ಕ್ರೀಡೆ ಮನೋವಿಕಾಸದ ಬೆಳಕು: ಪ್ರೊ. ಎಂ. ವೆಂಕಟೇಶ್ವರಲು
೨೦೨೩-೨೪ನೇ ಸಾಲಿನ ಸ್ನಾತಕೋತ್ತರ ಅಂತರ ವಿಭಾಗಗಳ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣಾ ಸಮಾರಂಭ
ತುಮಕೂರು: ಕ್ರೀಡೆ ದೈಹಿಕ ಆರೋಗ್ಯದ ಜೊತೆಗೆ ಮನೋವಿಕಾಸದ ಬೆಳಕು. ಸಕಾರಾತ್ಮಕ ಆಲೋಚನೆಗಳಿಂದ ಸುಂದರ ಬದುಕನ್ನು ರೂಪಿಸಿಕೊಳ್ಳಲು ಕ್ರೀಡೆ ಪ್ರೇರೇಪಿಸುತ್ತದೆ. ಸವಾಲನ್ನು ಎದುರಿಸುವ, ಸ್ಪರ್ಧೆಯನ್ನು ಆಹ್ವಾನಿಸುವ ಮನೋಭಾವ ಯುವಜನರಲ್ಲಿ ಬರಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಹಾಕಿ ಮಾಂತ್ರಿಕ, ಭಾರತರತ್ನ ಮೇಜರ್ ಧ್ಯಾನ್ಚಂದ್ ಜನ್ಮದಿನೋತ್ಸವ ಪ್ರಯುಕ್ತ ರಾಷ್ಟಿçÃಯ ಕ್ರೀಡಾ ದಿನಾಚರಣೆ ಹಾಗೂ ೨೦೨೩-೨೪ನೇ ಸಾಲಿನ ಸ್ನಾತಕೋತ್ತರ ಅಂತರ ವಿಭಾಗಗಳ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಈ ಸಾಲಿನಿಂದ ತುಮಕೂರು ವಿವಿಯ ವಾರ್ಷಿಕ ಕ್ರೀಡಾ ಬಜೆಟ್ ೧ ಕೋಟಿ ೪೦ ಲಕ್ಷಕ್ಕೆ ಏರಿದೆ. ನಮ್ಮ ವಿವಿಯ, ವಿವಿಗೆ ಒಳಪಡುವ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಇನ್ನಷ್ಟು ಆಸಕ್ತಿ ತೋರಿಸಿ, ಭಾರತವನ್ನು ಪ್ರತಿನಿಧಿಸುವ ಮಟ್ಟಕ್ಕೆ ಬೆಳೆದರೆ ಬಜೆಟ್ನ ಮೌಲ್ಯವನ್ನು ಮತ್ತಷ್ಟು ಏರಿಸುವ ಆಲೋಚನೆಯಿದೆ. ವಿದ್ಯಾರ್ಥಿಗಳಲ್ಲಿ ಗೆಲ್ಲುವ ಆತ್ಮವಿಶ್ವಾಸ ಬೆಳೆದಷ್ಟೂ ಭಾರತದ ಗೆಲುವು ನಿರಂತರ ಎಂದು ತಿಳಿಸಿದರು.
ಸಮಯಕ್ಕೆ ಬೆಲೆ ಕೊಡುವವನು ಸಾಧಿಸುತ್ತಾನೆ. ಬದುಕಿಗೆ ಬೆಲೆ ಕೊಡುವವನು ಇತಿಹಾಸ ನಿರ್ಮಿಸುತ್ತಾನೆ. ಭಾರತ ಅನ್ವೇಷಣೆ, ತಂತ್ರಜ್ಞಾನ, ಕ್ರೀಡೆಯಲ್ಲಿ ಪ್ರಪಂಚದ ಅಗ್ರಗಣ್ಯ ಸ್ಥಾನದಲ್ಲಿ ಇಂದು ನಿಲ್ಲಬೇಕಾದರೆ ಭಾರತದ ಶಕ್ತಿಯ ಬಗ್ಗೆ ಹೆಮ್ಮೆಪಡಬೇಕು. ಆ ಶಕ್ತಿ ಯುವಕರಲ್ಲಿದೆ. ಕ್ರೀಡೆ ದೇಹದ ಬಲಿಷ್ಠತೆಯ ಜೊತೆಗೆ ದೇಶದ ಬಲಿಷ್ಠತೆಗೂ ಕಾರಣವಾಗುತ್ತದೆ ಎಂದರು.
ಬೆAಗಳೂರಿನ ಸಮರ್ಥನಂ ಅಂಗವಿಕಲರ ಸಂಸ್ಥೆಯ ಅಂಧರ ಟಿ-೨೦ ವಿಶ್ವಕಪ್ ಕ್ರಿಕೆಟ್ ಪಂದ್ಯ ವಿಜೇತರಲ್ಲೊಬ್ಬರಾದ ಲೋಕೇಶ್ ಹಾಗೂ ಪ್ಯಾರಾ ಓಲಂಪಿಕ್ ವಿಜೇತೆ ಕಾವ್ಯ ಎನ್. ಆರ್. ಅವರಿಗೆ ಗೌರವಿಸಲಾಯಿತು.
೨೦೨೩-೨೪ನೇ ಸಾಲಿನ ಸ್ನಾತಕೋತ್ತರ ಅಂತರ ವಿಭಾಗಗಳ ವಾರ್ಷಿಕ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪುರುಷರ ಏಕವ್ಯಕ್ತಿ ಕ್ರೀಡಾ ಸ್ಪರ್ಧೆಯಲ್ಲಿ ವಿವಿಯ ಎಂಬಿಎ ವಿಭಾಗದ ವಿದ್ಯಾರ್ಥಿ ರೋಹನ್ ಡಿ. ಹಾಗೂ ಮಹಿಳೆಯರ ಏಕವ್ಯಕ್ತಿ ಕ್ರೀಡಾ ಸ್ಪರ್ಧೆಯಲ್ಲಿ ವಿವಿಯ ರಾಜ್ಯಶಾಸ್ತç ವಿಭಾಗದ ವಿದ್ಯಾರ್ಥಿನಿ ಲಾವಣ್ಯ ಎಂ. ಗರಿಷ್ಠ ಪ್ರಶಸ್ತಿ ಪಡೆದುಕೊಂಡು ಸಮಗ್ರ ಛಾಂಪಿಯನ್ಶಿಪ್ ಪ್ರಶಸ್ತಿ ಪಡೆದುಕೊಂಡರು.
ವಿವಿಯ ಸ್ನಾತಕೋತ್ತರ ಭೌತಶಾಸ್ತç ವಿಭಾಗವು ವಿವಿಧ ಸ್ಪರ್ಧೆಗಳಲ್ಲಿ ಗರಿಷ್ಠ ಪ್ರಶಸ್ತಿ ಪಡೆದುಕೊಂಡು ಸಮಗ್ರ ಛಾಂಪಿಯನ್ಶಿಪ್ ಪ್ರಶಸ್ತಿಗೆ ಭಾಜನರಾದರು.
ಕ್ರೀಡಾ ವಿಭಾಗದ ನಿರ್ದೇಶಕ ಡಾ. ಎ. ಎಂ. ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ವಿವಿ ವಿಜ್ಞಾನ ಕಾಲೇಜಿನ ಭೌತಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಚೇತನ್ ಪ್ರತಾಪ್ ಕೆ. ಎನ್. ನಿರೂಪಿಸಿ, ವಂದಿಸಿದರು.