತ್ ರಂಗವನ್ನು ತೆರೆಯಲು ದೇಶದಾದ್ಯಂತ ಪ್ರೀಪೇಡ್ ಸ್ಮಾರ್ಟ ಮೀಟರ್ ಗಳನ್ನು ಅಳವಡಿಸಿಕೊಳ್ಳಲು ನಿರ್ಧೇಶನ ನೀಡಿರುವುದು ರೈತ-ಕಾರ್ಮಿಕ,ಜನತೆಗೆ ಬಿಜೆಪಿ ದ್ರೋಹ ಬಗೆದಿದೆ ಎಂದರು.
ಸಿಪಿಐ(ಎA)ನ ಜಿಲ್ಲಾ ಸಮಿತಿ ಸದಸ್ಯಯ ಅಜ್ಜಪ್ಪ ನವರು ಮತಾನಾಡಿ ಒಕ್ಕೂಟ ಸರಕಾರದಡಿ ಖಾಲಿ ಇರುವ ಎಲ್ಲ ಉದ್ಯೋಗಗಳನ್ನು ಈ ಕೂಡಲೇ ಭರ್ತಿ ಮಾಡಬೇಕು. ಗುತ್ತಿಗೆ ಪದ್ಧತಿ ಹಾಗೂ ಗೌರವಧನದ ಬಿಟ್ಟಿ ಚಾಕರಿಗಳನ್ನು ರದ್ದುಪಡಿಸಬೇಕು. ಉದ್ಯೋಗ ಖಾತ್ರಿ ಕೆಲಸವನ್ನು ತಲಾ ೨೦೦ ದಿನಗಳಿಗೆ ಮತ್ತು ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ವಿಸ್ತರಿಸಬೇಕು. ಸರಕಾರ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಆಗ್ರಹಿಸಿದರು.
ಸಿಪಿಐ(ಎಂ)ನ ನಗರ ಸಮಿತಿ ಸದಸ್ಯೆ ಕಲ್ಪನಾ ರವರು ಮತಾನಾಡಿ ಕೊಟ್ಟ ಮಾತಿನಂತೆ ಪ್ರತಿವರ್ಷ ಕೋಟಿ ಉದ್ಯೋಗ ಸೃಷ್ಠಿಗೆ ಒಕ್ಕೂಟ ಸರಕಾರ ಮತ್ತು ಬಿಜೆಪಿ ಕ್ರಮವಹಿಸದೇ ಹೋದುದರಿಂದ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ದೇಶದಾದ್ಯಂತ ದಿನೇ ದಿನೇ ಹೆಚ್ಚುತ್ತಿದೆ. ಪ್ರತಿವರ್ಷವೂ ಕೋಟ್ಯಾಂತರ ಹೊಸ ವಿದ್ಯಾವಂತ ನಿರುದ್ಯೋಗಿಗಳು, ನಿರುದ್ಯೋಗಿಗಳ ಪಡೆಯನ್ನು ಬೆಳೆಸುತ್ತಿದ್ದಾರೆ. ಒಕ್ಕೂಟ ಸರಕಾರ ಮತ್ತಿತರೆ ಸರಕಾರಗಳಡಿ ಖಾಲಿ ಇರುವ ೫೦ ಲಕ್ಷದಷ್ಠು ಉದ್ಯೋಗಗಳನ್ನು ಭರ್ತಿ ಮಾಡದೆ ಖಾಲಿ ಉಳಿಸಿಕೊಳ್ಳಲಾಗಿದೆ ಮತ್ತು ಅವುಗಳನ್ನು ರದ್ದು ಮಾಡಲಾಗುತ್ತಿದೆ. ಎಲ್ಲಾ ವಿದ್ಯಾವಂತ ನಿರುದ್ಯೋಗಿಗಳಿಗೆ, ಅವರಿಗೆ ಉದ್ಯೋಗ ದೊರೆಯುವವರೆಗೆ ಮಾಸಿಕ ತಲಾ ೧೦,೦೦೦ ರೂ.ಗಳ ನಿರುದ್ಯೋಗ ಭತ್ಯೆ ಒದಗಿಸಬೇಕು. ಅದೇ ರೀತಿ, ಜಿಎಸ್ಟಿ ತೆರಿಗೆ ಸಂಗ್ರಹದ ಕರ್ನಾಟಕದ ಬಾಕಿ ಮೊತ್ತವನ್ನು ನೀಡದೇ ಸತಾಯಿಸುತ್ತಿರುವುದು ಖಂಡನೀಯವಾಗಿದೆ ಮನವಿಯನ್ನು ಉಪತಾಹಶಿಲ್ದಾರ್ ರವರ ಮೂಲಕ ಕೇಂದ್ದರ ಸರ್ಕಾರಕ್ಕೆ ಸಲ್ಲಿಸಲಾಯಿತು.
ಬೆಲೆ ಏರಿಕೆ ನಿಲ್ಲಿಸಿ,ಉದ್ಯೋಗ ಒದಗಿಸಿ
Leave a comment
Leave a comment