ಯೋಜನೆಗಳನ್ನು ಮೋದಿ ಸರ್ಕಾರ ವ್ಯವಸ್ಥಿತವಾಗಿ ಸ್ಥಗಿತಗೊಳಿಸಿದೆ. ವಾರ್ಷಿಕ ಬಜೆಟ್ಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒದಗಿಸುವ ಮೊತ್ತ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬರಲಾಗಿದೆ. ಬೆಲೆಗಳು ಗಗನಕ್ಕೆ ಏರುತ್ತವೆ. ಪಡಿತರ ವ್ಯವಸ್ಥೆ ಕುಗ್ಗುತ್ತಿದೆ. ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿರುವ ಬಡವರಲ್ಲಿ ಅಪೌಷ್ಟಿಕತೆಯ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ೯ ವರ್ಷಗಳಲ್ಲಿ ಕೇಂದ್ರ ಸರ್ಕಾರವು ಅನುಸರಿಸುತ್ತಿರುವ ಎಲ್ಲಾ ನೀತಿಗಳು ಸಾಮಾಜಿಕ ನ್ಯಾಯದ ಎಲ್ಲಾ ಕಾರ್ಯಕ್ರಮಗಳನ್ನು ಕಿತ್ತು ಹಾಕುವ ಮತ್ತು ಸಾಮಾಜಿಕ ಅಸಮಾನತೆಯನ್ನು ಬಲಪಡಿಸುವ ಉದ್ದೇಶವನ್ನು
೨೦೨೩ ರ ಅಗಸ್ಟ್ ೨೬ ಮತ್ತು ೨೭ ರಂದು ಹೈದ್ರಾಬಾದ್ ನಲ್ಲಿ ದಲಿತರ ಅಖಿಲ ಭಾರತ ಮಟ್ಟದ ಶೃಂಗ ಸಭೆಯೊಂದು ನಡೆಸಲಾಯಿತು. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿರುವ ೨೫ ರಾಜ್ಯಗಳ ನೂರಕ್ಕೂ ಹೆಚ್ಚು ಸಂಘಟನೆಗಳು ಭಾಗವಹಿಸಿದ್ದವು. ಇದೇ ಮಾದರಿಯಲ್ಲಿ ರಾಜ್ಯ ಮಟ್ಟದ ದಲಿತ ಶೃಂಗ ಸಭೆಯನ್ನು ಏರ್ಪಡಿಸುವಂತೆ ಕರೆ ನೀಡಲಾಯಿತು. ಕರ್ನಾಟಕ ರಾಜ್ಯದಲ್ಲಿಯು ರಾಜ್ಯ ಮಟ್ಟದ ದಲಿತರ ಬೃಹತ್ ಶೃಂಗ ಸಭೆಯನ್ನು ನವೆಂಬರ್ ೧೬ ರಂದು ಆಯೋಜಿಸಲು ನಿರ್ಧಯಿಸಲಾಗಿದೆ. ೨೦೨೩ ಡಿಸೆಂಬರ್ ೦೪ ರ ಸೋಮವಾರ ಬೃಹತ್ ದೆಹಲಿ ಚಲೋ ಏರ್ಪಡಿಸಿ ಸನ್ಮಾನ್ಯ ರಾಷ್ಟçಪತಿಗಳಿಗೆ ೧ ಕೋಟಿ ಸಹಿಗಳುಳ್ಳ ಮನವಿ ಪತ್ರವನ್ನು ಸಲ್ಲಿಸಲು ವ್ಯಾಪಕ ಸಿದ್ಧತೆ ನಡೆಯುತ್ತಿದೆ. ಜಾತಿ ಮುಕ್ತ ಸಮಾಜವನ್ನು ಕಟ್ಟಬಯಸುವ ಎಲ್ಲ ಸಮಾನ ಮನಸ್ಕರು ಸಾವಿರ ಸಾವಿರ ಸಂಖ್ಯೆಯಲ್ಲಿ ಈ ಚಾರಿತ್ರಿಕ ಪ್ರದರ್ಶನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.
ದೇಶಕ್ಕೆ ಸ್ವಾತಂತ್ರö್ಯ ದೊರೆತು ೭೫ ವರ್ಷಗಳು ಕಳೆದರೂ ದೇಶವು ಇಂದಿಗೂ ಅನಿಷ್ಟ ಜಾತಿ ಪದ್ಧತಿಯಿಂದ ಮುಕ್ತವಾಗಿರುವುದಿಲ್ಲ. ವಿಶೇಷವಾಗಿ ಕೇಂದ್ರದಲ್ಲಿ ಮನುವಾದಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ದೇಶದ ಸಂವಿಧಾನಾತ್ಮಕ ಹಕ್ಕುಗಳು ಕಣ್ಮರೆಯಾಗುತ್ತಿವೆ. ಜಾತಿ ತಾರತಮ್ಯ ಜಾತಿ ಬೇದವನ್ನು ವ್ಯವಸ್ಥಿತವಾಗಿ ಪ್ರೋತ್ಸಾಹಿಸಲಾಗುತ್ತಿದೆ. ಹಿಂದು ಧರ್ಮದ ಹೆಸರಿನಲ್ಲಿ ಅಸ್ಪçಶ್ಯತೆಯನ್ನು ಜೀವಂತವಾಗಿ ಇಡಲಾಗುತ್ತದೆ. ದಲಿತ ಸಮುದಾಯಗಳಿಗೆ ಸ್ವಾಭಿಮಾನದ ಬದುಕನ್ನು ನಿರಾಕರಿಸುತ್ತಾ ಬರಲಾಗಿದೆ.
