ಆರೋಗ್ಯದ ದೃಷ್ಟಿಯಿಂದ ಯೋಗ ತುಂಬಾ ಮುಖ್ಯ
ತುಮಕೂರು: ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಯೋಗ ದಿನದ ಪ್ರಯುಕ್ತ ಎಸ್ಎಸ್ಐಟಿಯ ಐಕ್ಯೂಎಸಿ ಸಹಯೋಗದಲ್ಲಿ ಅಂತಾರಾಷ್ಟಿçÃಯ ಯೋಗ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿAಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪುನೀತ್.ಕೆ ಅವರು ಮಾತನಾಡಿ, ಪ್ರತಿದಿನ ಯೋಗ ಮಾಡುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನಿರಂತರ ಯೋಗ ಮಾಡುವ ಮೂಲಕ ನಿರಂತರ ಮಾನಸಿಕ ಸ್ಥಿಮಿತ ಕಾಪಾಡಿಕೊಂಡು ಕಾರ್ಯದಕ್ಷತೆ ಹೆಚ್ಚಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಾಂಶುಪಾಲರಾದ ಡಾ. ರವಿಪ್ರಕಾಶ್ ಮಾತನಾಡಿ ಯೋಗ ಎನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಮನುಷ್ಯನಿಗೆ ಚೈತನ್ಯವನ್ನು ನೀಡುತ್ತದೆ ಎಂದರು.
ಶ್ರೀ ರಂಗ ಅಕಾಡೆಮಿ ಆಫ್ ಯೋಗದ ಅಡ್ವಾನ್ಸ್ ಟ್ರೆöÊನರ್ ಆಗಿರುವ ಹರ್ಷಿತಾ.ಎ ಮತ್ತು ಅವರ ಮಗಳು ಲೋಹಿನಿ ಸಿಂಚನ ಇಬ್ಬರೂ ಜೊತೆಗೂಡಿ ಹಾಡಿಗೆ ಯೋಗಾಸನದ ಮೂಲಕ ವಿಶೇಷ ಪ್ರದರ್ಶನವನ್ನು ನೀಡಿದರು.
ಎಸ್ಎಸ್ಐಟಿ ಡೀನ್ ಡಾ.ರೇಣುಕಲತಾ, ಎನ್ಎಸ್ಎಸ್ನ ಮುಖ್ಯಸ್ಥರಾದ ಡಾ.ರವಿಕಿರಣ್, ಡಾ.ಗೀತಾ ಸೇರಿದಂತೆ ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
SSIT ಐಕ್ಯೂಎಸಿ ಸಹಯೋಗದಲ್ಲಿ ಅಂತರಾಷ್ಟ್ರೀಯ ಯೋಗ ಆಚರಣೆ
Leave a comment
Leave a comment