ಹನುಮಂತಪುರದ ಶ್ರೀಪೇಟೆಮಾತೆ ಕೊಲ್ಲಾಪುರದಮ್ಮ ಮತ್ತು ಶ್ರೀಕರುಗಲಮ್ಮ ಜಾತ್ರಾ ಮಹೋತ್ಸವ ಜುಲೈ ೧೦ ರಿಂದ ೧೦ರವರೆಗೆ ನಡೆಯಲಿದೆ ಎಂದು ಅಗ್ನಿಕುಲ ತಿಗಳ ಜನಾಂಗದ ಅಧ್ಯಕ್ಷರಾದ ಟಿ.ಹೆಚ್.ಹನುಮಂತರಾಜು ತಿಳಿಸಿದ್ದಾರೆ.ಹನುಮಂತಪುರದ ಶ್ರೀಕೊಲ್ಲಾಪುರದಮ್ಮ ದೇವಾಲಯದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಆಷಾಡ ಮಾಸದಲ್ಲಿ ಪೇಟೆ ಶ್ರೀಕೊಲ್ಲಾಪುರದಮ್ಮ ಮತ್ತು ಶ್ರೀಕರುಗಲಮ್ಮ ದೇವಿಯ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ.ಜುಲೈ ೧೦ ರಂದು ಮಧ್ಯಾಹ್ನ ೩ ಗಂಟೆಗೆ ಶ್ರೀರಾಮನಗರದಲ್ಲಿ ನೆಲೆಸಿರುವ ಪೇಟೆ ಶ್ರೀಕೊಲ್ಲಾಪುರ ದಮ್ಮ ಮತ್ತು ಕರುಗಲಮ್ಮ ದೇವಸ್ಥಾನದಿಂದ ೫೦ಕ್ಕೂ ಹೆಚ್ಚು ಕಲಾತಂಡಗಳ ಪ್ರದರ್ಶನ ಮತ್ತು ಮೆರವಣಿಗೆ ಮೂಲಕ ತಂದು ಹನುಮಂತಪುರದ ಕೊಲ್ಲಾಪುರದಮ್ಮ ದೇವಾಲಯಕ್ಕೆ ತರಲಾಗುವುದು.ದೇವಿಯ ಉತ್ಸವಕ್ಕೆ ಮಾಜಿ ಯಜಮಾನರಾದ ಟಿ.ಎಲ್.ಹನುಮಣ್ಣ,ಪತ್ರಕರ್ತರಾದ ಎಸ್.ನಾಗಣ್ಣ,ಉಪಮಹಾಪೌರರಾದ ಟಿ.ಕೆ.ನರಸಿಂಹಮೂರ್ತಿ,ಪಾಲಿಕೆ ಸದಸ್ಯರಾದ ಎ.ಶ್ರೀನಿವಾಸ್, ಲಲಿತಾ ರವೀಶ್, ಶಶಿಕಲಾ ಗಂಗಹನುಮಯ್ಯ, ಮಾಜಿ ಸದಸ್ಯರಾದ ಟಿ.ಹೆಚ್.ವಾಸುದೇವ, ಟಿ.ಹೆಚ್.ಬಾಲಕೃಷ್ಣ, ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಆರ್.ಸಿ.ಆಂಜನಪ್ಪ ಭಾಗವಹಿಸುವರು ಎಂದು ವಿವರ ನೀಡಿದರು.ತುಮಕೂರು ಉಪಮಹಾಪೌರ ಟಿ.ಕೆ.ನರಸಿಂಹಮೂರ್ತಿ ಮಾತನಾಡಿ,ಜುಲೈ ೧೧ರ ಮಂಗಳವಾರ ಸಂಜೆ ಐದು ಗಂಟೆಗೆ ಹನುಮಂತಪುರದ ಶ್ರೀಕೊಲ್ಲಾಪುರದಮ್ಮ ದೇವಾಲಯದ ಬಳಿ ಸ್ಥಾಪಿಸಿರುವ ಆಗ್ನಿಕೊಂಡದ ಆರತಿ ತರುವುದು, ಸಿಡಿಮದ್ದಿನ ಪ್ರದರ್ಶನ, ಬಾಣಬಿರಿಸು ಪ್ರದರ್ಶನದ ಜೊತೆಗೆ ಕೊಂಡ ಹಾಯುವ ಉತ್ಸವ ನಡೆಯಲಿದೆ.