ದಲಿತರ ವಿರುದ್ಧದ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ. ದಲಿತರ ಮೇಲೆ ವಿವಿಧ ಸ್ವರೂಪಗಳ ಅಸ್ಪೃಶ್ಯತೆಯ ಆಚರಣೆಗಳು ದೇಶದ ಹೆಚ್ಚಿನ ಕಡೆಗಳಲ್ಲಿ ನಿರಂತರವಾಗಿ ನಡೆಯುತ್ತಿವೆ. ೨೦೧೪ ರಿಂದ ಕೇಂದ್ರ ಹಾಗೂ ಹಲವಾರು ಬಿಜೆಪಿ ನೇತೃತ್ವದ ಸರಕಾರಗಳು ಅಧಿಕಾರಕ್ಕೆ ಬಂದ ನಂತರದಲ್ಲಿ ಕಾರ್ಪೊರೇಟ್ ಮತ್ತು ಕೋಮುವಾದಿಗಳ ಶಾಮೀಲು ರಾಜಕೀಯ ಪರವಾದ ನೀತಿಗಳಿಂದ ಜಾತಿ ತಾರತಮ್ಯ ಮತ್ತು ಸಂವಿಧಾನದ ಆಶಯಗಳ ಉಲ್ಲಂಘನೆ ನಿರಂತರವಾಗಿ ಹೆಚ್ಚುತ್ತಿದೆ. ಅಸ್ಪೃಶ್ಯತೆಯ ಆಚರಣೆಗಳು ಸಂವಿಧಾನದ ೧೯೫೫ ಕಾಯ್ದೆ ಪ್ರಕಾರ ನಿಷೇಧಿಸಲಾಗಿದೆ. ಆದರೆ ಅದು ಒಂದಲ್ಲ ಒಂದು ರೀತಿಯಲ್ಲಿ ಅದನ್ನು ಜೀವಂತ ಉಳಿಸಲಾಗಿದೆ. ದಲಿತ ವಿದ್ಯಾರ್ಥಿಗಳು ಇತರ ಜಾತಿಗಳ ವಿದ್ಯಾರ್ಥಿಗಳಿಂದ ಹೆಚ್ಚು ಜಾತಿ ತಾರತಮ್ಯವನ್ನು ಅನುಭವಿಸುತ್ತಿರುತ್ತಾರೆ. ಉದ್ಯೋಗ ಹುಡುಕಾಟದಲ್ಲಿ ದಲಿತರು ಹೆಚ್ಚು ತಾರತಮ್ಯಕ್ಕೆ ಒಳಗಾಗುತ್ತಾರೆ. ಅಂತರ ಜಾತಿಯ ವಿವಾಹ ಬಯಸಿದರೆ ಅವರನ್ನು ಅವರ ಪಾಲಕರೇ ಕ್ರೂರವಾಗಿ ಕೊಲ್ಲುವ ಉದಾಹರಣೆಗಳಿವೆ.
ಆದ್ದರಿಂದ ದಲಿತರಿಗಾಗುತ್ತಿರುವ ಚಾರಿತ್ರಿಕ ಅನ್ಯಾಯವನ್ನು ಸರಿಪಡಿಸಲು ಪ್ರಯತ್ನಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಾತಿ ದೌರ್ಜನ್ಯ ಮುಕ್ತ ಸಮಾಜಕ್ಕಾಗಿ ಎಲ್ಲಾ ಸಮಾನ ಮನಸ್ಕರು ಮುಂದಾಗುವುದು ಈ ಶೃಂಗ ಸಭೆಯ ಮಹೋನ್ನತ ಉದ್ದೇಶವಾಗಿದೆ. ಕರ್ನಾಟಕದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಸಾಮಾಜಿಕ ನ್ಯಾಯದ ಪ್ರಶ್ನೆಯ ಸಂಘರ್ಷ ಎಲ್ಲರನ್ನೂ ಒಳಗೊಳ್ಳುವ ಸಂಘರ್ಷವಾಗಬೇಕಾಗಿದೆ. ರಾಜ್ಯದ ಎಲ್ಲಾ ದಲಿತ ಸಂಘಟನೆಗಳು-ಕೃಷಿಕೂಲಿಕಾರ ಸಂಘಟನೆಗಳು ೧೬-೧೧-೨೦೨೩ ರಂದು ರಾಜ್ಯ ಮಟ್ಟದ ಶೃಂಗ ಸಬೆ ನಡೆಸಲು ನಿರ್ದರಿಸಿದ್ದೇವೆ. ಈ ಕಾರ್ಯಕ್ರಮ ತಾವು ಹೆಚ್ಚಿನ ರೀತಿಯಲ್ಲಿ ಭಾಗವಹಿಸಿ ಯಶಸ್ವಿಮಾಡಬೇಕೆಂದು ವಿನಂತಿಸುತ್ತೇವೆ. ಗೋಪಾಲಕೃಷ್ಣ ಹರಳಹಳಿ, ಡಿ.ಹೆಚ್.ಎಸ್ ರಾಜ್ಯ ಸಂಚಾಲಕರು , ಎನ್. ರಾಜಣ್ಣ ಡಿ.ಹೆಚ್.ಎಸ್ ರಾಜ್ಯ ಸಹ ಸಂಚಾಲಕರು, ಶಿವಣ್ಣ(ವಕೀಲರು) ಡಿ.ಹೆಚ್.ಎಸ್ ಜಿಲ್ಲಾ ಮುಖಂಡರು, ರಾಜು ವೆಂಕಟಪ್ಪ ಡಿ.ಹೆಚ್.ಎಸ್ ಜಿಲ್ಲಾ ಸಂಚಾಲಕರು, ಭರತ್ ಎನ್.ಎಂ ಡಿ.ಹೆಚ್.ಎಸ್ ಕುಣಿಗಲ್ ತಾ. ಕಾರ್ಯದರ್ಶಿ