ಕಲ್ಬುರ್ಗಿ ನಗರದಲ್ಲಿ ಇಂದು ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದಿ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ರಾಜ್ಯವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲು ಮತ್ತು ಅಗತ್ಯ ಪರಿಹಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು ಸಿಪಿಐಎಂ ಕರೆ ನೀಡಿದ ಹಿನ್ನೆಲೆಯಲ್ಲಿ ಹಲವಾರು ಬೇಡಿಕೆಗಳಾದ ಬರಪೀಡಿತ ಪ್ರದೇಶದ ಬಡ ರೈತರು ಗುಳೆ ಹೋಗೋದಂತಾಗಬೇಕು , ಬೆಳೆ ವಿಮೆ ವ್ಯವಸ್ಥೆ ಮಾಡಬೇಕು, ರೈತರ ಹಾಗೂ ಕೂಲಿ ಕೂಲಿಕಾರರ ಮತ್ತು ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರ ಸಾಲ ಮನ್ನಾ ಮಾಡಬೇಕು, ಬರಗಾಲ ಕಾರಣದಿಂದ ಬರ ಬಾಧಿತರ ಶೈಕ್ಷಣಿಕ ಶುಲ್ಕವು ಮನ್ನಾ ಮಾಡಬೇಕು ಇನ್ನೂ ಹತ್ತು ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ, ಎಂ. ಬಿ ಸಜ್ಜನ್ ,ಮೇಘರಾಜ್ ಕಠಾರೆ, ಮತ್ತು ಸುಭಾಷ್ ಹೊಸಮನಿ ಮತೀತರರು ಉಪಸ್ಥಿತರಿದ್ದರು.