ತುಮಕೂರು : ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಳೇಜಿನ ಮಹಿಳಾ ವಾಲಿಬಾಲ್ ತಂಡವು ಸೌತ್ ಇಂಡಿಯನ್ ವುಮೆನ್ ವಾಲಿಬಾಲ್ ಕ್ರೀಡಾಕೂಟದಲ್ಲಿ ಪ್ರಥಮ ಹಾಗೂ ೧೦೦ಮೀ ಮತ್ತು ೪೦೦ಮೀ ಓಟದಲ್ಲಿ ಪ್ರಥಮ ಸ್ಥಾನಗಳಿಸಿ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಪಂದ್ಯಾವಳೀಯಲ್ಲಿ ಹರ್ಷಿತಾ ಗೌಡ ನೇತೃತ್ವದ ಮಹಿಳಾ ವಾಲಿಬಾಲ್ ತಂಡವು ಪ್ರಥಮ ಸ್ಥಾನಗಳಿಸಿದ್ದಾರೆ. ಬೇಂಜ್ ಟಾಮ್ ವಿದ್ಯಾರ್ಥಿಯು ೧೦೦ಮೀ ಮತ್ತು ೪೦೦ಮೀ ಓಟದಲ್ಲಿ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕಕ್ಕೆ ಕೊರಳು ನೀಡಿದ್ದಾರೆ. ಕಾಲೇಜಿನ ಕ್ರೀಡಾ ಸಂಘಟನೆಯ ಸಹಕಾರ್ಯದರ್ಶಿ ಡಾ.ಚಂದ್ರಶೇಖರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಶಶಿಕುಮಾರ್ ಕೆ. ಅವರ ನಾಯಕತ್ವದಲ್ಲಿ ತಂಡ ಗೆಲುವು ಸಾಧಿಸಿದೆ.
ಗೆಲವು ಸಾಧಿಸಿದ ತಂಡಕ್ಕೆ ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ಸಾಹೇ ರಿಜಿಸ್ಟಾçರ್ ಡಾ.ಎಂ.ಝೆಡ್ ಕುರಿಯನ್, ಡಾ.ವೇಂಕಟೇಶ್, ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಭಾಕರ್, ಉಪ ಪ್ರಾಂಶುಪಾಲರಾದ ಡಾ.ಮಂಜುನಾಥ, ಡಾ.ನಂದಿನಿ ಸೇರಿದಂತೆ ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿದರು.
ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಳೇಜಿನ ಮಹಿಳಾ ವಾಲಿಬಾಲ್ ತಂಡ
Leave a comment
Leave a comment