ತುಮಕೂರು:ಸದಾ ಒತ್ತಡದಲ್ಲಿ ಕೆಲಸ ಮಾಡುವ ಶಿಕ್ಷಕ ಬಂಧುಗಳಿಗೆ,ಕೆಲಸದ ಒತ್ತಡದಿಂದ ಹೊರಬರಲು ಕ್ರೀಡೆ ಸಹಕಾರಿಯಾಗಲಿದೆ ಎಂದು ತುಮಕೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಸೂರ್ಯಕಲಾ ತಿಳಿಸಿದ್ದಾರೆ.
ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆ,ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ(ರಿ೦, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಹಾಗೂ ಉಪ ಪ್ರಾಂಶುಪಾಲರ ಸಂಘವತಿಯಿAದ ಸೆಪ್ಟಂಬರ್ ೫ರ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಸೋಲು, ಗೆಲುವು ಎರಡನ್ನು ಸಮಾನವಾಗಿ ಸ್ಪೀಕರಿಸಲು ಕ್ರೀಡೆ ಸಹಕಾರಿಯಾಗಲಿದೆ. ಹಾಗಾಗಿ ಶಿಕ್ಷಕರು ತಮ್ಮ ಬಿಡುವಿನ ಸಮಯದಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಾವು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ,ಮಕ್ಕಳಲ್ಲಿಯೂ ಕ್ರೀಡಾ ಮನೋಭಾವನೆ ಬೆಳೆಸುವಂತೆ ಸಲಹ ನೀಡಿದರು.
ನಾನು ಸಹ ಸ್ವತಃ ಕ್ರೀಡಾಪಟು,ಇದೇ ಕ್ರೀಡಾಂಗಣದಲ್ಲಿ ೧೧ ವರ್ಷದವಳಿದ್ದಾಗ, ಅಥ್ಲೇಟಿಕನಲ್ಲಿ ಏಷ್ಯನ್ ಗೇಮ್ಸ್ನಲ್ಲಿ ದೇಶವನ್ನು ಪ್ರತಿನಿಧಿಸಿದ್ದೆ. ಅನೇಕ ದೈಹಿಕ ಶಿಕ್ಷಕರು, ಕೋರ್ಚ್ಗಳು ನನಗೆ ಅಂದು ಸಹಕಾರ ನೀಡಿದ್ದರು.ಇಂದು ಅವರೆಲ್ಲರನ್ನು ನೆನಪು ಮಾಡಿಕೊಳ್ಳುತ್ತೇನೆ.ಅಭ್ಯಾಸವಿಲ್ಲದೆ ಕ್ರೀಡೆಯಲ್ಲಿ ಸ್ಪರ್ಧಿಸಲು ಬಂದಿರುವ ಶಿಕ್ಷಕರು ಎಚ್ಚರಿಕೆಯಿಂದ ಆಟವಾಡಿ,ನಿರಂತರ ಅಭ್ಯಾಸದಲ್ಲಿ ತೊಡಗಿದ್ದರೆ ಸಮಸ್ಯೆಯಾಗದು.ಸಾವಿನ ಕೊನೆಯವರೆಗೆ ಲವಲವಿಕೆಯಿಂದ ಬದುಕುಬೇಕೆಂದರೆ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ ಹಾಗೂ ಕ್ರೀಡಾಸ್ಪೂರ್ತಿಯನ್ನು ಬೆಳೆಸಿಕೊಳ್ಳಿ ಎಂದು ಬಿಇಓ ಡಾ.ಸೂರ್ಯಕಲಾ ಶುಭ ಹಾರೈಸಿದರು.
ಕ್ರೀಡಾಕೂಟ ಉದ್ಘಾಟಿಸಿದ ಶಿಕ್ಷಣಾಧಿಕಾರಿ ವಿ.ಮಾಧವರೆಡ್ಡಿ ಮಾತನಾಡಿ,ಇಂತಹ ಕ್ರೀಡಾಕೂಟಗಳು ನಮಗೆ ಬಾಲ್ಯವನ್ನು ನೆನಪಿಸುತ್ತೇವೆ.ಕೇವಲ ಸ್ಪರ್ಧೆಗಳ ಇದ್ದ ಸಂದರ್ಭದಲ್ಲಿ ಅಭ್ಯಾಸ ಮಾಡುವುದಕ್ಕೆ ಬದಲಾಗಿದೆ ನಿರಂತರವಾಗಿ ಕ್ರೀಡಾ ಚಟುವಟಿಕೆ ಯಲ್ಲಿ ತೊಡಗುವುದರಿಂದ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಬಹುದು.ಮೆಡಿಕಲ್ ಶಾಫ್ಗಳಲ್ಲಿ ಸಿಗದ ಯಾವುದಾದರು ಔಷಧಿ ಎಂದರೆ ಅದು ನಗು,ನಗು ನಗುತಾ ಎಲ್ಲವನ್ನು ಸ್ಪೀಕರಿಸುವ ಕ್ರೀಡಾ ಮನೋಭಾವನೆಯನ್ನು ನಾವೆಲ್ಲರೂ ಬೆಳೆಸಿಕೊಂಡರೆ,ವೃತ್ತಿ ಜೀವನ ಮತ್ತು ವಯುಕ್ತಿಕ ಜೀವನದಲ್ಲಿ ಬರುವ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದರು.
