ಕಲ್ಬುರ್ಗಿ ಜಿಲ್ಲೆಯ ಅಫಜಪೂರ ತಾಲೂಕಿನ ದೇವಲ ಗಾಣಗಾಪುರದ ಶ್ರೀ ಗುರು ದತ್ತಾ ತ್ರೇಯರಿಗೆ ಮತ್ತು ಸ್ವಯಂಭು ಶನೇಶ್ವರ ದೇವಸ್ಥಾನದಲ್ಲಿ ಕರವೇ ರಾಜ್ಯಧ್ಯಕ್ಷರಾದ ಟಿ.ಎ ನಾರಾಯಣಗೌಡ ಹಾಗೂ ಕಾರ್ಯಕರ್ತರನ್ನು ಅತಿ ಶೀಘ್ರದಲ್ಲಿ ಕಾರ್ಯಗೃಹದಿಂದ ಬಿಡುಗಡೆಯಾಗಿ ಮತ್ತೆ ಕನ್ನಡಾಂಬೆಯ ನಾಡು ನುಡಿ ಸೇವೆಗೆ ಮತ್ತು ಘರ್ಜಿಸುವಂತಾಗಲೆಂದು ಹಾರೈಸುತ್ತಾ ವಿಶೇಷ ಪೂಜೆ ರುದ್ರಾಭಿಷೇಕ ಸಲ್ಲಿಸುವದರ ಮೂಲಕ ಶೀಘ್ರ ಬಿಡುಗಡೆ ಆಗಲೆಂದು ಕರವೇ ಜೇವರ್ಗಿ ತಾಲೂಕು ಅಧ್ಯಕ್ಷರಾದ ಯಲ್ಲಪ್ಪ ಬಂಕಲಗಿ ಹಾಗೂ ಕಾರ್ಯಕರ್ತರು ಬೇಡಿಕೊಂಡರು.
ಈ ಸಂದರ್ಭದಲ್ಲಿ ಕರವೇ ಜೇವರ್ಗಿ ತಾಲೂಕು ಅಧ್ಯಕ್ಷರಾದ ಯಲ್ಲಪ್ಪ ಬಂಕಲಗಿ, ಪ್ರಭಾಕರ್ ಬಂಕಲಗಿ ಕರವೇ ಪದಾಧಿಕಾರಿಗಳು ಮುಖಂಡರು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
ಕರವೇ ಕಾರ್ಯಕರ್ತರಿಂದ ದತ್ತನ ಸನ್ನಿಧಿಯಲ್ಲಿ ವಿಶೇಷ ಪೂಜೆ
Leave a comment
Leave a comment