ಪ್ರಸ್ತುತ ವ್ಯವಸ್ಥೆಯಲ್ಲಿ ಉನ್ನತ ಶಿಕ್ಷಣದ ವ್ಯಾಸಂಗಗಳಾದ ವೈದ್ಯಕೀಯ, ಇಂಜಿನಿಯರಿoಗ್ ಮತ್ತು ಇತರೆ ವೃತ್ತಿಪರ ಶಿಕ್ಷಣವು ಸಮಾಜದ ಎಲ್ಲಾ ವರ್ಗಗಳಿಗೂ ತಲುಪಿ ಪ್ರತಿಭಾವಂತರಿದ್ದೂ, ಆರ್ಥಿಕ ಚೈತನ್ಯವಿಲ್ಲದ ಮಕ್ಕಳು ಉತ್ತಮ ಶಿಕ್ಷಣದಿಂದ ಸಬಲರಾಗಬೇಕೆಂದು ಶ್ರೀದೇವಿ ಇಂಜಿನಿಯರಿoಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ನರೇಂದ್ರ ವಿಶ್ವನಾಥ್ರವರು ತಿಳಿಸಿದರು.
ನಗರದ ಶಿರಾರಸ್ತೆಯ ಶ್ರೀದೇವಿ ಇಂಜಿನಿಯರಿoಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ವತಿಯಿಂದ ಮೇ.19 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಶ್ರೀದೇವಿ ಇಂಜಿನಿಯರಿoಗ್ ಕಾಲೇಜಿನಲ್ಲಿ ಪಿ.ಯು.ಸಿ. ಉತ್ತೀರ್ಣರಾಗಿ ಬಿ.ಇ. ಪ್ರವೇಶಾತಿ ಬಯಸುತ್ತಿರುವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಪ್ರವೇಶಾತಿ ಮತ್ತು ವಿದ್ಯಾರ್ಥಿ ವೇತನ ಪರೀಕ್ಷೆ-2024 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ ಕಾಲೇಜು ಕಳೆದ ಹತ್ತು ವರ್ಷಗಳಿಂದಲೂ ಸ್ಕಾಲರ್ಶಿಪ್ ಟೆಸ್ಟ್ ನಡೆಸುತ್ತಿದ್ದು, ಈವರೆವಿಗೂ ಹಲವಾರು ವಿದ್ಯಾರ್ಥಿಗಳು ಉಚಿತವಾಗಿ ಪ್ರತಿ ವಿಭಾಗದಲ್ಲೂ ಸೀಟುಗಳನ್ನು ಪಡೆದುಕೊಳ್ಳುತ್ತಿದ್ದು ಹಲವಾರು ಪ್ರತಿಭಾವಂತ ಗ್ರಾಮೀಣ ಭಾಗದ ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡಿದ್ದಾರೆoದು ತಿಳಿಸಿದರು.
ನಂತರ ನಡೆದ ಪ್ರವೇಶಾತಿ ಪರೀಕ್ಷೆಯಲ್ಲಿ ಸುಮಾರು 400 ವಿದ್ಯಾರ್ಥಿಗಳು ಭಾಗವಹಿಸಿದ್ದು ಎಲ್ಲಾ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿ ಅಂದೇ ಫಲಿತಾಂಶದ ರ್ಯಾಂಕಿoಗ್ಗಳನ್ನು ಪ್ರಕಟಿಸಲಾಯಿತು. ಪ್ರಥಮ 20 ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ರ್ಯಾಂಕ್ ಪ್ರಮಾಣ ಪತ್ರಗಳನ್ನು ವಿತರಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ 4,00,000 ರೂಗಳಿಂದ 1,00,000 ರೂಗಳ ಸ್ಕಾಲರ್ಶಿಫ್ ಸೌಲಭ್ಯ ಪ್ರಕಟಿಸಲಾಯಿತು. ಮತ್ತು ಮುಂದಿನ ಒಂದು ವಾರದೊಳಗೆ ಪ್ರವೇಶಾತಿ ಪಡೆದುಕೊಳ್ಳುವ ಆಕಾಂಕ್ಷಿಗಳಿಗೆ ವಿಶೇಷವಾಗಿ ಸ್ಕಿಲ್ಲ್ಯಾಬ್ ಶುಲ್ಕವಾದ 10,000 ರೂಗಳ ಉಚಿತ ಸೌಲಭ್ಯ ಪ್ರಕಟಿಸಲಾಯಿತು. ಸುಮಾರು 600 ವಿದ್ಯಾರ್ಥಿಗಳು ಮತ್ತು ಪೋಷಕರು ಈ ಪ್ರಕ್ರಿಯೆಯಲ್ಲಿ ಪಾಲ್ಲೊಂಡಿದ್ದರು.
ಶ್ರೀದೇವಿ ಇಂಜಿನಿಯರಿoಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಟೆಸ್ಟ್ -2024

Leave a comment
Leave a comment