ಕಾAಗ್ರೆಸ್ ಯುವ ಮುಖಂಡ ಶಶಿ ಹುಲಿಕುಂಟೆ ಮಠ್ ಮಾತನಾಡಿ,ಶಿಕ್ಷಕರಿಗೆ ಕ್ರೀಡಾಚಟುವಟಿಕೆ ಎಂಬುದು ಒಂದು ಅದ್ಬುತ ವೇದಿಕೆ. ಇತ್ತೀಚಗೆ ಸರಕಾರದ ಮುಂದೆ ಮಕ್ಕಳಿಗೆ ದೈಹಿಕ ಚುಟವಟಿಕೆಯ ಜೊತೆಗೆ, ಶಿಕ್ಷಕರಿಗೆ ಕ್ರೀಡಾ ಚಟುವಟೆಕೆಗೆ ಒತ್ತು ನೀಡುವಂತೆ ಶಿಕ್ಷಕರ ಸಂಘದ ಮನವಿ ಮಾಡಿರುವುದನ್ನು ನಾವು ಕಾಣಬಹುದು.ಆದರೆ ಅಂಕಗಳ ಗಳಿಕೆ ಒತ್ತಡದಲ್ಲಿ ಮಕ್ಕಳು ಕ್ರೀಡೆಯ ಕಡೆಗೆ ಗಮನಹರಿಸುವುದೇ ಕಡಿಮೆಯಾಗಿದೆ.ಇದರಿಂದ ದೈಹಿಕವಾಗಿ ಕುಗ್ಗುವ ಸಾಧ್ಯತೆ ಹೆಚ್ಚು. ದೈಹಿಕ ಸಮತೋಲನಕ್ಕೆ ಕ್ರೀಡೆ ಅತ್ಯಗತ್ಯ ಎಂದರು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಹನುಮೇಶ್ ಮಾತನಾಡಿ,ಸದಾ ಬೋಧನ, ಪಾಠೋಪಕರಣ,ಮೌಲ್ಯಮಾಪನ ದಂತಹ ಒತ್ತಡದ ಕೆಲಸಗಳಲ್ಲಿ ತೊಡಗುವ ಶಿಕ್ಷಕರಿಗೆ ಕ್ರೀಡಾಕೂಟ ಬಹಳ ಉಪಯುಕ್ತ ವಾಗಲಿದೆ.ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ವಿಸ್ತರಿಸಿದರೆ ಹೆಚ್ಚು ಅನುಕೂಲವಾಗಲಿದೆ ಎಂದರು.
ತುಮಕೂರು ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ನಿರ್ದೆಶಕ ಶ್ರೀಕಾಂತ್ ಚಲವಾದಿ ಪ್ರಾಸ್ತಾವಿಕ ನುಡಿಗಳನ್ನಾ ಡಿದರು.ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಿ.ಹೆಚ್.ಲೋಕೇಶ್ ರೆಡ್ಡಿ,ಡಿವೈಪಿಸಿ ರಂಗಧಾಮಪ್ಪ,ಜಿಲ್ಲಾ ಮುಖ್ಯೋಪಾಧ್ಯಾಯರ ಮತ್ತು ಉಪಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಕೆ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಆರ್.ಹನುಮೇಶ್ ,ಕಾರ್ಯದರ್ಶಿ ಮಂಜುನಾಥ್, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್,ಕಾರ್ಯದರ್ಶಿ ಸುರೇಶ್ ಅವರುಗಳು ಮಾತನಾಡಿದರು.
ಕೆಲಸದ ಒತ್ತಡದಿಂದ ಹೊರಬರಲು ಕ್ರೀಡೆ ಸಹಕಾರಿಯಾಗಲಿದೆ
Leave a comment
Leave a comment