ಆಗ್ನಿಕೊಂಡ ಕಾರ್ಯಕ್ರಮಕ್ಕೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರಿ ಸಚಿವ ಕೆ.ಎನ್.ರಾಜಣ್ಣ,ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು,ಶಾಸಕರಾದ ಎಸ್.ಆರ್.ಶ್ರೀನಿವಾಸ್,ಜೋತಿಗಣೇಶ್,ಸುರೇಶಗೌಡ, ಜಿಲ್ಲಾ ಗೆಳೆಯರ ಬಳಗದ ಗೋವಿಂದರಾಜು,ಯುವಮುಖAಡರಾದ ರವೀಶ್ ಅವರುಗಳು ಭಾಗವಹಿಸುವರು.ಪೇಟೆ ಶ್ರೀಕೊಲ್ಲಾಪುರದಮ್ಮ ಮತ್ತು ಶ್ರೀಕರುಗಲಮ್ಮ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಜುಲೈ ೧೨ ರ ಬುಧುವಾರ ಮಧ್ಯಾಹ್ನ ೩:೩೦ಕ್ಕೆ ಶ್ರೀಬಯಲಾಂಜನೇಯಸ್ವಾಮಿ ಕ್ರೀಡಾ ಮತ್ತು ಕಲಾ ಸಂಘದವರಿAದ ಕುರುಕ್ಷೇತ್ರ ನಾಟಕ,ಜುಲೈ ೧೩ರ ಗುರುವಾರ ಬೆಳಗ್ಗೆ ೧೧ ಗಂಟೆಗೆ ಸಂಪೂರ್ಣ ರಾಮಾಯಣ ನಾಟಕವನ್ನು ಹಮ್ಮಿಕೊಳ್ಳಲಾಗಿದೆ.ಜುಲೈ ೧೪ ರ ಶುಕ್ರವಾರದ ಶ್ರೀಕೊಲ್ಲಾಪುರದಮ್ಮ ಮತ್ತು ಶ್ರೀಕರಗಲಮ್ಮ ದೇವರುಗಳಿಗೆ ಮಡ್ಲಕ್ಕಿ ಪೂಜಾ ಕಾರ್ಯ ನಡೆಯಲಿದೆ. ರಾತ್ರಿ ೮ ಗಂಟೆಗೆ ಶ್ರೀಕೊಲ್ಲಾಪುರದಮ್ಮ ದೇವಾಲಯಕ್ಕೆ ದೇವರನ್ನು ಕಳುಹಿಸಿಕೊಡುವ ಮೂಲಕ ಜಾತ್ರಾ ಮಹೋತ್ಸವ ಮುಕ್ತಾಯಗೊಳ್ಳಲಿದೆ.ನಾಲ್ಕು ದಿನಗಳ ಜಾತ್ರಾ ಮಹೋತ್ಸವದಲ್ಲಿ ಎಲ್ಲಾ ಸಮುದಾಯಗಳ ಜನರು ಭಾಗವಹಿಸಿ, ದೇವಿಯ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರವೀಶ್ ಜಹಂಗೀರ್,ಅಗ್ನಿಕುಲ ತಿಗಳ ಜನಾಂಗದ ಕಾರ್ಯದರ್ಶಿ ಟಿ.ಎನ್.ಶಿವಣ್ಣ, ಉಪಾಧ್ಯಕ್ಷರಾದ ರಾಮಣ್ಣ,ಪ್ರೊ.ಅಂಜನಪ್ಪ,ಟಿ.ಎಲ್.ಕುAಭಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.