ಶಹಾಬಾದ್ ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶ್ರೀ ಸೌಹಾರ್ದ ಪತ್ತಿನ ಸಹಕಾರ ಸಂಘದ ದಶಮಾನೋತ್ಸವ ಕಾರ್ಯಕ್ರಮ ಜರಗಿತು.
ಸಂಘದ ಅಧ್ಯಕ್ಷರಾದ ಡಾಕ್ಟರ್ ವಿಶ್ವನಾಥ್ ಬೆಲ್ಲದ್ ಮಾತನಾಡಿ 10 ವರ್ಷದ ಯಶಸ್ವಿಯಾಗಿ ಮುನ್ನಡೆಯಲು ನಿರ್ದೇಶಕರು ಸದಸ್ಯರು ಮತ್ತು ಎಲ್ಲಾ ಸಂಘದ ಪದಾಧಿಕಾರಿಗಳು ಶ್ರಮವಹಿಸಿದ್ದಾರೆ ಅವರೆಲ್ಲರಿಗೂ ಧನ್ಯವಾದಗಳು ಹೇಳಿದರು.
ಬಡವರು ಕಾರ್ಮಿಕರು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವಂತಹ ನಮ್ಮ ಊರಿನ ಜನರಿಗೆ ನಮ್ಮ ಸಂಘವು ತುಂಬಾ ಸಹಕಾರಿಯಾಗಿದೆ, ಇದೇ ರೀತಿ ತಾಲೂಕ ಮಟ್ಟದಲ್ಲಿ ಕೂಡ ನಾವು ಮುಂದಿನ ದಿನಗಳಲ್ಲಿ ಸಹಕಾರಿ ಸಂಘವನ್ನು ಬೆಳೆಸುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಅತಿಯಾಗಿ ಆಗಮಿಸಿದ ಸುಭಾಷ್ ಚಂದ್ರ ಎಸ್ ಬರ್ಮ ಉಪನಿರ್ದೇಶಕರು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಕಲ್ಬುರ್ಗಿ ಇವರು ಮಾತನಾಡಿ ಸಹಕಾರ ಸಂಘಗಳು ಸಾಲ ವಿತರಣಾ ಮತ್ತು ವಸೂಲಾತಿ ಉತ್ತಮವಾಗಿ ನಡೆಸಬೇಕು ಮತ್ತು ಸದಸ್ಯರ ನೋಂದಣಿಯನ್ನು ಹೆಚ್ಚಿಸಿಕೊಂಡು ಮುಂಬರುವ ದಿನಗಳಲ್ಲಿ ಹೆಮ್ಮರವಾಗಿ ಬೆಳೆಯಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವೇದಿಕೆ ಮೇಲೆ ಸೂರ್ಯಕಾಂತ್ ರಾಕಲೆ, ರವೀಂದ್ರ ಸರ್, ಡಾಕ್ಟರ್ ಅಹಮದ್ ಪಟೇಲ್, ಶಶಿಕಲಾ ಪಾಟೀಲ್, ಬಸವರಾಜ್ ಮುದ್ರಿಕೆ, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಲಾಭಾಂಶದ ಚೆಕ್ ಗಳು ಮತ್ತು ನೂತನ ಕ್ಯಾಲೆಂಡರ್ ಗಳು ವಿತರಿಸಿ ಸನ್ಮಾನಿಸಿದರು, ಸಂಘದ ಉಪಾಧ್ಯಕ್ಷರಾದ ಬಾಬು ಬಿ ಪವರ್ ನಿರ್ದೇಶಕರಾದ ಎಲ್ಲಪ್ಪ ಬಾಂಬೆ, ಶಂಕರ್ ದಂಡಗೂಲ್ಕರ್ ನರಸಪ್ಪ ಕೆ ಮನೆ, ಬಸವರಾಜ್ ಅಲ್ಲಿಪುರ್, ರೇಷ್ಮಾ ಇಬ್ರಾಹಿಂಪುರ್, ತಿಮ್ಮಯ್ಯ ಬಿ ಮನೆ, ಶರಣಪ್ಪ ಎಸ್ ಸನಾದಿ ವೀರೇಶ್ ಮಾಲಿ ಪಾಟೀಲ್, ಕಾನೂನು ಸಲಹೆಗಾರರ ತಿಮ್ಮಯ್ಯ ಹೆಚ್ ಮನೆ ಹಾಗೂ ಕಾರ್ಯನಿರ್ವಾಹಕರಾದ ರಾಘವೇಂದ್ರ ಗುರುಜಾಲಕರ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು .