ದೇಶದಲ್ಲಿ ಪ್ರಸ್ತುತ ಜನಸಂಖ್ಯೆಯ ಶೇ.೬೦% ಕ್ಕೂ ಹೆಚ್ಚು ಯುವ ಜನಾಂಗವೇ ಇದ್ದು ಭಾರತವು ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈಯಲು ಈ ಯುವ ಜನಾಂಗವೇ ಶಕ್ತಿಯಾಗಿರುವುದರಿಂದ ಯುವಕ-ಯುವತಿಯರು ತಮ್ಮ ಮನಸು ಮತ್ತು ಕಾಯಗಳ ಸಮ್ಮಿಲನದಿಂದ ಉತ್ತಮ ದೇಹದಾರ್ಢ್ಯತೆ ಹೊಂದಿದರೆ ಶ್ರೇಷ್ಠ ಸಾಧನೆಗಳು ಸಾಧ್ಯವಾಗುತ್ತವೆಯೆಂದು ಅಂತರಾಷ್ಟಿçÃಯ ಕಬಡ್ಡಿ ಕ್ರೀಡಾಪಟು ಮಹಮ್ಮದ್ ಇಸ್ಮಾಯಿಲ್ರವರು ನುಡಿದರು.
ನಗರದ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ದಿನಾಚರಣೆ ಶ್ರೀ ಉತ್ಸವ-೨೦೨೩ ಮೇ.೨ರಂದು ಶುಕ್ರವಾರ ಬೆಳಿಗ್ಗೆ ೧೧ ಗಂಟೆಗೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು ಯಾವುದೇ ವಿಜ್ಞಾನಿಗಳು, ಕ್ರೀಡಾಪಟುಗಳು, ಗುರುಗಳು, ಸಾಹಿತಿಗಳು ಸಾಮಾನ್ಯವಾಗಿ ತಮ್ಮ ಯುವ ಜೀವನದ ಕಾಲದಲ್ಲಿ ಕೈಗೊಂಡ ಕ್ರಿಯೆಗಳು, ಸಂಶೋಧನೆಗಳು ತದ ನಂತರದಲ್ಲಿ ಶ್ರೇಷ್ಠ ಸಾಧನೆಗಳಾಗಿ ದಾಖಲಾಗಿರುತ್ತವೆಯೆಂದ ಅವರು ಯುವ ಜನಾಂಗ ಪದವಿ ಶಿಕ್ಷಣದ ಮತ್ತು ನಂತರದಲ್ಲಿ ಸಮಯವ್ಯರ್ಥ ಮಾಡದೆ ಜೀವನದ ಅರ್ಥಪೂರ್ಣ ಗುರಿಯತ್ತ ಗಮನವಿಟ್ಟು ಸಾಧನೆ ಕೈಗೊಳ್ಳಬೇಕಾದ ಅವಶ್ಯಕತೆಯನ್ನು ವಿವರಿಸಿ ಉತ್ತಮ ಜೀವನಕ್ಕೆ ವ್ಯಾಯಾಮ, ಕ್ರೀಡೆ, ಕಲೆಯಂತಹ ಆರೋಗ್ಯಕರ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಛಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ರವರು ಮಾತನಾಡುತ್ತಾ ವಿದ್ಯಾರ್ಥಿ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದರು.
