ಅಫಜಲಪುರ ಪಟ್ಟಣದ ಶ್ರೀ ಮಳೇಂದ್ರ ಸಂಸ್ತಾನ ಹಿರೇಮಠದಲ್ಲಿ ಹಮ್ಮಿಕೊಂಡಿರುವ ಶ್ರಾವಣ ಮಾಸದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯ ಕಾರ್ಯಕ್ರಮವನ್ನು ಶ್ರೀ ಷ ಬ್ರ ವಿಶ್ವರಾಧ್ಯ ಮಳೆಂದ್ರ ಶ್ರೀಗಳು ಉದ್ಘಾಟಿಸಿದರು ನಮ್ಮ ಮಕ್ಕಳಲ್ಲಿ ದೇಶ, ನಾಡು,ನುಡಿಯ ಅರಿವು ಮೂಡಿಸಲು ತಾಲೂಕಿನ ವಿವಿಧ ಶಾಲೆ ಕಾಲೇಜುಗಳಿಂದ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು, ಸತ್ಯ ಮೇವ ಜಯತೇ, ನನ್ನ ಕನಸಿನ ಭಾರತ, ಮಾನವ ಧರ್ಮಕ್ಕೆ ಜಯವಾಗಲಿ, ನಮ್ಮ ಕರ್ನಾಟಕ, ಸೇರಿದಂತೆ ಅನೇಕ ವಿಷಯಗಳ ಮೇಲೆ ವಿದ್ಯಾರ್ಥಿಗಳು ಭಾಷಣ ಮಾಡಿದರು.ನಮ್ಮ ದೇಶ ಕಾಯೋ ಸೈನಿಕರು ಮತ್ತು ಅನ್ನ ನೀಡುವ ರೈತರು ನಮ್ಮೆಲ್ಲರ ಎರಡು ಕಣ್ಣುಗಳಿದ್ದಂತೆ ಹಾಗಾಗಿ ನಾವು ಈ ಇಬ್ಬರು ಮಹನೀಯರನ್ನು ಗೌರವದಿಂದ ಕಾಣೋಣ ಎಂದು ಹಲವಾರು ವಿದ್ಯಾರ್ಥಿಗಳು ತಮ್ಮ ಭಾಷಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.ಎಂ ಎ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ರೂಪಾ ತೇಲಿ ಮಾತನಾಡಿ ಸತ್ಯ ವನ್ನು ಅರಿತವನು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗುತ್ತನೆ ಎಂದರು. ತದನಂತರ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು,ಮತ್ತು ಶ್ರೀ ಮಠದಿಂದ ಸಪ್ಟೆಂಬರ್ 9 ರಂದು ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವದು ಎಂದು ಚಂದ್ರ ಶೇಖರ್ ಕರ್ಜಿಗಿ ಹೇಳಿದರು.
ಈ ಸಂದರ್ಭದಲ್ಲಿ
ವಿಜಯಕುಮಾರ ಸಾಲಿಮಠ,ಆನಂದ ಕುಂಬಾರ,ಶಿವಶರಣರಪ್ಪ ಸಾಲೋಟಗಿ,ಖಾಸಿಂ ,ಡಾ ಮಹ್ಮದ್ ಜಾಫರ ಪಟೇಲ್,ಚಂದ್ರಶೇಖರ ಕರಜಗಿ,ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎಸ್.ಪಾಟೀಲ, ಶೈಲೇಶ ಗುಣಾರಿ,ಮೌನೇಶ ಬಡಿಗೇರ,ಲಕ್ಷ್ಮಿ ಪೂತ್ರ ರಾಂಪುರ, ಬಸವರಾಜ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
