ಶ್ರೀದೇವಿ ನರ್ಸಿಂಗ್ ಮತ್ತು ಶ್ರೀ ರಮಣಮಹರ್ಷಿ ನರ್ಸಿಂಗ್, ಶ್ರೀದುರ್ಗಾಂಬಾ ಸ್ಕೂಲ್ ಆಫ್ ನರ್ಸಿಂಗ್
ಪ್ರಥಮ ವರ್ಷದ ಬಿ.ಎಸ್ಸಿ, ಡಿಪ್ಲೋಮ ವಿದ್ಯಾರ್ಥಿಗಳಿಗೆ ದೀಪ ಬೆಳಗಿಸುವ ಸಮಾರಂಭ
ನರ್ಸಿಂಗ್ ವಿದ್ಯಾರ್ಥಿಗಳು ಉತ್ತಮ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು : ಡಾ.ಎಸ್.ಆರ್.ಗಜೇಂದ್ರಸಿAಗ್
ತುಮಕೂರು:
ನರ್ಸಿಂಗ್ ವಿದ್ಯಾರ್ಥಿಗಳಿಗೆ ಜ್ಯೋತಿ ಬೆಳಗಿಸುವುದರ ಹಿಂದಿನ ಮಹತ್ವವನ್ನು ತಿಳಿಸುತ್ತಾ, ಪ್ರಸ್ತುತ ಆರೋಗ್ಯದ ಕ್ಷೇತ್ರದಲ್ಲಿ ಬದಲಾವಣೆಯಾಗುತ್ತಿದ್ದು, ವೃತ್ತಿಪರದಲ್ಲಿ ನರ್ಸಿಂಗ್ ಕ್ಷೇತ್ರ ಉತ್ತಮವಾಗುತ್ತದೆ, ನರ್ಸಿಂಗ್ ವಿದ್ಯಾರ್ಥಿಗಳು ಉತ್ತಮ ಶುಶ್ರೂಷಕರಾಗಲು ಅಗತ್ಯವಾದ ಗುಣಗಳನ್ನು ಬೆಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿ ಬೆಂಗಳೂರಿನ ಆರ್.ವಿ.ಕಾಲೇಜು ಪ್ರಾಂಶುಪಾಲರಾದ ಹಾಗೂ ಬಿ.ಓ.ಎಸ್. ಅಧ್ಯಕ್ಷರು ಆರ್ಜಿಯುಹೆಚ್ಎಸ್ ಡಾ.ಎಸ್.ಆರ್. ಗಜೇಂದ್ರಸಿAಗ್ರವರು ತಿಳಿಸಿದರು.

ನಗರದ ಶಿರಾರಸ್ತೆಯ ಶ್ರೀದೇವಿ ನರ್ಸಿಂಗ್ ಕಾಲೇಜು ಹಾಗೂ ಶ್ರೀ ರಮಣಮಹರ್ಷಿ ನರ್ಸಿಂಗ್ ಕಾಲೇಜು, ಶ್ರೀದುಗಾಂಬಾ ಸ್ಕೂಲ್ ಆಫ್ ನರ್ಸಿಂಗ್ ೨೦೨೩ ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ನರ್ಸಿಂಗ್ ಮತ್ತು ಬಿ.ಎಸ್ಸಿ. ನರ್ಸಿಂಗ್ ವಿದ್ಯಾರ್ಥಿಗಳಿಗೆ ಜ್ಯೋತಿ ಬೆಳಗಿಸುವ ಹಾಗೂ ಪ್ರತಿಜ್ಞಾ ವಿಧಿ ಬೋಧಿಸುವ ಸಮಾರಂಭವನ್ನು ಮೇ.೧೨ ರಂದು ಬೆಳಿಗ್ಗೆ ೧೦ ಗಂಟೆಗೆ ಶ್ರೀದೇವಿ ನರ್ಸಿಂಗ್ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.