ಸಮಾರಂಭದ ಗೌರವಾನ್ವಿತ ಅತಿಥಿಗಳಾಗಿದ್ದ ಶ್ರೀದೇವಿ ಛಾರಿಟಬಲ್ ಟ್ರಸ್ಟ್ನ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕರಾದ ಎಂ.ಎಸ್.ಪಾಟೀಲ್ರವರು ಮಾತನಾಡುತ್ತಾ ಸಮಾಜದ ಹಲವಾರು ಸಮಸ್ಯೆಗಳಿಗೆ ಸುಲಭವಾದ ಮತ್ತು ಸುಗಮವಾದ ಪರಿಹಾರ ದೊರಕಿಸಿಕೊಡುವುದೇ ಇಂಜಿನಿಯರಿAಗ್ ಶಿಕ್ಷಣದ ಮುಖ್ಯ ಉದ್ದೇಶವಾಗಿದ್ದು, ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ನಿಗದಿತ ಪಠ್ಯಕ್ರಮದೊಂದಿಗೆ ಇತರೆ ಕೌಶಲ್ಯಗಳು ಮತ್ತು ಹೊರಪ್ರಪಂಚದ ಸಾಂಸ್ಥಿಕ ಅನುಭವಗಳನ್ನು ಪಡೆದುಕೊಂಡು ಉತ್ತಮವಾದ ಆಟೋಟಗಳು, ಸಂಗೀತ, ಕಲೆಗಳಲ್ಲಿ ಅಭಿರುಚಿ ಬೆಳೆಸಿಕೊಂಡು ಪರಿಪೂರ್ಣ ವ್ಯಕ್ತಿತ್ವ ಹೊಂದಲೆAದು ತಿಳಿಸಿ ಈ ನಿಟ್ಟಿನಲ್ಲಿ ಕಾಲೇಜಿನಲ್ಲಿ ಸಂಪೂರ್ಣ ಪ್ರಮಾಣದಲ್ಲಿ ಚಟುವಟಿಕೆಗಳನ್ನು ಕೈಗೊಳ್ಳಲು ಸಕಲ ಸೌಲಭ್ಯಗಳನ್ನು ಒದಗಿಸಲಾಗಿದೆಯೆಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿದ್ದ ಶ್ರೀದೇವಿ ವೈದ್ಯಕೀಯ ಕಾಲೇಜಿನ ನಿರ್ದೇಶಕರಾದ ಡಾ.ರಮಣ್ ಹುಲಿನಾಯ್ಕರ್ರವರು ಮಾತನಾಡುತ್ತಾ ಶ್ರೀದೇವಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡಲಾಗಿದ್ದು ವಿದ್ಯಾರ್ಥಿಗಳು ವ್ಯಾಸಂಗ ಮತ್ತು ಕಲಿಕೆಯೇತರ ಚಟುವಟಿಕೆಗಳೆರಡರಲ್ಲೂ ಹೆಚ್ಚಿನ ಸಾಧನೆ ಮಾಡುತ್ತಿರುವುದು ಶ್ಲಾಘನೀಯವೆಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ನರೇಂದ್ರವಿಶ್ವನಾಥ್ರವರು ಮಾತನಾಡುತ್ತಾ ವಾರ್ಷಿಕ ವರದಿ ಮಂಡಿಸಿ ವಿದ್ಯಾರ್ಥಿಗಳ ಉತ್ತಮ ಪಾಲ್ಗೊಳುವಿಕೆಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ವಾಲಿಬಾಲ್ ಮತ್ತು ಕ್ರಿಕೆಟ್ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದ ಮುಖ್ಯಸಂಯೋಜಕರಾದ ಪ್ರೊ.ಬಿ.ಎನ್.ಪ್ರತಾಪ್ರವರು ಸ್ವಾಗತಿಸಿದರು, ದೀಪಾ ಆರಾಧ್ಯಮಠ ಪ್ರಾರ್ಥಿಸಿದರು. ಪ್ರೊ.ಜಿ.ಎಂ.ಕಿರಣ್ರವರು ವಂದಿಸಿದರು.
ಶ್ರೀದೇವಿ ಟ್ರಸ್ಟಿಗಳಾದ ಡಾ.ಲಾವಣ್ಯ, ಅಂಬಿಕಾ ಎಂ ಹುಲಿನಾಯ್ಕರ್, ಆಡಳಿತಾಧಿಕಾರಿಯಾದ ಟಿ.ವಿ.ಬ್ರಹ್ಮದೇವಯ್ಯ ಹಾಗೂ ವಿವಿಧ ವಿಭಾಗಗಳಾದ ಮುಖ್ಯಸ್ಥರಾದ ಡಾ. ಕೆ.ಎಸ್.ರಾಮಕೃಷ್ಣ, ಡಾ.ಸಿ.ನಾಗರಾಜ, ಡಾ.ಎನ್.ಚಂದ್ರಶೇಖರ್, ಡಾ.ಬಸವೇಶ್, ಪ್ರೊ.ಸಿ.ವಿ.ಷಣ್ಮುಖಸ್ವಾಮಿ, ಪ್ರೊ.ಜಿ.ಮಹೇಶ್ಕುಮಾರ್, ಡಾ.ಕಿಶೋರ್ಕುಮಾರ್, ಪ್ರೊ.ಕೆ.ಪಿ.ಚಂದ್ರಯ್ಯ, ಡಾ.ಪಿ.ಜೆ.ಸದಾಶಿವಯ್ಯ, ಪ್ರೊ.ಐಜಾಜ್ ಅಹಮದ್ ಷರೀಫ್, ಪ್ರೊ.ಜಿ.ಹೆಚ್.ರವಿಕುಮಾರ್ ಮುಂತಾದವರು ಭಾಗವಹಿಸಿದ್ದರು
ಶ್ರೀದೇವಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಶ್ರೀ ಉತ್ಸವ ವಾರ್ಷಿಕೋತ್ಸವ

Leave a comment
Leave a comment